ಆಲೂರು (ಸೆ.30): ತಾಲೂಕಿನಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಬಗೆ ಪಿಂಚಣಿಯನ್ನು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆ, ನಿಗಮ ಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಾಗೂ ನಿವೃತ್ತಿ ಹೊಂದಿದ ಸರ್ಕಾರಿ ನೌಕರರು ಪಿಂಚಣಿ ಪಡೆಯುತ್ತಿದ್ದಲ್ಲಿ, ಅಂತಹವರು ತಕ್ಷಣ ತಹಸೀಲ್ದಾರ್ ಅವರಿಗೆ ಪಿಂಚಣಿ ಹಿಂತಿರುಗಿಸಬೇಕು.

ಇಲ್ಲದಿದ್ದರೆ ಮೇಲ್ಕಂಡ ಪ್ರಕರಣಗಳು ಗಮನಕ್ಕೆ ಬಂದರೆ, ಸಾರ್ವಜನಿಕರು ದಾಖಲೆ ಸಮೇತ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದರೆ, ಅಂತಹ ಸಾರ್ವಜನಿಕರಿಗೆ 400 ಬಹುಮಾನ ನೀಡಲಾಗುವುದು ಎಂದು ತಹಸೀಲ್ದಾರ್ ಶಿರೀನ್‌ ತಾಜ್ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಾಸನ ಜಿಲ್ಲೆ ಆಲೂರಿನ ತಹಸಿಲ್ದಾರ್ ಈ ಬಗ್ಗೆ ಆದೇಶ ನೀಡಿದ್ದಾರೆ.