ಬೀದರ್‌(ಜ.19): ಭಾರತೀಯ ವಾಯು ಪಡೆಯ ತರಬೇತಿ ವಿಭಾಗದ ಮುಖ್ಯಸ್ಥರಾದ ಏರ್‌ ಮಾರ್ಷಲ್‌ ಅರವಿಂದ ಸಿಂಗ್‌ ಬುಟೋಲಾ ಅವರು ಇತ್ತೀಚೆಗೆ ಬೀದರ್‌ ವಾಯು ಪಡೆಯ ಕೇಂದ್ರಕ್ಕೆ ಭೇಟಿ ನೀಡಿ, ಅವರು ಇಲ್ಲಿ ನಡೆದ ವಾಯು ಪಡೆ ಪೈಲಟ್‌ಗಳ ತರಬೇತಿ ಹಾಗೂ ಯುದ್ಧೋಪಕರಗಳ ತರಬೇತಿಗಳ ಮುಕ್ತಾಯದ (ಸಮಾರೋಪ) ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಬುಟೋಲಾ ಅವರೊಂದಿಗೆ ಪತ್ನಿ ಹಾಗೂ ವಾಯು ಪಡೆ ಸೈನಿಕರ ಪತ್ನಿಯರ ಕಲ್ಯಾಣ ಸಂಘದ ಪ್ರಾದೇಶಿಕ ಅಧ್ಯಕ್ಷರಾದ ಮೋನಿಕಾ ಬುಟೋಲಾ ಅವರು ಹಾಜರಿದ್ದರು. ಬೀದರ್‌ ವಾಯು ಪಡೆ ತರಬೇತಿ ಕೇಂದ್ರದ ಮುಖ್ಯಸ್ಥರಾದ ಏರ್‌ ಆಫೀಸರ್‌ ಕಮಾಂಡಿಂಗ್‌ ನಿಖಿಲೇಶ್‌ ಗೌತಮ್‌ ಅವರು ಬುಟೋಲಾ ಅವರನ್ನು ಹೂ ಗುಚ್ಛ ನೀಡಿ ಬರಮಾಡಿಕೊಂಡರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೀದರ್‌ ವಾಯುಪಡೆ ತರಬೇತಿ ಕೇಂದ್ರದ ಆಡಳಿತ, ತರಬೇತಿ ಹಾಗೂ ಇಲ್ಲಿನ ನಿರ್ವಹಣಾ ಪದ್ಧತಿಗಳನ್ನು ಬುಟೋಲಾ ಅವರಿಗೆ ಮಾಹಿತಿ ನೀಡಿದರು. ತರಬೇತಿ ಪೂರ್ಣಗೊಳಿಸಿದ ಪೈಲಟ್‌ಗಳಿಗೆ ಏರ್‌ ಮಾರ್ಷಲ್‌ ಅರವಿಂದ ಸಿಂಗ್‌ ಬುಟೋಲಾ ಅವರು ಪ್ರಮಾಣಪತ್ರ ಹಾಗೂ ಪಾರಿತೋಷಕಗಳನ್ನು ನೀಡಿದರು.

ತರಬೇತಿ ಪಡೆದ ಅಮನ್‌ ಸಿಂಗ್‌ ಅವರು ಪೈಲಟ್‌ ವಿಭಾಗದಲ್ಲಿ ಸರ್ವೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು. ಸುಪ್ರಭಾ ಸಕ್ಸೇನಾ ಅವರಿಗೆ ಯುದ್ಧೋಪಕರಣ ವಿಭಾಗದಲ್ಲಿ ಸರ್ವೋತ್ತಮ ಪ್ರಶಸ್ತಿ ನೀಡಲಾಯಿತು. ಬಳಿಕ ಬುಟೋಲಾ ಅವರು ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದರು.