ಹುಬ್ಬಳ್ಳಿ(ಡಿ.06): ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಮಾತಿನ ಜಟಾಪಟಿ ನಡೆದ ಘಟನೆ ಇಂದು(ಭಾನುವಾರ) ನಗರದಲ್ಲಿ ನಡೆದಿದೆ. 

ವೀರಾಪುರ ಓಣಿಯ ರೈತ ಭವನ ಉದ್ಘಾಟಣೆ ಸಮಾರಂಭದಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ್ ಮಧ್ಯೆ ವಾಗ್ವಾದ ನಡೆದಿದೆ.  ರೈತ ಭವನಕ್ಕೆ ಜಾಗ ನೀಡಿದಕ್ಕೆ ಮಾಜಿ ಕಾರ್ಪೋರೆಟರ್‌ ಶಿವಾನಂದ ಮುತ್ತಣ್ಣವರ್ ಕಿರಿಕ್ ತೆಗೆದಿದ್ದಾರೆ. ರೈತರ ಭವನ ಮಾಡೋದು ಬೇಡ, ಭವನದಲ್ಲಿ ನನ್ನ ಕಚೇರಿಗೆ ಜಾಗ ನೀಡಿ, ಇಲ್ಲ, ಮಹಿಳಾ ಸಂಘಕ್ಕೆ ಜಾಗ ನೀಡುವಂತೆ ಕಿರಿಕ್ ಶಿವಾನಂದ ಮುತ್ತಣ್ಣವರ್ ಕಿರಿಕ್ ತೆಗೆದಿದ್ದಾರೆ. 

ಬೆಳಗಾವಿ ಬೈಲೆಕ್ಷನ್‌ಗೆ ಸ್ಪರ್ಧೆ: ಜಗದೀಶ್ ಶೆಟ್ಟರ್ ಬಿಟ್ಟುಕೊಟ್ರು ಮಹತ್ವದ ಸುಳಿವು..!

ಈ ವೇಳೆ ಶಿವಾನಂದ ಮುತ್ತಣ್ಣವರ್‌ರನ್ನು ಹೊರಗೆ ಕಳುಹಿಸುವಂತೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಧ್ಯ ಪ್ರವೇಶಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರಿಸ್ಥಿತಿ‌ ತಿಳಿಗೊಳಿಸಿದ್ದಾರೆ. ಅದರೆ, ಜಗದೀಶ್ ಶೆಟ್ಟರ್ ಮಾತ್ರ ಜಗಳ ನೋಡುತ್ತಾ ಸುಮ್ಮನೆ ಕುಳಿತಿದ್ದರು.