Asianet Suvarna News Asianet Suvarna News

ಸಾರ್ವಜನಿಕ ಉದ್ಯಾನದ ಜಾಗ ಕಬಳಿಕೆ ಆರೋಪ; ಶಾಸಕ ತಿಪ್ಪಾರೆಡ್ಡಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ

ಸಾರ್ವಜನಿಕರ ಉಪಯೋಗಕ್ಕೆ ಮೀಸಲಿದ್ದ ಉದ್ಯಾನವನದ ಜಾಗವನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಗರಸಭೆಯಿಂದ ಖಾತೆ ಮಾಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಶಾಸಕರನ್ನು ಎ1 ಆರೋಪಿಯನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲ ಪಿ.ಲೀಲಾಧರ್ ಠಾಕೂರ್ ಆಗ್ರಹಿಸಿದ್ದಾರೆ. 

Allegation of land grabbing against Chitradurga MLA Tippareddy rav
Author
First Published Jan 24, 2023, 10:02 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್


ಚಿತ್ರದುರ್ಗ (ಜ.24) : ಸಾರ್ವಜನಿಕರ ಉಪಯೋಗಕ್ಕೆ ಮೀಸಲಿದ್ದ ಉದ್ಯಾನವನದ ಜಾಗವನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಗರಸಭೆಯಿಂದ ಖಾತೆ ಮಾಡಿಸಿ ವಾಸೋಪಯೋಗಕ್ಕೆ ಸುಮಾರು 14822 ಚದರ ಅಡಿ ಮಾರಾಟ ಮಾಡಿರುವುದು ಬಯಲಾಗಿದ್ದು, ಶಾಸಕರನ್ನು ಎ1 ಆರೋಪಿಯನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲ ಪಿ.ಲೀಲಾಧರ್ ಠಾಕೂರ್ ಆಗ್ರಹಿಸಿದ್ದಾರೆ. 

ಇಂದು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ ವಾರ್ಡ್ ನಂ.23 ವ್ಯಾಪ್ತಿಯ ಆದರ್ಶ ನಗರದಲ್ಲಿ ಜಿ.ಹೆಚ್.ಹನುಮಂತರೆಡ್ಡಿ ಅಂಡ್ ಕೋ ಪಾಲುದಾರಿಕೆಗೆ ಸಂಬಂಧ ಪಟ್ಟ ಮಠದ ಕುರುಬರ ಹಟ್ಟಿ ಗ್ರಾಮದ ರಿ.ಸ.ನಂ. 19 ಮತ್ತು 21/1 ರ ಜಮೀನುಗಳ ಒಟ್ಟು 21.34 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶದಿಂದ ಭೂ ಪರಿವರ್ತನೆ ಆದೇಶ ಪಡೆದ ನಂತರ ಇದರಲ್ಲಿ 5.13 ಎಕರೆ ಜಮೀನನ್ನು ಕೈಗಾರಿಕಾ ಉಪಯೋಗದಿಂದ ವಾಸೋಪಯೋಗಕ್ಕೆ 1997 ರಲ್ಲಿ ಭೂ ಪರಿವರ್ತನೆ ಮಾಡಿಸಿದ್ದಾರೆ. ಇದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಹಾಗೂ ವಿನ್ಯಾಸದ ಬಗ್ಗೆ ಅಂತಿಮ ಅನುಮೋದನೆ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಶಾಸಕ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪ: ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ ರಘು ಆಚಾರ್‌

ಇದರಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಉದ್ಯಾನವನದ ಜಾಗವಾಗಿ 14822 ಚದರ ಅಡಿ ಜಾಗವನ್ನು ಮೀಸಲಿಡಲಾಗಿತ್ತು. ಆದರೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಗರಸಭೆ ಅಧಿಕಾರಿಗಳಿಗೆ ಬೆದರಿಸಿ ದಿನಾಂಕ: 25-7-2010 ರಲ್ಲಿ ಮಾರಾಟ ಮಾಡಿದ್ದಾರೆ. ನಂತರ ಸುರೇಶ್ ಅವರು ಟಿ.ಗುರುರಾಜ್ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಗುರುರಾಜ್ ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯುವ ವೇಳೆಯಲ್ಲಿ ನಿವೇಶನ ಉದ್ಯಾನವನದ ಜಾಗವಾಗಿದೆ ನಿಮಗೆ ಸುಳ್ಳು ದಾಖಲೆ ಸೃಷ್ಟಿ ಮಾಡಿ‌ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದಾಗ ಪ್ರಕರಣ ಬಯಲಿಗೆ ಬಂದಿದೆ ಎಂದು ವಿವರಿಸಿದರು.

ನಿವೇಶನಕ್ಕೆಂದು ಹಣ ಹುಡಿಕೆ ಮಾಡಿದ್ದ ಗುರುರಾಜ್ ಚಿತ್ರದುರ್ಗದ ನ್ಯಾಯಾಲಯದಲ್ಲಿ  ಖಾಸಗಿ ಪ್ರಕರಣ ದಾಖಲು ಮಾಡುತ್ತಾರೆ.  ನ್ಯಾಯಾಲಯವು ಈ ಸಂಬಂಧ ಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದೆ‌. ಆದರೂ ಕೂಡ ಅಧಿಕಾರಿಗಳು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಹೆಸರನ್ನು ಕೈ ಬಿಟ್ಟಿದ್ದಾರೆ. . ಸುರೇಶ್ ಅವರನ್ನೇ ಮೊದಲ ಆರೋಪಿಯಾಗಿ ಮಾಡಿದ್ದು, ಉಳಿದವರನ್ನು ಕೈ ಬಿಟ್ಟಿದ್ದಾರೆ. ಆದರೆ ಕಾನೂನು ಪ್ರಕಾರ ಯಾರು ಮೊದಲು ಮಾರಾಟ ಮಾಡಿದ್ದಾರೋ ಅವರನ್ನೆ ಎ1 ಆರೋಪಿಯಾಗಿ ಮಾಡಬೇಕಿದೆ. ಆ ಕಾರ್ಯವನ್ನು ಅಧಿಕಾರಿಗಳು ಮಾಡಿಲ್ಲ. ಸಾಮಾನ್ಯ ನಾಗರಿಕನು ತಪ್ಪು ಮಾಡಿದಾಗ ನೀಡುವ ಶಿಕ್ಷೆ ಉನ್ನತ ವ್ಯಕ್ತಿಗಳಿಗೂ ಸಿಗಬೇಕು ಎಂದು ಈ ಕುರಿತು ಕಳೆದ ದಿನಾಂಕ:18-1-2023 ರಂದು ರಾಜ್ಯ ಉಚ್ವ ನ್ಯಾಯಾಲಯಕ್ಕೆ ಮನವಿ ಮಾಡಿದ್ದೆನೆ ಎಂದು ಹೇಳಿದರು.

ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ರೂ. ಕಮೀಷನ್‌ ಕೊಟ್ಟಿದ್ದೇನೆ: ಗುತ್ತಿಗೆದಾರ ಮಂಜುನಾಥ್ ಆರೋಪ

5 ಭಾರೀ ಶಾಸಕನಾಗಿದ್ದೆನೆ ಎಂದು ಹೇಳಿಕೊಳ್ಳುವ ಶಾಸಕ ತಿಪ್ಪಾರೆಡ್ಡಿ ಸಾರ್ವಜನಿಕರ ಆಸ್ತಿಪಾಸ್ತಿ ಯನ್ನು ರಕ್ಷಣೆ ಮಾಡಬೇಕು. ಅದನ್ನು ಬಿಟ್ಟು ಅವರ ಅಧಿಕಾರ ದುರುಪಯೋಗ ಮಾಡಿಕೊಂಡು ಖಾತೆ ಮಾಡಿಸಿಕೊಳ್ಳುತ್ತಾರೆ. ನಗರಸಭೆ ಸಿಬ್ಬಂದಿ ಕೂಡ ಶಾಸಕರ ಫೈಲ್ ಅಂದರೆ ಕಣ್ಣು ಮುಚ್ಚಿ‌ಕೆಲಸ ಮಾಡಿಕೊಡಬೇಕು. ಇಲ್ಲವಾದರೆ ತಕ್ಷಣ ಬೇರೆ ಕಡೆ ವರ್ಗಾವಣೆ ಮಾಡಿಸುತ್ತಾರೆ ಇಂತಹ ವ್ಯಕ್ತಿ ಮೇಲೆ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯರಾದ ರವಿಶಂಕರ್ ಬಾಬು, ಶ್ರೀರಾಮ್ ಉಪಸ್ಥಿತರಿದ್ದರು.

Follow Us:
Download App:
  • android
  • ios