ಲಂಚ ಪಡೆದ ಆರೋಪ; ದಾವಣಗೆರೆ ನಾಲ್ವರು ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್
ಪ್ರತಿ ಕಡತಕ್ಕೆ ಸಹಿಗೆ 20 ಸಾವಿರ ರು. ಲಂಚ ಕೇಳಿ, ಹಣ ಪಡೆದಿದ್ದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ, ಬಂದರು ಮತ್ತು ಒಳ ನಾಡು ಜಲ ಸಾರಿಗೆ ಇಲಾಖೆ ಇಇ ಸೇರಿದಂತæ ನಾಲ್ವರ ವಿರುದ್ಧ ಲೋಕಾಯುಕ್ತ ಐಜಿಪಿಗೆ ದೂರು ನೀಡಿದ್ದು, ಇಲ್ಲಿಗೆ ಬರಲು 25 ಲಕ್ಷ ಕೊಟ್ಟಿರುವುದಾಗಿ ಅಧಿಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಯಾರಿಗೆ ಹಣ ನೀಡಿದ್ದಾರೆಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕೆ. ಮಣಿ ಸರ್ಕಾರ್ ಒತ್ತಾಯಿಸಿದ್ದಾರೆ.
ದಾವಣಗೆರೆ (ಫೆ.16) : ಪ್ರತಿ ಕಡತಕ್ಕೆ ಸಹಿಗೆ 20 ಸಾವಿರ ರು. ಲಂಚ ಕೇಳಿ, ಹಣ ಪಡೆದಿದ್ದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ, ಬಂದರು ಮತ್ತು ಒಳ ನಾಡು ಜಲ ಸಾರಿಗೆ ಇಲಾಖೆ ಇಇ ಸೇರಿದಂತæ ನಾಲ್ವರ ವಿರುದ್ಧ ಲೋಕಾಯುಕ್ತ ಐಜಿಪಿಗೆ ದೂರು ನೀಡಿದ್ದು, ಇಲ್ಲಿಗೆ ಬರಲು 25 ಲಕ್ಷ ಕೊಟ್ಟಿರುವುದಾಗಿ ಅಧಿಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಯಾರಿಗೆ ಹಣ ನೀಡಿದ್ದಾರೆಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕೆ. ಮಣಿ ಸರ್ಕಾರ್(Mani sarkar) ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ(PWD) ಎಇಇ ನರೇಂದ್ರ ಬಾಬು(Narendra babu), ಎಇ ವೀರಪ್ಪ, ಇಇ ವಿಜಯಕುಮಾರ, ಎಸ್‌ಇ ಜಗದೀಶ ವಿರುದ್ಧ 7(ಎ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988(ತಿದ್ದುಪಡಿ ಕಾಯ್ದೆ-2018)ರ ಅಡಿ ಲೋಕಾಯುಕ್ತ ಪೊಲೀಸ್ ಇಲಾಖೆ ಐಜಿಪಿ ಸುಬ್ರಹ್ಮಣ್ಯರಾವ್(IGP Subrahmanyarao)ಗೂ ಬೆಂಗಳೂರಿನಲ್ಲಿ ದೂರು ನೀಡಲಾಗಿದೆ ಎಂದರು.
