ಹಾಸನ(ಸೆ.28): ಕಾಂಗ್ರೆಸ್ಸಿನ ಮಾಜಿ ಸಚಿವ ಅನಿಲ್‌ ಲಾಡ್‌ ಸೇರಿದಂತೆ ಬಿಜೆಪಿಗೆ ಯಾರು ಬೇಕಾದರೂ ಬರಬಹುದು. ಆದರೆ ಬರುವವರಿಂದ ಮತ್ತು ಹೋಗುವವರಿಂದ ಸಂಘಟನೆಯಲ್ಲಿ ವ್ಯತ್ಯಾಸ ಆಗುತ್ತೆ ಎಂದು ನಾನು ಭಾವಿಸಿಲ್ಲ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟೆಲಿಫೋನ್‌ ಮೇಲೆ ಒತ್ತಿ ಯಾರು ಬೇಕಾದರೂ ಬಿಜೆಪಿ ಸದಸ್ಯತ್ವ ಪಡೆಯಬಹುದು ಎಂದು ತಮ್ಮ ಪಕ್ಷದ ನಾಯಕರು ಘೋಷಣೆ ಮಾಡಿದ್ದಾರೆ. ರಾಜಕೀಯ ಪಕ್ಷದಲ್ಲಿ ಮಡಿವಂತಿಕೆ ಇಲ್ಲ. ಬಿಜೆಪಿ ಕೇಡರ್‌ ಬೇಸ್‌ ಪಕ್ಷ, ಸಂಘಟನೆಯಿಂದ ಬೆಳೆದು ಬಂದಿರುವ ಪಕ್ಷ ಎಂದು ಪ್ರತಿಪಾದನೆ ಮಾಡಿದರು.

ಹಾಸನ: KSRTC ಬಸ್‌ನಲ್ಲಿ ಸ್ಟೂಡೆಂಟ್ಸ್ ಫುಲ್ ರೋಮ್ಯಾನ್ಸ್.. ಎಲ್ಲಿಗೆ ಬಂತು ಕಾಲ!

ನಾವುಗಳಿದ್ರೂ ಪಕ್ಷ ಚೆನ್ನಾಗಿರುತ್ತೆ, ಬೇರೆಯವರು ಬಂದರೂ ಪಕ್ಷ ಚೆನ್ನಾಗಿರುತ್ತೆ. ಹಾಗಾಗಿ ಬರುವುದರಿಂದ ಮತ್ತು ಹೋಗುವುದರಿಂದ ಸಂಘಟನೆ ವ್ಯತ್ಯಾಸವೇನು ಆಗಲ್ಲ. ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗಳು ಚುನಾವಣಾ ಆಯೋಗ ಘೋಷಣೆ ಮಾಡಿದಾಗ ಆಗುತ್ತವೆ. ಈ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಅನ್ನೋ ಆಸೆ ಇದೆ ಎಂದರು.

ಅಲೋಕ್‌ ವಿಚಾರಣೆ ನಡೆಯುತ್ತಿದೆ:

ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿ ಅಲೋಕ್‌ ಕುಮಾರ್‌ ವಿಚಾರಣೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವ ಮಧ್ಯೆ ಕಾಲ್ಪನಿಕವಾಗಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಹೇಳಿದರು.

ಸಚಿವರ ಮಾತಿಗೆ ವಕೀಲರ ಮಧ್ಯೆಯೇ ವಾಗ್ವಾದ..! ಅಷ್ಟಕ್ಕೂ ಮಾಧುಸ್ವಾಮಿ ಹೇಳಿದ್ದೇನು..?