ದೇವೇಗೌಡರನ್ನು ಸದಾ ಸ್ಮರಿಸುವೆ: ಬಸವರಾಜ ಹೊರಟ್ಟಿ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ನಾನು ಎಂದಿಗೂ ಸ್ಮರಿಸುತ್ತೇನೆ. ಆದರೆ, ಹಲವು ಶಿಕ್ಷಕರು ಜೆಡಿಎಸ್‌ ಹೊರತಾಗಿ ಚುನಾವಣೆ ಎದುರಿಸಲು ಆಗ್ರಹ ವ್ಯಕ್ತಪಡಿಸಿದ್ದರಿಂದ ಮತ್ತು ಬಿಜೆಪಿ ಜನರ ಪಕ್ಷವಾಗಿದ್ದರಿಂದ ಬಿಜೆಪಿ ಸೇರಿ ಕಣಕ್ಕಿಳಿದಿದ್ದೇನೆ ಎಂದು ಅಭ್ಯರ್ಥಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

always remembering devegowda said basavaraj horatti in sirsi gvd

ಶಿರಸಿ (ಜೂ.10): ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ನಾನು ಎಂದಿಗೂ ಸ್ಮರಿಸುತ್ತೇನೆ. ಆದರೆ, ಹಲವು ಶಿಕ್ಷಕರು ಜೆಡಿಎಸ್‌ ಹೊರತಾಗಿ ಚುನಾವಣೆ ಎದುರಿಸಲು ಆಗ್ರಹ ವ್ಯಕ್ತಪಡಿಸಿದ್ದರಿಂದ ಮತ್ತು ಬಿಜೆಪಿ ಜನರ ಪಕ್ಷವಾಗಿದ್ದರಿಂದ ಬಿಜೆಪಿ ಸೇರಿ ಕಣಕ್ಕಿಳಿದಿದ್ದೇನೆ ಎಂದು ಅಭ್ಯರ್ಥಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಬೆಳೆದಿದ್ದೇನೆ. 

ಹೆಗಡೆ ಜನತಾ ಪಕ್ಷ ಬಿಟ್ಟು ಲೋಕಶಕ್ತಿ, ಜನತಾ ದಳದಲ್ಲಿದ್ದಾಗಲೂ ಅವರ ಜೊತೆಯಲ್ಲಿಯೇ ಇದ್ದೇನೆ. ಕುಮಾರಸ್ವಾಮಿ ಮತ್ತು ದೇವೇಗೌಡರು ನನ್ನನ್ನು ಆದರ ಪೂರಕವಾಗಿಯೇ ನೋಡಿಕೊಂಡಿದ್ದಾರೆ. ನನಗೆ ಉತ್ತಮ ಸ್ಥಾನಮಾನವನ್ನೂ ನೀಡಿದ್ದಾರೆ. ಬದಲಾವಣೆ ಈಗ ಅನಿವಾರ್ಯ. ಕುಮಾರಸ್ವಾಮಿ ಅಥವಾ ದೇವೇಗೌಡರ ಬಗ್ಗೆ ಕೆಟ್ಟದಾಗಿ ಮಾತನಾಡುವಿಕೆ ಅಥವಾ ಅವರನ್ನು ನಾನು ಎಂದಿಗೂ ಬಯ್ಯುವುದಿಲ್ಲ. ಶಿಕ್ಷಕರ ಸಮಸ್ಯೆಗೆ ನಾನು ಸ್ಪಂದಿಸಬೇಕಿದ್ದು, ಅವರಿಗೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದರು.

