Asianet Suvarna News Asianet Suvarna News

ಹೊಸ ವರ್ಷದ ದಿನ ಬೆಳಗಿನ ಜಾವ 3 ಗಂಟೆವರೆಗೆ ಹೋಟೆಲ್‌ ತೆರೆಯಲು ಅವಕಾಶ ಕೊಡಿ

ಹೊಸ ವರ್ಷದ ದಿನದಂದು ಹೋಟೆಲ್, ಬಾರ್, ರೆಸ್ಟೋರೆಂಟ್‌, ಬೇಕರಿ ಸೇರಿ ಕೆಲವೊಂದು ಉದ್ಯಮಗಳನ್ನು ಬೆಳಗಿನ ಜಾವ 3 ಗಂಟೆವರೆಗೂ ತೆರೆದು ಸೇವೆ ನೀಡಲು ಅನುಮತಿ ನೀಡಬೇಕು ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

Allow the hotel to open till 3 am on New Years Day sat
Author
First Published Dec 14, 2022, 2:39 PM IST

ಬೆಂಗಳೂರು (ಡಿ.14): ಹೊಸ ವರ್ಷ ಸಂಭ್ರಮಾಚಣೆ ವೇಳೆ ಬೆಳಗಿನ ಜಾವ 3 ಗಂಟೆವರೆಗೂ ಹೋಟೆಲ್‌ಗಳನ್ನು ತೆರೆದು ಗ್ರಾಹಕರಿಗೆ ಸೇವೆಯನ್ನು ನೀಡುವುದಕ್ಕೆ ಅನುಮತಿಯನ್ನು ಕೋರಿ ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದಿಂದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರಿಗೆ ಮತ್ರದ ಮೂಲಕ ಮನವಿ ಮಾಡಲಾಗಿದೆ. 

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೃಹತ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಅವರು, ಕಳೆದ ಎರಡು ವರ್ಷಗಳಿಂದ ಕೋವಿಡ್‌ ಹಾಗೂ ಇತರೆ ಕಾರಣಗಳಿಂದ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಹೊಸ ವರ್ಷಾಚರಣೆ ಮಾಡಲು ಅವಕಾಶ ಇರಲಿಲ್ಲ. ಆದರೆ, ಈ ವರ್ಷ ಕೋವಿಡ್‌ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಭೀತಿ ಇಲ್ಲದಿರುವ ಕಾರಣ ಅದ್ಧೂರಿಯಾಗಿ ಹೊಸ ವರ್ಷವನ್ನು ಆಚರಣೆ ಮಾಡಲು ತೀರ್ಮಾನಿಸಿದ್ದೇವೆ. ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ರೆಸ್ಟೋರೆಂಟ್, ಬೇಕರಿಗಳು, ಐಸ್ ಕ್ರೀಂ ಪಾರ್ಲರ್ ಗಳಿಗೆ ಬೆಳಗ್ಗಿನ ಜಾವ 3 ಗಂಟೆಯವರೆಗೆ ತೆರಯಲು ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ದಿನದ 24 ಗಂಟೆ  ತೆರೆಯಲು ಅವಕಾಶ ಕೊಡಿ: ಕರ್ನಾಟಕದ ನೆರೆಹೊರೆ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ನಗರ ಪ್ರದೇಶಗಳಲ್ಲಿ ದಿನದ ೨೪ ಗಂಟೆಗಳು ಹೋಟೆಲ್‌ ಉದ್ಯಮಗಳನ್ನು ನಡೆಸಲು ಅಲ್ಲಿನ ಸರ್ಕಾರಗಳು ಅನುಮತಿಯನ್ನು ನೀಡಿವೆ. ಆದರೆ, ನಮ್ಮ ರಾಜ್ಯದಲ್ಲಿ 24 ಗಂಟೆ ಹೋಟೆಲ್‌ ಉದ್ಯಮಗಳನ್ನು ನಡೆಸಲು ಅನುಮತಿಯಿಲ್ಲ. ಆದ್ದರಿಂದಾಗಿ ಹೊಸ ವರ್ಷದ ದಿನದಂದು ತಡರಾತ್ರಿ 3 ಗಂಟೆವರೆಗೂ ಹೋಟೆಲ್‌ ಸೇರಿ ಇತರೆ ಉದ್ಯಮಗಳಿಗೆ ಬಾಗಿಲು ತೆರೆದು ಸೇವೆಯನ್ನು ನಿಡಲು ಅನುಮತಿ ಕೇಳಿದ್ದೇವೆ. ಜೊತೆಗೆ, 24 ಗಂಟೆ ತೆರೆಯುವ ಕುರಿತಂತೆ ಸಲ್ಲಿಸಲಾಗಿರುವ ಮನವಿಯ ಬಗ್ಗೆ ಸರ್ಕಾರ ಶೀಘ್ರವಾಗಿ ತೀರ್ಮಾನ ಕೈಗೊಳಗ್ಳಬೇಕು ಎಂದು ಮನವಿ ಮಾಡಿದರು.

ಹೋಟೆಲ್‌, ತಿಂಡಿಗಳ ಬೆಲೆ ಹೆಚ್ಚಳವಿಲ್ಲ: ಬೆಂಗಳೂರಿನಲ್ಲಿ ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಹೋಟೆಲ್‌, ತಿಂಡಿಗಳ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿತ್ತು. ಹೀಗಾಗಿ, ಇತ್ತೀಚೆಗೆ ಹಾಲು ಮತ್ತು ಮೊಸರಿನ ದರಗಳಲ್ಲಿ ಹೆಚ್ಚಳ ಮಾಡಿದರೂ ಕೂಡ ಚಹಾ, ಕಾಫಿ, ತಿಂಡಿಗಳು ಹಾಗೂ ಸಿಹಿ ಪದಾರ್ಥಗಳ ಬೆಲೆಗಳಲ್ಲಿ ಹೆಚ್ಚಳ ಮಾಡಿರಲಿಲ್ಲ. ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದಿಂದ ಸಭೆಯನ್ನೂ ಮಾಡಲಾಗಿದ್ದು, ಬೆಲೆ ಹೆಚ್ಚಳ ಮಾಡದಂತೆ ಕ್ರಮವಹಿಸಲಾಗಿದೆ. ಆದರೆ, ಈ ಆರ್ಥಿಕ ವರ್ಷದ ಆರಂಭದ ತಿಂಗಳಾದ ಏಪ್ರಿಲ್‌ನಲ್ಲಿ ಕೆಲವೊಂದು ಹೋಟೆಲ್‌ಗಳಲ್ಲಿ ಬೆಲೆ ಹೆಚ್ಚಳ ಮಾಡಿರಲಿಲ್ಲ. ಅಂತಹ ಹೋಟೆಲ್‌ಗಳಲ್ಲಿ ಈಗ ಬೆಲೆ ಹೆಚ್ಚಳ ಮಾಡಲಾಗುತ್ತದೆ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ತಿಳಿಸಿದ್ದಾರೆ.

Follow Us:
Download App:
  • android
  • ios