ರಸ್ತೆ ಬದಿಯೇ ವೃದ್ಧನ ಶವ ಇಳಿಸಿ ಅಮಾನವೀಯತೆ ತೋರಿದ ಚಾಲಕ
ವೃದ್ಧನ ಶವವನ್ನು ರಸ್ತೆಯಲ್ಲೆ ಆ್ಯಂಬುಲೆನ್ಸ್ ಚಾಲಕ ಬಿಟ್ಟು ಹೋಗಿ ಮಾನವೀಯತೆ ಮೆರೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೊನ್ನಾಳಿ (ಆ.14): ಆಸ್ಪತ್ರೆ ದಾರಿಯಲ್ಲಿ ಮೃತಪಟ್ಟಅನಾರೋಗ್ಯಪೀಡಿತ ವೃದ್ಧರೊಬ್ಬರ ಶವವನ್ನು ಆ್ಯಂಬುಲೆನ್ಸ್ ಚಾಲಕ ರಸ್ತೆ ಬದಿಯಲ್ಲೇ ಇಳಿಸಿ ಹೋದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಿಂದ ವರದಿಯಾಗಿದೆ.
"
ಅಂಬ್ಯುಲೆನ್ಸ್ ಚಾಲಕನ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಳಿಜ್ವರದಿಂದ ಬಳಲುತ್ತಿದ್ದ ತಾಲೂಕಿನ ಅರಬಗಟ್ಟೆಗ್ರಾಮದ ನಿವಾಸಿ ದೊಡ್ಡಪ್ಪ (70) ಅವರನ್ನು ಮಂಗಳವಾರ ಹೊನ್ನಾಳಿ ಆಸ್ಪತ್ರೆಗೆ ಕುಟುಂಬದವರು ಚಿಕಿತ್ಸೆಗಾಗಿ ಕರೆ ತಂದಿದ್ದರು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕಳುಸಿದ್ದಾರೆ.
ಚಾಲಕ ಮಾರ್ಗ ಮಧ್ಯೆಯೇ ಬಿಟ್ಟು ಹೋದ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ವೃದ್ಧನ ಶವವನ್ನು ಇನ್ನೊಂದು 108 ಆ್ಯಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ಕಳುಹಿಸಿ ಕೊಟ್ಟರು. ಚಾಲಕನ ವಿರುದ್ಧ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲ್ಯ ಗೆಳೆಯನ ಸಾವಿಗೆ ಬಿಕ್ಕಿ-ಬಿಕ್ಕಿ ಅತ್ತ ಸಚಿವ ರಮೇಶ್ ಜಾರಕಿಹೊಳಿ.
ಮಾದನಬಾವಿ ಗ್ರಾಮದ ಸಮೀಪ ದೊಡ್ಡಪ್ಪ ಮೃತಪಟ್ಟಿದ್ದು, ವಾಹನ ಚಾಲಕ ಶವ ಹಾಗೂ ಜೊತೆಗಿದ್ದವರನ್ನು ಮುಖ್ಯ ರಸ್ತೆ ಪಕ್ಕದಲ್ಲೇ ಇಳಿಸಿ ಹೊರಟು ಹೋಗಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ವೃದ್ಧನ ಶವವನ್ನು ಇನ್ನೊಂದು 108 ಆ್ಯಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ಕಳುಹಿಸಿ ಕೊಟ್ಟರು. ಚಾಲಕನ ವಿರುದ್ಧ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಾಗಿದೆ.