ಕಾಪು (ಅ.29): ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಅನಿಲ್‌ ಕುಮಾರ್‌ ಮತ್ತು ಉಪಾಧ್ಯಕ್ಷೆಯಾಗಿ ಕಾಂಗ್ರೆಸ್‌ ಪಕ್ಷದ ಮಾಲಿನಿ ಆಯ್ಕೆಯಾಗಿದ್ದಾರೆ.

ಕಾಪು ಪುರಸಭೆ ಒಟ್ಟು 23 ಸದಸ್ಯರ ಬಲ ಹೊಂದಿದ್ದು, ಕಾಂಗ್ರೆಸ್‌ನಿಂದ 12 ಬಿಜೆಪಿಯಿಂದ 11 ಮಂದಿ ಸದಸ್ಯರಿದ್ದಾರೆ. ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅನಿಲ್‌ ಕುಮಾರ್‌, ಕಾಂಗ್ರೆಸ್‌ನಿಂದ ಶಾಬು ಸಾಹೇಬ್‌ ಹಾಗೂ ಅಶ್ವಿನಿ ನಾಮಪತ್ರ ಸಲ್ಲಿಸಿದ್ದರು. ನಂತರ ಅಶ್ವಿನಿ ನಾಮಪತ್ರ ಹಿಂಪಡೆದಿದ್ದಾರೆ.

ವಿಪಕ್ಷ ಮುಖಂಡರ ಪಕ್ಷತ್ಯಾಗ : ಹೊಸ ಬಾಂಬ್ ಸಿಡಿಸಿದ ಸುಧಾಕರ್‌ರಿಂದ ಬಿಜೆಪಿ ಸೆರ್ಪಡೆಯ ಟೈಂ ಫಿಕ್ಸ್ ...

ಪುರಸಭೆ ಆಹ್ವಾನಿತ ಸದಸ್ಯರಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕರು ಮತದಾನದಲ್ಲಿ ಭಾಗವಹಿಸಿದ್ದರಿಂದ ಬಿಜೆಪಿಯ ಅನಿಲ್‌ ಕುಮಾರ್‌ 13 ಮತಗಳನ್ನು ವಿಜಯಿಯಾದರು. ಲೆಕ್ಕಾಚಾರದಂತೆ ಕಾಂಗ್ರೆಸ್‌ನ ಶಾಬು 11 ಮತಗಳನ್ನು ಪಡೆದು ಸೋತರು.

ಆದರೇ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಸದಸ್ಯರಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್‌ ಪಕ್ಷದ ಮಾಲಿನಿ ಅವರು ಅವಿರೋಧವಾಗಿ ಆಯ್ಕೆಯಾದರು.