Kannada sahitya sammelana: ಪುಸ್ತಕ ಪ್ರದರ್ಶನಕ್ಕೆ ಹರಿದು ಬಂದ ಜನಸಾಗರ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಬಹುತೇಕರು ಪುಸ್ತಕ ಪ್ರದರ್ಶನ(Book exhibition) ಮಾರಾಟ ಮಳಿಗೆ(Sales outlet)ಗೆ ಭೇಟಿ ನೀಡಿ ಪುಸ್ತಕಗಳನ್ನು ಗಮನಿಸಿದರು. ಅದರಲ್ಲೂ ಮಹಿಳೆಯರು, ಯುವ ಸಮುದಾಯ ಈ ಬಾರಿ ಪುಸ್ತಕ ಮಳಿಗೆಗೆ ಹೆಚ್ಚೆಚ್ಚು ಬಂದಿದ್ದು ವಿಶೇಷವಾಗಿತ್ತು.
ಶಿವಕುಮಾರ ಕುಷ್ಟಗಿ
ಹಾವೇರಿ (ಜ.7) : ಕೊರೊನಾ ಸಂಕಷ್ಟದ ನಂತರ ನಡೆದ ಮೊದಲ ಸಾಹಿತ್ಯ ಸಮ್ಮೇಳನವಾದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯದ ಮೊದಲ ದಿನವೇ ಪುಸ್ತಕ ಪ್ರದರ್ಶನ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ಅತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಸಮ್ಮೇಳನ ಉದ್ಘಾಟಿಸಿ ಭಾಷಣ ಮುಗಿಸುತ್ತಿದ್ದಂತೆ ಕಾರ್ಯ ಕ್ರಮಕ್ಕೆ ಬಂದಿದ್ದ ಬಹುತೇಕರು ಪುಸ್ತಕ ಪ್ರದರ್ಶನ(Book exhibition) ಮಾರಾಟ ಮಳಿಗೆ(Sales outlet)ಗೆ ಭೇಟಿ ನೀಡಿ ಪುಸ್ತಕಗಳನ್ನು ಗಮನಿಸಿದರು. ಅದರಲ್ಲೂ ಮಹಿಳೆಯರು, ಯುವ ಸಮುದಾಯ ಈ ಬಾರಿ ಪುಸ್ತಕ ಮಳಿಗೆಗೆ ಹೆಚ್ಚೆಚ್ಚು ಬಂದಿದ್ದು ವಿಶೇಷವಾಗಿತ್ತು. ಕನ್ನಡದ ಪುಸ್ತಕಗಳನ್ನು ಓದುವವರಿಲ್ಲ ಎಂದು ಪುಸ್ತಕ ಪ್ರಕಾಶಕರು ಅಲವತ್ತು ಕೊಳ್ಳುವ ಈ ದಿನಗಳಲ್ಲಿ ಹಾವೇರಿಯಲ್ಲಿ ಪುಸ್ತಕ ಮಳಿಗೆಗಳಿಗೆ ಯುವಕರೇ ಹೆಚ್ಚಾಗಿ ಭೇಟಿ ನೀಡಿ ಆಸಕ್ತಿಯಿಂದ ಪುಸ್ತಕಗಳನ್ನು ವೀಕ್ಷಿಸುತ್ತಿದ್ದುದು ವ್ಯಾಪಾರಿಗಳ ಸಂತಸವನ್ನು ಹೆಚ್ಚಿಸಿತು.
Kannada sahitya sammelana: ಊಟೋಪಚಾರಕ್ಕೆ ಸಾಹಿತ್ಯಾಭಿಮಾನಿಗಳು ಖುಷ್; Mobile Network ಇಲ್ಲದೆ ಪರದಾಟ!
300ಕ್ಕೂ ಹೆಚ್ಚು ಮಳಿಗೆಗಳು:
ಈ ಬಾರಿ ಸಮ್ಮೇಳನದಲ್ಲಿ ಪುಸ್ತಕ, ವಾಣಿಜ್ಯ ವಹಿವಾಟಿಗೆ ದಾಖಲಾರ್ಹ ಮಳಿಗೆಗೆಗಳನ್ನು ವಿನ್ಯಾಸಗೊಳಿಸಿದ್ದು, ಅವುಗಳಲ್ಲಿ 300ಕ್ಕೂ ಅಧಿಕ ಮಳಿಗೆಗಳನ್ನು ಪುಸ್ತಕಕ್ಕೆ ಮೀಸಲಾಗಿಡಲಾಗಿದೆ. ಎಲ್ಲಾ ಮಳಿಗೆಗಳೂ ಸಂಪೂರ್ಣ ಭರ್ತಿಯಾಗಿದ್ದವು. ಆದರೆ ಕೆಲ ಪುಸ್ತಕ ಮಳಿಗೆಗಳಿಗೆ ವಾಣಿಜ್ಯ ಮಳಿಗೆಗಳ ಜಾಗದಲ್ಲಿ ಅವಕಾಶ ನೀಡಿರುವುದು ಪುಸ್ತಕ ಪ್ರಕಾಶಕರ ಬೇಸರಕ್ಕೆ ಕಾರಣವಾಗಿದೆ. ವಾಣಿಜ್ಯ ಮಳಿಗೆಗಳನ್ನು ವೀಕ್ಷಿಸಲು ಆಸಕ್ತಿ ಇಲ್ಲದವರು ಕೇವಲ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ವಾಪಸ್ ಹೋಗಿಬಿಡುತ್ತಾರೆ. ಹೀಗಾಗಿ ವಾಣಿಜ್ಯ ಮಳಿಗೆಗಳ ನಡುವೆ ಸಿಲುಕಿಕೊಂಡ ನಮಗೆ ವ್ಯಾಪಾರ ಸರಿಯಾಗಿ ಆಗುತ್ತಿಲ್ಲ ಎಂದು ಅವರು ಬೇಸರ ತೋಡಿ ಕೊಂಡಿದ್ದಾರೆ.
ನೆಟ್‌ವರ್ಕ್ ಇಲ್ಲ,ಗೂಗಲ್ ಪೇ ಕೂಡ ಇಲ್ಲ
ಪುಸ್ತಕ ಪ್ರದರ್ಶನ ಮಾರಾಟ ಮಳಿಗೆಗಳಿಗೆ ಜನರು ಹೆಚ್ಚಿನ ಉತ್ಸಾಹದಿಂದ ಭೇಟಿ ನೀಡಿ, ಪುಸ್ತಕಗಳನ್ನು ಖರೀದಿಸಲು ಮುಂದಾದರೂ ಅದಕ್ಕೆ ದೊಡ್ಡ ತೊಡಕಾಗಿದ್ದು, ನೆಟ್‌ವರ್ಕ್ ಪ್ರಾಬ್ಲಂ. ಪುಸ್ತಕ ಖರೀಸಿದವರು ಪೋನ್ ಪೇ, ಗೂಗಲ್ ಪೇ ಮಾಡಲು ಮುಂದಾದ ವೇಳೆಯಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಹಣ ವರ್ಗಾ ವಣೆಗೆ ತೀವ್ರ ತೊಂದರೆಯಾಯಿತು. ಇದರಿಂದಾಗಿ ಖಾತೆಯಲ್ಲಿ ಹಣವಿದೆ ಎಂದು ಬಂದವರಿಗೆ ನಿರಾಸೆಯಾ ಯಿತು. ಕೊನೆಗೆ ಪುಸ್ತಕ ಸ್ಟಾಲ್‌ಗಳಲ್ಲಿ ‘ನಗದು ಹಣವಿದ್ದರೆ ಮಾತ್ರ ಪುಸ್ತಕ, ದಯವಿಟ್ಟು ನಗದು ಕೊಟ್ಟು ಬುಕ್ ತೆಗೆದುಕೊಳ್ಳಿ’ ಎಂದು ಸ್ಟಾಲ್ ಹಾಕಿದವರು ಪುಸ್ತಕಪ್ರಿಯರನ್ನು ವಿನಂತಿಸಿದರು.
ಕನ್ನಡ ಭಾಷೆಗೆ ಶೀಘ್ರ ಕಾನೂನು ಬಲ: ಸಿಎಂ ಬೊಮ್ಮಾಯಿ
ಪುಸ್ತಕ ಮಾರಾಟ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿದೆ. ಎಲ್ಲಾ ಬಗೆಯ ಪುಸ್ತಕಗಳೂ ಲಭ್ಯವಿವೆ. ಅದರಲ್ಲೂ ಕೆಲ ಸ್ಟಾಲ್‌ಗಳಲ್ಲಿ ಪ್ರಮುಖ ಲೇಖಕರ ಎಲ್ಲಾ ಪುಸ್ತಕಗಳನ್ನು ಸೇರಿಸಿ ಪ್ಯಾಕೇಜ್ ರೂಪದಲ್ಲಿ ಡಿಸ್ಕೌಂಟ್ ಮೇಲೆ ಮಾರಾಟ ಮಾಡುತ್ತಿರುವುದು ಕೊಳ್ಳುವವರಿಗೆ ಹೆಚ್ಚು ಅನುಕೂಲವಾಗಿದೆ.
- ಸಹನಾ ಪಾಟೀಲ, ಮಹಾಲಕ್ಷ್ಮಿ ಪತ್ತಾರ, ಮಲ್ಲಪ್ಪ ಬೂದಿಹಾಳ,