ಇಂಡಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲೂ ಲಂಚಾವತಾರ: ಅಣ್ತಮ್ಮನ ಹಣದ ದಾಹಕ್ಕೆ ಬೇಸತ್ತ ಜನತೆ..!
* ಅಣ್ಣ-ತಮ್ಮನ ಕರಾಮತ್ತು ಲಂಚಾವತಾರ ಬಟಾಬಯಲು
* ಲಂಚಕೋರತನಕ್ಕೆ ಬೇಸತ್ತ ವಿಜಯಪುರ ಜಿಲ್ಲೆಯ ಜನ
* ಲಂಚಾವತಾರ ಬಯಲಿಗೆಳೆದ ಸ್ಥಳೀಯರು
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಜೂ.03): ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ನಡೆಯುತ್ತಿದ್ದ ಲಂಚಾವತಾರವನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲಿಗೆಳೆದಿತ್ತು. ಸುದ್ದಿ ಪ್ರಸಾರವಾಗ್ತಿದ್ದಂತೆ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡು ಇಂಡಿ ತಾಲೂಕಾಸ್ಪತ್ರೆ ಅಧೀಕ್ಷಕನನ್ನೇ ಅಮಾನತುಗೊಳಿಸಿ ಡಿಹೆಚ್ಓ ಮೂಲಕ ಆದೇಶ ಹೊರಡಿಸಿದ್ದರು. ಆದ್ರೆ ಇದೆ ಇಂಡಿ ತಾಲೂಕಿನಲ್ಲಿ ಮತ್ತೊಂದು ಇಂಥದ್ದೆ ಲಂಚಬಾಕತನದ ಪ್ರಕರಣವೊಂದು ಹೊರಬಿದ್ದಿದೆ.
ಅಣ್ಣ-ತಮ್ಮನ ಕರಾಮತ್ತು ಲಂಚಾವತಾರ ಬಟಾಬಯಲು
ವಿಜಯಪುರ ಜಿಲ್ಲೆಯಲ್ಲೂ ಒಂದಿಲ್ಲೊಂದು ಲಂಚಾವತಾರ ಪ್ರಕರಣ ಬೆಳಕಿಗೆ ಬರ್ತಿವೆ. ಮೊನ್ನೆ ತಾಲೂಕಾಸ್ಪತ್ರೆಯಲ್ಲಿ ಕಮಿಷನ್ ದಂಧೆ ಬಯಲಾಗಿತ್ತು. ಇದರ ಬೆನ್ನಲ್ಲೇ ಇಂಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಣ್ಣನ ಹೆಸ್ರಲ್ಲಿ ತಮ್ಮನ ಲಂಚಾವತಾರ ಬಟಾಬಯಲಾಗಿದೆ. ಜನ ಲಂಚಬಾಕ ಅಧಿಕಾರಿಗಳಿಗೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ.
ವಿಜಯಪುರದ ವಿಕಲಚೇತನರ ಪುನಶ್ಚೇತನ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಭೇಟಿ!
ಭ್ರಷ್ಟಾಚಾರದ ಕೂಪ ಇಂಡಿ ಸಬ್ ರಿಜಿಸ್ಟಾರ್ ಕಚೇರಿ
ಇಂಡಿ ಸಬ್ ರಿಜಿಸ್ಟ್ರಾರ್ ಕಚೇರಿಯ ಮೊಹಮ್ಮದ್ ರಫಿ ಪಟೇಲ್ ಸಹೋದರ ಸೈಯ್ಯದ್ ಪಟೇಲ್ ಕಚೇರಿಯಲ್ಲಿ ಅಂದಾ ದರ್ಬಾರ್ ಮಾಡಿರೋದು ಬಯಲಾಗಿದೆ. ಏನೇ ಕೆಲ್ಸ ಆಗಬೇಕಾದ್ರೆ ದಲ್ಲಾಳಿ ಮೂಲಕ ಹಣ ಕೊಟ್ಟರೇ ಮಾತ್ರ ಕೆಲ್ಸ ಆಗುತ್ತೆ ಅನ್ನೋ ಆರೋಪ ಕೇಳಿಬಂದಿದೆ.
ಆರೋಪ ತಳ್ಳಿಹಾಕ್ತಿರೋ ಜಿಲ್ಲಾ ಉಪನೊಂದಣಾಧಿಕಾರಿ
ಇಂಡಿ ಸಬ್ ರೆಜಿಸ್ಟಾರ್ ಕಚೇರಿಯಲ್ಲಿನ ಲಂಚಗುಳಿತನ ಪ್ರಕರಣವನ್ನ ಜಿಲ್ಲಾ ನೋಂದಣಾಧಿಕಾರಿ ತಳ್ಳಿ ಹಾಕುತ್ತಿದ್ದಾರೆ. ಆ ರೀತಿ ನಡೆಯೋಕೆ ಸಾಧ್ಯವಿಲ್ಲ. ಈ ಭ್ರಷ್ಟಾಚಾರದಲ್ಲಿ ಕಚೇರಿ ಅಧಿಕಾರಿಗಳು ಶಾಮೀಲು ಇಲ್ಲ ಎನ್ತಿದ್ದಾರೆ ಜಿ.ಆರ್. ನಾಡಗೌಡ. ಇತ್ತ ಜಿಲ್ಲಾ ಸಬ್ ರೆಜಿಸ್ಟರ್ ಹೇಳ್ತಿರೋದನ್ನ ಕೇಳಿ ವಿಜಯಪುರ ಮಂದಿ ಮುಸಿಮುಸಿ ನಗ್ತಿದ್ದಾರೆ.
ಸಬ್ ರೆಜಿಸ್ಟರ್ ಕಚೇರಿಗಳಲ್ಲಿ ಸಾಮಾನ್ಯ ಎನ್ನುವಂತಾದ ಲಂಚಾವತಾರ
ವಿಜಯಪುರ ಜಿಲ್ಲೆ ಸೇರಿದಂತೆ ತಾಲೂಕಿನ ಸಬ್ ರಿಜಿಸ್ಟ್ರರ್ ಕಚೇರಿಗಳಲ್ಲಿ ಲಂಚಾವತಾರ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಇಂಡಿ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಣ್ಣ ಮೊಹಮ್ಮದ್ ರಫಿ ಪಟೇಲ್ ಸಹೋದರ ಸೈಯ್ಯದ್ ಪಟೇಲ್ ಲಂಚವನ್ನೇ ದಂಧೆಯಾಗಿ ಮಾಡ್ಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ ಅನ್ನೋದು ತಾಲೂಕಿನಲ್ಲಿ ಕೇಳಿ ಬರ್ತಿರೋ ಮಾತು. ಆದ್ರೆ ಸೈಯ್ಯದ್ ಮಾತ್ರ ಬಿಂದಾಸ್ ಆಗಿ ಕಚೇರಿಯಲ್ಲಿ ಲಂಚಾವತಾರ ನಡೆಸುತ್ತಿದ್ದಾರೆ.
Vijayapuara ಆಸ್ಪತ್ರೆ ಅಧೀಕ್ಷಕನ ಕಮಿಷನ್ ದಂಧೆ ಬಯಲಿಗೆಳೆದ Suvarna News
ಲಂಚಾವತಾರ ಬಯಲಿಗೆಳೆದ ಸ್ಥಳೀಯರು
ಈ ಬಗ್ಗೆ ಸ್ಥಳೀಯರು ವಿಡಿಯೋ ಮಾಡಿ ಮಾಧ್ಯಮಗಳಿಗೆ ಹರಿಬಿಟ್ಟಿದ್ದಾರೆ. ಇನ್ನು ಏಜೆಂಟರು ಹಣ ಕೇಳುವುದು ಹಾಗೂ ಹಣ ಪಡೆಯೋ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಮಾಗಿದೆ. ತಪ್ಪಿಸ್ಥರ ಅಧಿಕಾರಿಗಳ ವಿರುದ್ಧ ಕ್ರಮ ಆಗಲಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
ಲಂಚಕೋರತನಕ್ಕೆ ಬೇಸತ್ತ ವಿಜಯಪುರ ಜಿಲ್ಲೆಯ ಜನ
ಮೇಲಿಂದ ಮೇಲೆ ಬಯಲಿಗೆ ಬರ್ತಿರೋ ಲಂಚ ಪ್ರಕರಣಗಳಿಂದ ಜನರಲ್ಲಿ ಸರ್ಕಾರಿ ಇಲಾಖೆ, ಕಚೇರಿಗು, ಅಧಿಕಾರಿಗಳ ಬಗ್ಗೆ ಬೇಸರ ಮೂಡಿದೆ. ಇಂಡಿಯಲ್ಲಿ ಎರಡು ಪ್ರಕರಣ ಲಂಚಗೂಳಿತನದ್ದೆ ಬಯಲಿಗೆ ಬಂದಿದ್ದು ಬೇಸರ ಮೂಡಿಸಿದೆ. ಜಿಲ್ಲಾಸ್ಪತ್ರೆಯ ಬಾಣಂತಿ ನರಳಾಟ ಪ್ರಕರಣ ಬಯಲಿಗೆ ಬಂದಾಗಲು, ಅಲ್ಲಿಯು ಬಾಣಂತಿ ಪೋಷಕರಿಂದ ಹಣಕ್ಕೆ ಬೇಡಿಕೆ ಇಟ್ಟ ಮಾಹಿತಿಗಳು ಕೇಳಿ ಬಂದಿದ್ದವು. ಇದು ಎಲ್ಲೊ ಒಂದು ಕಡೆಗೆ ಲಂಚವಿಲ್ಲದೆ ಕೆಲಸವಾಗಲ್ವಾ ಅನ್ನೋ ಅನುಮಾನ ಮೂಡಿಸುವಂತಿದೆ.