ಪಠ್ಯಪುಸ್ತಕದಲ್ಲಿ ರಾಜಕಾರಣ ಮಾಡಬಾರದು : Basavaraj Horatti

ಕೆಲವರು ಜೆಡಿಎಸ್‌ನಲ್ಲಿ ನನಗೆ ಸೋಲುವ ಭೀತಿ ಇದೆ ಎಂದು ಬಿಜೆಪಿಗೆ ಬಂದಿದ್ದೇನೆ ಎಂದು ಆಪಾದಿಸುತ್ತಿದ್ದಾರೆ. ನಾನು ಪಕ್ಷವಾಗಿ ಮತ್ತು ವ್ಯಕ್ತಿಯಾಗಿಯೂ ಬೆಳೆದು ಬಂದವನಾಗಿದ್ದೇನೆ. 42 ವರ್ಷಗಳ ಕಾಲದ ಗೆಲುವು ಈಗಾಗಲೇ ದಾಖಲೆಯಾಗಿದ್ದು, ಹೊಸದಾಗಿ ದಾಖಲೆ ಮಾಡುವುದೇನೂ ಇಲ್ಲ. ಪ್ರತಿ ಬಾರಿಯೂ ಬಿಜೆಪಿ ಎರಡನೇ ಸ್ಥಾನದಲ್ಲಿರುತ್ತಿತ್ತು. ಈ ಬಾರಿ ನಾನೇ ಬಿಜೆಪಿಯಿಂದ ಸ್ಪರ್ಧಿ ಆಗಿರುವುದರಿಂದ ಯಾವುದೇ ಪೈಪೋಟಿ ಇಲ್ಲ ಎಂದರು.

ಶಿಕ್ಷಕರಿಗೆ ಅನ್ಯಾಯ ಮಾಡಿದ ಹೊರಟ್ಟಿ: ಕಳೆದ 42 ವರ್ಷಗಳಿಂದ ಬಸವರಾಜ ಹೊರಟ್ಟಿಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದು, ಶಿಕ್ಷಕರರಿಗೆ ಅನ್ಯಾಯ ಮಾಡಿದ್ದಾರೆ ಎಂದು ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘದ ಸಂಚಾಲಕ ಎಂ. ಭರತ್‌ ಆರೋಪಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 1980ರಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಚುನಾಯಿತ ಪ್ರತಿನಿಧಿಯಾದರು. ಅಂದಿನಿಂದ 1999ರವರೆಗೆ 19 ವರ್ಷಗಳ ಕಾಲ ವಿಧಾನ ಪರಿಷತ್ತಿನ ಸದಸ್ಯರಿಗೆ ಸಿಗುವ ವೇತನ ಭತ್ಯೆ ಸೇರಿ ಎಲ್ಲ ಸೌಲತ್ತುಗಳನ್ನು ಪಡೆದು ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಹೈಸ್ಕೂಲ್‌ನಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಇದು ಒಬ್ಬ ನಿರುದ್ಯೋಗಿ ಶಿಕ್ಷಕನಿಗೆ ಸಿಗಬೇಕಾದ ಉದ್ಯೋಗ ಅವಕಾಶವನ್ನು ಕಿತ್ತುಕೊಂಡಂತೆ ಆಗಿದೆ. ಇಂಥವರಿಗೆ ಮತದಾನ ಮಾಡುವ ಮುನ್ನ ಯೋಚನೆ ಮಾಡಿ ಎಂದು ಹೇಳಿದರು.

ಜಾತ್ಯತೀತ ತತ್ವ ಬಲಿಕೊಟ್ಟ ಹೊರಟ್ಟಿ, ಸಲೀಂ ಅಹ್ಮದ್ ವಾಗ್ದಾಳಿ

ಬಸವರಾಜ ಹೊರಟ್ಟಿ ತಮ್ಮ ಸಾಧನಾ ಪುಸ್ತಕದಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿರುವ ಪೋಟೊ ಬಳಸಿಕೊಂಡಿರುವುದಕ್ಕೆ ಭರತ್‌ ಆಕ್ಷೇಪ ವ್ಯಕ್ತಪಡಿಸಿದರು. ಈ ಪೋಟೊದಲ್ಲಿ ಸರ್ಕಾರದ ಲಾಂಛನವಿದೆ. ಚುನಾವಣಾ ಪ್ರಚಾರದ ವೇಳೆ ಹೊರಟ್ಟಿಈ ಪುಸ್ತಕ ನೀಡುತ್ತಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios