ಮಳೆ ಜೋರು: ಧಾರವಾಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಶುರು

* ಕಳೆದ ಒಂದು ವಾರದಿಂದ ಸುರಿದ ಮಳೆ
* ಧಾರವಾಡ ಜಿಲ್ಲೆಯಾದ್ಯಂತ ರೈತರ ಮುಖದಲ್ಲಿ ಮಂದಹಾಸ
* ಧಾರವಾಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಶುರು

Agriculture works started in Dharwad rbj

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ, (ಮೇ.08) :
ಕಳೆದ ಒಂದು ವಾರದಿಂದ ಸುರಿದ ಮಳೆಗೆ ಧಾರವಾಡ ಜಿಲ್ಲೆಯಾದ್ಯಂತ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ವಾಡಕೆಯ ಪ್ರಮಾಣದಷ್ಟು ಸದ್ಯ ಬಿತ್ತನೆಗೆ ಎಷ್ಟು ಬೇಕು ಅಷ್ಟು ಮಳೆ ಆದ ಹಿನ್ನಲೆ ಸದ್ಯ ಧಾರವಾಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೋಂಡಿದೆ.

ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ.ಇನ್ನು ಕಳೆದ ವರ್ಷ ಜೂನ್ ಮೋದಲವಾರದಲ್ಲಿ ಬಿತ್ತನೆ ಆರಂಭ ಗೊಂಡಿದ್ದವು, ಸದ್ಯ ಕಳೆದ 8 ದಿನದಿಂದ ಸುರಿದ ಮಳೆಗೆ ಭೂಮಿ ಯನ್ನ ಕೆಲ ರೈತರು ಹದ ಗೊಳಿಸುತ್ತಿದ್ದರೆ ಇನ್ನು ಕೆಲ ರೈತರು ಬಿತ್ತನೆ ಕಾರ್ಯವನ್ನ ಆರಂಭ ಮಾಡಿದ್ದಾರೆ...ಜಿಲ್ಲೆಯಲ್ಲಿ ವಾಡಿಕೆಯ ಪ್ರಮಾಣದಲ್ಲಿ ಮಳೆ ಯಾಗಿರುವುದರಿಂದ ಬಿತ್ತನೆ ಕಾರ್ಯ ಆರಂಭ ಮಾಡಿದ್ದಾರೆ...

ಇನ್ನು ಪ್ರತಿ ವರ್ಷದಂತೆ ಈ ವರ್ಷವು ಮೇ ಮೊದಲನೇಯ ವಾರದಲ್ಲಿ ಶೇಂಗಾ ಬಿತ್ತನೆ ಕಾರ್ಯವನ್ನ ಧಾರವಾಡ ತಾಲೂಕಿನ ಈರಪ್ಪ ಅಂಗಡಿ ಎಂಬ ಪ್ರಗತಿಪರ ರೈತ ಬಿತ್ತನೆಯ ಕಾರ್ಯವನ್ನ. ಆರಂಭ ಮಾಡಿದ್ದಾರೆ...ಉತ್ತಮ ಮಳೆಯಾಗಿರುವ ಹಿ‌ನ್ನಲೆ ಸದ್ಯ ಶೇಂಗಾ ಬೆಳೆಯನ್ನ ಬಿತ್ತುತ್ತಿದ್ದಾರೆ...ಸದ್ಯ ರೈತರಿಗೆ ಗೊಬ್ಬರ ದರ ಕಡಿಮೆ ಮಾಡಬೇಕು ಎಂದು ಸರಕಾರಕ್ಕೆ ಅನ್ನದಾತರ ಕೇಳಿಕ್ಕೊಂಡಿದ್ದಾರೆ...ಮುಂಗಾರು ಮಳೆಯಾಗುತ್ತಿದ್ದಂತೆ ಗೊಬ್ಬರ ಅಂಗಡಿ ಅವರು ಬ್ಲ್ಯಾಕ್ ನಲ್ಲಿ ಹೆಚ್ಚಿಗೆ ಮಾರಾಟ ಮಾಡುತ್ತಾರೆ ಅದನ್ನ ಕೃಷಿ ಅಧಿಕಾರಿಗಳು ತಡೆಗಟ್ಟಬೇಕು.ಮತ್ತು ಅನ್ನದಾತರ ಸಂಕಷ್ಟಕ್ಕೆ ಸಹಾಯವಾಗುತ್ತೆ.

ಕಾಫಿನಾಡಿನಲ್ಲಿ ಚುರುಕುಗೊಂಡ ಕೃಷಿ ಕಾರ್ಯ: ಮಲೆನಾಡು, ಬಯಲು ಸೀಮೆಯಲ್ಲೂ ಬಿತ್ತನೆ ಕಾರ್ಯ

ಇನ್ನು ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ ಯಾಗಿರುವ ಹಿ‌ನ್ನಲೆ ರೈತರು ಭೂಮಿ ಯನ್ನ ಹದಗೊಳಿಸುತ್ತಿದ್ದರೆ..ಇನ್ನು ಕೆಲ ರೈತರು ಬಿತ್ತನೆಯ ಕಾರ್ಯವನ್ನ ಆರಂಭ ಮಾಡಿದ್ದಾರೆ...

ರೈತರ ಬೇಡಿಕೆ...:ಮುಂಗಾರು ಮೇಳೆ ಆತು ಅಂದರೆ ಸಾಕು ರೈತರಿಗೆ ಹಬ್ಬವೇ ಹಬ್ಬ..ಕಳೆದ ಮೂರು ವರ್ಷಧಿಂದ ಅತೀವೃಷ್ಠಿಯಿಂದ ಬೆಳೆದ ಬೆಳೆಗಳು ರೈತರ ಕೈಗೆ ಸೇರುತ್ತಿಲ್ಲ..ಆದರೆ ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯ ಆರಂಭ ಮಾಡಿದ್ದಾರೆ.. ