ಉಡುಪಿ: ಸ್ವರ್ಣೆಯಲ್ಲಿ ನೀರಿದ್ದರೂ ನಗರಕ್ಕೆ ಸರಬರಾಜು ಯಾಕಿಲ್ಲ?
ನಗರದಲ್ಲಿ ಈ ಬಾರಿ ಹಿಂದೆಂದೂ ಕಂಡಿರದಷ್ಟು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಸದ್ಯ ನಗರದಲ್ಲಿ ಐದು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ನಗರಕ್ಕೆ ನೀರು ಉಣಿಸುವ ಸ್ವರ್ಣಾ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಮುಖವಾಗಿದೆ ಎಂದು ನಗರಾಡಳಿತ ಹೇಳುತ್ತಿದೆ.
ಉಡುಪಿ (ಜೂ.9) : ನಗರದಲ್ಲಿ ಈ ಬಾರಿ ಹಿಂದೆಂದೂ ಕಂಡಿರದಷ್ಟು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಸದ್ಯ ನಗರದಲ್ಲಿ ಐದು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ನಗರಕ್ಕೆ ನೀರು ಉಣಿಸುವ ಸ್ವರ್ಣಾ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಮುಖವಾಗಿದೆ ಎಂದು ನಗರಾಡಳಿತ ಹೇಳುತ್ತಿದೆ.
ಆದರೆ ಸ್ವರ್ಣ ನದಿ(Svarna river udupi)ಯ ಪುತ್ತಿಗೆ ಪರಿಸರದಲ್ಲಿ ಹೇರಳವಾಗಿ ನೀರಿದ್ದರೂ ಸಮರ್ಪಕ ವಿತರಣೆ ಆಗುತ್ತಿಲ್ಲ ಎಂದು ಆ ಭಾಗದ ಗ್ರಾಮಸ್ಥರು ದೂರಿದ್ದಾರೆ.
ಉಡುಪಿ ನಗರಸಭೆಯ ನಡೆ ಸಂಶಯಕ್ಕೆ ಕಾರಣವಾಗಿದೆ. ನಗರಕ್ಕೆ ನೀರುಣಿಸುವ ಸ್ವರ್ಣಾ ನದಿ, ಪುತ್ತಿಗೆ ಸೇತುವೆ ಆಸುಪಾಸು ಹೇರಳವಾದ ನೀರಿನ ಸಂಗ್ರಹ ಹೊಂದಿದೆ. 2019ರಲ್ಲಿ ಇದೇ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ, ಈ ಭಾಗದಲ್ಲಿ ಆರು ಪಂಪ್ ಸೆಟ್ ಗಳನ್ನು ಹಾಕಿ ಹಗಲು ರಾತ್ರಿ ನೀರನ್ನು ಅಣೆಕಟ್ಟೆಯ ಕಡೆಗೆ ಹಾಯಿಸಲಾಗುತ್ತಿತ್ತು. ಆದರೆ ಈ ಬಾರಿ ಹೆಚ್ಚಿನ ಪ್ರಮಾಣದ ನೀರಿದೆಯಾದರೂ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.
ಉಡುಪಿ: ಕೊನೆಗೂ ಕಣ್ತೆರೆದ ಇಲಾಖೆ: ಶಿಕ್ಷಕರಿಲ್ಲದ ಶಾಲೆಗೆ ಖಾಯಂ ಶಿಕ್ಷಕರ ನೇಮಕ
ಸದ್ಯ ಎರಡು ದಿನಗಳ ಹಿಂದೆ ಒಂದು ಪಂಪ್ ಅಳವಡಿಸಿದ್ದಾರೆ. ಈ ಹಿಂದೆ ಉಡುಪಿಯಲ್ಲಿ ರಘುಪತಿ ಭಟ್ ಶಾಸಕರಾಗಿದ್ದಾಗ, ಸ್ವತಹ ತಾವೇ ಸ್ಥಳದಲ್ಲಿ ನಿಂತು ಅಣೆಕಟ್ಟು ಕಡೆಗೆ ನೀರು ಹಾಯಿಸುವ ವ್ಯವಸ್ಥೆ ನೋಡಿಕೊಂಡಿದ್ದರು. ನಗರದ ಜನರ ಸಮಸ್ಯೆ ಕಂಡು ಗ್ರಾಮಸ್ಥರು ಹೆಚ್ಚಿನ ಪಂಪ್ ಅಳವಡಿಸಲು ಸಲಹೆ ನೀಡಿದರೂ ಅಧಿಕಾರಿಗಳು ಈ ಬಾರಿ ಗಮನಹರಿಸಿಲ್ಲ. ಇದರಿಂದ ನಗರದಲ್ಲಿ ಕುಡಿಯುವ ನೀರು ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.
ನಗರಸಭೆಯ ಈ ನಿರ್ಲಕ್ಷ್ಯ ಧೋರಣೆಗೆ ಕಾರಣವೇನು ಅನ್ನೋದು ಗೊತ್ತಾಗಿಲ್ಲ. ಟ್ಯಾಂಕರ್ ಮಾಫಿಯಾ ಗೆ ಮಣಿದು, ನಗರಾಡಳಿತ ಈ ರೀತಿ ವರ್ತಿಸುತ್ತಿದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಅಣೆಕಟ್ಟು ಪರಿಸರ ಸಂಪೂರ್ಣ ಬರಿದಾಗಿದೆ. ಸದ್ಯ ಮಳೆ ಬರುವ ಸೂಚನೆ ಇಲ್ಲ. ಇನ್ನಾದರೂ ವ್ಯವಸ್ಥಿತವಾಗಿ ಅಣೆಕಟ್ಟು ಪರಿಸರಕ್ಕೆ ನೀರು ಹಾಯಿಸಬಹುದು. ಇಲ್ಲವಾದರೆ ಸಂಗ್ರಹ ಗೊಂಡಿರುವ ನೀರು ಆವಿಯಾಗಿ ಸ್ವರ್ಣಾ ನದಿ ಸಂಪೂರ್ಣ ಬರಿದಾಗಲಿದೆ.
ಮಳೆ ಕೊರತೆ ಉಡುಪಿಗೆ ಇನ್ನು ಐದು ದಿನಗಳಿಗೊಮ್ಮೆ ನೀರು ಪೂರೈಕೆ!