ಚಿಕ್ಕಬಳ್ಳಾಪುರ: ಚುನಾವಣಾ ಸಂಭಾವನೆ ಹೆಸರಲ್ಲಿ ಪಂಗನಾಮ..!

ಎಂಪಿಸಿಎಸ್‌ ಚುನಾವಣಾ ಅಧಿಕಾರಿಯಾಗಲು ಪೈಪೋಟಿ| ಅಭ್ಯರ್ಥಿಗಳ ಠೇವಣಿ ಗುಳಂ| ಚುನಾವಣಾ ಅಧಿಕಾರಿ ಆಗಲು ಪೈಪೋಟಿ| ಬೋನಸ್‌ ಹಣವೂ ಅಧಿಕಾರಿಗಳ ಪಾಲು| ಚುನಾವಣೆ ವೆಚ್ಚದ ಹೆಸರಲ್ಲಿ ಲಕ್ಷ ಲಕ್ಷ ಡ್ರಾ| ಚಿಂತಾಮಣಿಯ ಗೋಪಲ್ಲಿ ಎಂಪಿಎಸ್‌ನಲ್ಲಿ ಅಕ್ರಮ| 

Allegation of Scam in the Name of Remuneration of Election Officials in Chikkaballapur grg

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ(ಮಾ.20): ಜಿಲ್ಲೆಯಲ್ಲಿ ನಡೆಯುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಯ ಖರ್ಚು, ವೆಚ್ಚಗಳ ನೆಪದಲ್ಲಿ ಲಕ್ಷಾಂತರ ರು., ಗೋಲ್‌ಮಾಲ್‌ ನಡೆಸುತ್ತಿದ್ದು ಚುನಾವಣೆ ಅಧಿಕಾರಿಗಳು ಸಂಭಾವನೆ ಹೆಸರಿಲ್ಲಿ ಲಕ್ಷಾಂತರ ರು.ಗಳನ್ನು ಪಡೆದು ಸಹಕಾರ ಸಂಘಗಳಿಗೆ ಹೊರೆಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಸಾರ್ವತ್ರಿಕ ಚುನಾವಣೆಗಿಂತ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನಡೆಯುವ ಚುನಾವಣೆಗಳಲ್ಲಿ ದುಂದು ವೆಚ್ಚ ಹೆಚ್ಚು. ಸಂಭಾವನೆ ಪಡೆಯುವ ದಂಧೆಯಲ್ಲಿ ಅಧಿಕಾರಿಗಳ ಶಾಮೀಲಾಗಿರುವ ಶಂಕೆ ಬಲವಾಗಿ ಕೇಳಿ ಬರುತ್ತಿದ್ದು ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಎಂಪಿಸಿಎಸ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಾಕಷ್ಟು ರೀತಿಯ ಅಕ್ರಮಗಳು ನಡೆದಿದ್ದು ಇದೇ ರೀತಿ ಜಿಲ್ಲೆಯ ಎಂಪಿಸಿಎಸ್‌ ಚುನಾವಣೆಗಳನ್ನು ಅಕ್ರಮವಾಗಿ ಹಣ ಮಾಡುವ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆಂಬ ಆಕ್ರೋಶ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ವ್ಯಕ್ತವಾಗಿದೆ.

ಹಿಂತಿರುಗದ ಠೇವಣಿ ಹಣ

ಪ್ರತಿ ಉತ್ಪಾದಕರ ಸಹಕಾರ ಸಂಘದಲ್ಲಿ ಒಟ್ಟು ಮೀಸಲಾತಿ ಸೇರಿ 13 ಮಂದಿ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಈ ಚುನಾವಣೆಯಲ್ಲಿ ಸುಮಾರು 20 ಸಾವಿರಕ್ಕೂ ಮೇಲ್ಪಟ್ಟು ಹಣ ಠೇವಣಿ ಮೂಲಕ ಸಂಗ್ರಹವಾಗುತ್ತದೆ. ಆದರೆ ಚುನಾವಣೆ ನಂತರ ಗೆದ್ದ ವ್ಯಕ್ತಿಗೆ ಠೇವಣಿ ಹಣ ಸಹ ವಾಪಸ್‌ ಕೊಡದೇ ಡಿಪಾಜಿಟ್‌ ಹಣವನ್ನು ಚುನಾವಣಾಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಠೇವಣಿ ಹಣ ಯಾರ ಜೇಬಿಗೆ ಹೋಗುತ್ತಿದೆಯೆಂಬುದು ಯಕ್ಷಪ್ರಶ್ನೆಯಾಗಿದೆ.
50 ರಿಂದ 500 ಷೇರುದಾರರು ಇರುವ ನಮ್ಮ ಸಹಕಾರಿ ಕ್ಷೇತ್ರದಲ್ಲಿ ಚುನಾವಣೆ ನಡೆಸಬೇಕಾದರೆ ಅದರಲ್ಲೂ ಅರ್ಹ ಮತದಾರರು ಮತ ಚಲಾಯಿಸುತ್ತಾರೆ. ಇಂತಹ ಚುನಾವಣೆಗೆ ಸುಮಾರು 2 ಲಕ್ಷದ ವರೆಗೂ ಖರ್ಚಾಗುತ್ತಿದೆ. ಅವಳಿ ಜಿಲ್ಲೆಗಳಲ್ಲಿ ಸುಮಾರು 1,800 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘವಿದ್ದು, 5 ವರ್ಷಕ್ಕೊಮ್ಮೆ ಸಹಕಾರಿ ಸಂಘಗಳಿಗೆ ಚುನಾವಣೆ ನಡೆಯುತ್ತದೆ.

ಚಿಕ್ಕಬಳ್ಳಾಪುರ: ಮಠಕ್ಕೆ ಸೇರಿದ ಕಟ್ಟಡ ತೆರವು, ನಗರಸಭೆ ಆಯುಕ್ತರ ಮೇಲೆ FIR

ಚುನಾವಣಾಧಿಕಾರಿ ಆಗಲು ಪೈಪೋಟಿ

ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಜಿಲ್ಲಾ ಸಹಕಾರಿ ಸಂಘದ ಅಧಿಕಾರಿಯೊಂದಿಗೆ ಪೈಪೋಟಿ ನಡೆಸಿ ಚುನಾವಣಾಧಿಕಾರಿಯಾಗಿ ಹಾಕಿಸಿಕೊಂಡು ಬಂದು ಚುನಾವಣಾ ಖರ್ಚು, ವೆಚ್ಚದ ಹೆಸರಿನಲ್ಲಿ ಹಣವನ್ನು ಗೋಲ್‌ಮಾಲ್‌ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಸಂಘಗಳ ಬೋನಸ್‌ಗೂ ಕೊಕ್ಕೆ:

ಸತತ 2-3 ವರ್ಷಗಳ ಕಾಲ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಫಲಾನುಭವಿಗಳಿಗೆ ಆಡಳಿತ ಮಂಡಳಿ ಉಳಿತಾಯ ಮಾಡುವ ಹಣವನ್ನು ಬೋನಸ್‌ ಮೂಲಕ ಉಳಿಸಿ ಹಾಲು ಉತ್ಪಾದಕರಿಗೆ ನೀಡುವ ಸಮಯದಲ್ಲಿ ಚುನಾವಣೆ ಬಂದು ಬೋನಸ್‌ ಹಣ ಸಹ ಚುನಾವಣಾಧಿಕಾರಿಗಳ ಪಾಲಾಗುತ್ತಿದೆ. ಈ ಅವ್ಯವಹಾರದಲ್ಲಿ ಸಹಕಾರ ಸಂಘಗಳ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕು ಇದೆಯೆಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾದ್ಯಂತ ಎಂಪಿಸಿಎಸ್‌ ಚುನಾವಣೆ ಹೆಸರಲ್ಲಿ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಸಂಭಾವನೆ ಸೇರಿದಂತೆ ವಿವಿಧ ಖುರ್ಚು, ವೆಚ್ಚಗಳ ಹೆಸರಲ್ಲಿ ಸಾಕಷ್ಟುಅಕ್ರಮಗಳನ್ನು ನಡೆಸಿ ಲಕ್ಷಾಂತರ ರು, ವಂಚನೆ ಮಾಡುತ್ತಿದ್ದು ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಈಗಾಗಲೇ ರಾಜ್ಯ ಸಹಕಾರಿ ಸಂಘಗಳ ಚುನಾವಣಾ ಆಯುಕ್ತರಿಗೆ ಹಾಗೂ ಉಚ್ಚ ನ್ಯಾಯಾಲಯಕ್ಕೆ ಈ ಕುರಿತು ಅರ್ಜಿ ಸಲ್ಲಿಸಿದ್ದೇನೆ. ಉತ್ಪಾದಕರಿಗೆ ಆಗುತ್ತಿರುವ ಹಗಲು ದರೋಡೆಯ ಬಗ್ಗೆ ತನಿಖೆ ಮಾಡಿ ಹಾಲು ಉತ್ಪಾದಕರಿಗೆ ಆಗುತ್ತಿರುವ ಆನ್ಯಾಯ ಸರಿಪಡಿಸದೇ ಹೋದರೆ ಜಿಲ್ಲಾ ಸಹಕಾರಿ ಸಂಘದ ಮುಂದೆ ಧರಣಿ ಮಾಡುತ್ತೇನೆ ಎಂದು ಕೋಚಿಮುಲ್‌ ನಿರ್ದೇಶಕ ವೈ.ಬಿ.ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಎಂಪಿಸಿಎಸ್‌ ಚುನಾವಣೆ ನಡೆಸಲು ಲಕ್ಷಾಂತರ ರು, ಖರ್ಚು ಬರುವುದಿಲ್ಲ. ಸಾಮಾನ್ಯ ಸಭೆಗೆ ಬಾರದವರು, ಡೇರಿಗೆ ಹಾಲು ಹಾಕದವರು ಮತ ಚಲಾಯಿಸಲು ಅರ್ಹರಲ್ಲ. ಆದ್ದರಿಂದ ಸಂಘಕ್ಕೆ 20, 30 ಮಂದಿ ಸದಸ್ಯರು ಇರುತ್ತಾರೆ. ಚುನಾವಣಾ ಖರ್ಚು ಲಕ್ಷಾಂತರ ಆಗುವುದಿಲ್ಲ. ಚುನಾವಣೆಗೆ ನಿಂತ ಅಭ್ಯರ್ಥಿಗಳು ವೈಯಕ್ತಿಕವಾಗಿ ಖರ್ಚು ಮಾಡಿದ್ದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲ ಎಂದು ಚಿಕ್ಕಬಳ್ಳಾಪುರ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರು ಬಿ.ಜಿ.ಮಂಜುಳ ಹೇಳಿದ್ದಾರೆ.

Latest Videos
Follow Us:
Download App:
  • android
  • ios