NH Accident: ಹೆದ್ದಾರಿಯಲ್ಲಿ ದರೋಡೆಗೆಂದು ಹೋದವರು ಹೆಣವಾಗಿ ಬಿದ್ದರು: ಲಾರಿ ಹತ್ತಿಸಿ ಮೂವರ ಕೊಲೆ
ದಾವಣಗೆರೆ ಲೋಕೋಪಯೋಗಿ ಕಚೇರಿಯಲ್ಲಿ ಜ. 18ರಂದು ಒಂದೇ ಆರೋಪಿಯಾಗ ಎಇಇ ನರೇಂದ್ರ ಬಾಬು ಹಾಗೂ ಎರಡನೇ ಆರೋಪಿ ಎಇ ವೀರಪ್ಪ ಸಮ್ಮುಖದಲ್ಲಿ ಇಲಾಖೆ ಕಚೇರಿಯಿಂದ ಮಂಜೂರಾದ ಕಾಮಗಾರಿ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲು ಲಂಚ ಕೊಟ್ಟರೆ ಮಾತ್ರ ಹಣ ಬಿಡುಗಡೆ ಮಾಡುವುದಾಗಿ, ಇದೇನೂ ತರಕಾರಿ ವ್ಯಾಪಾರವಲ್ಲ. ತಾನು ಈ ಸ್ಥಳಕ್ಕೆ ಬರಲು 25 ಲಕ್ಷ ಕೊಟ್ಟು ಬಂದಿರುವುದಾಗಿ ಆರೋಪಿ ಸಹಾಯಕ ಇಂಜಿನಿಯರ್ ರುದ್ರಪ್ಪ ಹೇಳಿರುವ ಆಡಿಯೋ, ವೀಡಿಯೋ ಸಹ ಲೋಕಾಯುಕ್ತಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
ಕಡತಗಳಿಗೆ ಸಹಿಮಾಡಲು ಹಣ ಕೊಡುವಂತೆ ಗುತ್ತಿಗೆದಾರನಿಗೆ ಆರೋಪಿ ರುದ್ರಪ್ಪ ಹೇಳಿದ್ದು, ಪ್ರತಿ ಕಡತಕ್ಕೆ 20 ಸಾವಿರ ರು. ನಿಗದಿಪಡಿಸಿದ್ದಾರೆ. ಅಲ್ಲದೇ, ಲಂಚದ ಹಣ ಪಡೆಯುವಾಗ ವೀಡಿಯೋ ಸಹ ಮಾಡಿಕೊಳ್ಳಲಾಗಿದೆ. ಇಂತಹ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳು, ಸಚಿವರು, ಇತರೆ ರಾಜಕೀಯ ಬೆಂಬಲ ಪಡೆದು, ಲೋಕೋಪಯೋಗಿ ಇಲಾಖೆಯಲ್ಲೂ ಭ್ರಷ್ಟಾಚಾರದ ಅಡ್ಡೆ ಮಾಡಿದ್ದಾರೆ. ಇಂತಹ ಭ್ರಷ್ಟಅಧಿಕಾರಿಗಳಿಗೆ ಕಾನೂನಿನ ಭಯವಾಗಲಿ, ಲೋಕಾಯುಕ್ತರ ಭಯವಾಗಲಿ ಇಲ್ಲ. ಗುತ್ತಿಗೆದಾರರಿಂದ ಲಂಚ ಪಡೆಯುವ ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲಂಚದ ಹಣವನ್ನು ಕೊಟ್ಟರಷ್ಟೇ ಕಡತಗಳಿಗೆ ಸಹಿ ಹಾಕಿ, ಹಂತ ಹಂತವಾಗಿ ಬಿಲ್ ಮಾಡುವುದಾಗಿ ಇಂತಹ ಅಧಿಕಾರಿಗಳು ಹೇಳುತ್ತಾರೆ. ದಾವಣಗೆರೆಗೆ ಬರಲು 25 ಲಕ್ಷ ರು. ಕೊಟ್ಟು ಬಂದಿರುವುದಾಗಿಯೂ ಅಧಿಕಾರಿ ಹೇಳಿಕೆ ನೀಡಿದ್ದು, 25 ಲಕ್ಷ ಹಣವನ್ನು ಯಾರಿಗೆ ಕೊಟ್ಟಿದ್ದಾರೆಂಬ ಬಗ್ಗೆಯೂ ತನಿಖೆ ಆಗಬೇಕು. ಇಂತಹ ಭ್ರಷ್ಟಅಧಿಕಾರಿಗಳಿಂದಾಗಿಯೇ ರಾಜ್ಯದ ಗುತ್ತಿಗೆದಾರರು ಸಂಕಷ್ಟಅನುಭವಿಸುತ್ತಿದ್ದಾರೆ. ಓರ್ವ ಗುತ್ತಿಗೆದಾರ ಆತ್ಮಹತ್ಯೆ ಸಹ ಮಾಡಿಕೊಂಡು, ಬಿಜೆಪಿ ಸರ್ಕಾರದ ಒಬ್ಬ ಸಚಿವ ಸ್ಥಾನವನ್ನೇ ಕಳೆದುಕೊಂಡರೂ ಇನ್ನೂ ಬುದ್ಧಿ ಬಂದಿಲ್ಲ ಎಂದು ದೂರಿದರು.
