ಸುಧಾಕರ್‌ ಬಣದ ಮೇಲೆ ಗಂಭೀರ ಆರೋಪ : ಜೆಡಿಎಸ್ ಮುಖಂಡಗೆ ಹಣ ನೀಡಿದ್ರಾ..?

ಸುಧಾಕರ್ ಬಣದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಹಣಕೊಟ್ಟು ಮತ ಖರೀದಿ ಆರೋಪ ಮಾಡಲಾಗಿದೆ.

Allegation Against Chikkaballapur leader MC Sudhakar Supporters snr

ಚಿಕ್ಕಬಳ್ಳಾಪುರ (ನ.04): ಜೆಡಿಎಸ್‌ ಸದಸ್ಯರೊಬ್ಬರು ನೀಡಿದ ಮತದಿಂದಾಗಿ ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್‌ ಬೆಂಬಲಿಗರು ನಗರಸಭೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಯೇ ಹೊರತು ಸ್ವತ ಬಲದಿಂದಲ್ಲ ಎಂದು ಜೆಡಿಎಸ್‌ ನಗರಸಭಾ ಸದಸ್ಯರು ಮಾಜಿ ಶಾಸಕ ಸುಧಾಕರ್‌ ಹಾಗೂ ಅವರ ಬೆಂಬಲಿಗರಿಗೆ ತಿರುಗೇಟು ನೀಡಿದರು.

ಚಿಂತಾಮಣಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಸುಧಾಕರ್‌ ಬೆಂಬಲಿಗರು ಜೆಡಿಎಸ್‌ ಸದಸ್ಯ ಮಹಮದ್‌ ಶೆಫೀಕ್‌ ರವರಿಗೆ ಹಣದ ಅಮಿಷ ಒಡ್ಡಿ ತಮ್ಮ ಪರವಾಗಿ ಮತ ಚಲಾಯಿಸಿಕೊಂಡು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಆರೋಪಿಸಿದರು.

ಗೆದ್ದರೆ ಜನಾರ್ದನ ತೀರ್ಪು : ಸೋತರೆ ಇವಿಎಂ ಫಾಲ್ಟ್ ..

ಆರು ವರ್ಷಗಳಿಂದ ಚಿಂತಾಮಣಿ ನಗರದಲ್ಲಿ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ ಎಂದು ಮಾಜಿ ಶಾಸಕ ಸುಧಾಕರ್‌, ಶಾಸಕ ಜೆಕೆ ಕೃಷ್ಣಾರೆಡ್ಡಿರವರ ವಿರುದ್ದ ಹರಿಹಾಯ್ದ ಬಗ್ಗೆಯು ನಗರಸಭಾ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಅಗ್ರಹಾರ ಮುರಳಿ, ದೇವಳಂ ಶಂಕರ್‌, ಮಂಜುನಾಥ್‌, ಸಿಕೆ ಶಬ್ಬೀರ್‌,ಆಲ್ಲು, ಟಮೋಟ ಗೌಸ್‌, ಕೃಷ್ಣಮೂರ್ತಿ, ಮಾಜಿ ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ವೆಂಕಟರವಣಪ್ಪ, ಜೆಡಿಎಸ್‌ ತಾ. ಉಪಾಧ್ಯಕ್ಷ ದಿನ್ನಮಿಂದಹಳ್ಳಿ ಬೈರಾರೆಡ್ಡಿ ಮತ್ತಿತರರು ಉಪಸ್ಥಿತಿರಿದ್ದರು.

Latest Videos
Follow Us:
Download App:
  • android
  • ios