ಭ್ರಷ್ಟಾಚಾರ ನಿಗ್ರಹ ದಳ ಇದ್ದಾಗ ಮೇಜಿನ ಕೆಳಗಿನಿಂದ ಲಂಚ ಪಡೆಯುತ್ತಿದ್ದ ಭ್ರಷ್ಟಅಧಿಕಾರಿಗಳು ಲೋಕಾಯುಕ್ತ ಪುನರ್ಜನ್ಮ ಪಡೆದ ನಂತರ ಟೇಬಲ್ ಮೇಲಿನಿಂದಲೇ ಲಂಚ ಪಡೆಯುತ್ತಿದ್ದಾರೆ. ಭ್ರಷ್ಟಅಧಿಕಾರಿಗಳಿಗೆ ಲೋಕಾಯುಕ್ತರ ಬಗ್ಗೆಯೂ ಭಯ ಇಲ್ಲ. ಸದ್ಯ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ. ಶ್ರೀರಾಮ ಸೇನೆಯಿಂದ ಪಾಲಿಕೆ, ದೂಡಾ ಸೇರಿದಂತೆ ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಹೋರಾಟ ನಡೆಸಿಕೊಂಡೇ ಬರುತ್ತಿದೆ. ಲೋಕೋಪಯೋಗಿ ಇಲಾಖೆ ಭ್ರಷ್ಟಅಧಿಕಾರಿಗಳ ವಿರುದ್ಧದ ಹೋರಾಟವೂ ನಿಲ್ಲದು ಎಂದು ಮಣಿ ಸರ್ಕಾರ ತಿಳಿಸಿದರು.
Davanagere: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎಂಜಿನಿಯರ್‌ಗಳ ಮೇಲೆ ಪ್ರಕರಣ ದಾಖಲು: ಶ್ರೀರಾಮಸೇನೆ ಹೋರಾಟಕ್ಕೆ ಜಯ
ಶ್ರೀರಾಮ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರ್, ಉಪಾಧ್ಯಕ್ಷ ರಾಜಶೇಖರ ಆಲೂರು, ಖಜಾಂಚಿ ಶ್ರೀಧರ್, ಡಿ.ವಿನೋದ್, ಬಿ.ಜಿ.ರಾಹುಲ್, ರಾಜು, ವಿನಯ್, ರಮೇಶಪ್ಪ, ರಘು ಇತರರು ಇದ್ದರು.
ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರದಲ್ಲ ಶ್ರೀರಾಮ ಸೇನೆ ಸ್ಪರ್ಧೆ ಮಾಡುವುದಿಲ್ಲ. ಹಿಂದುತ್ವದ ಹೋರಾಟ ನಮ್ಮದಾಗಿದ್ದು, ಇಲ್ಲಿ ಹಣ ಇದ್ದವರಿಗಷ್ಟೇ ಚುನಾವಣೆ ಎಂಬ ಸ್ಥಿತಿ ಇರುವುದು ಸ್ಪಷ್ಟ.
ಮಣಿ ಸರ್ಕಾರ್, ಜಿಲ್ಲಾಧ್ಯಕ್ಷ, ಶ್ರೀರಾಮ ಸೇನೆ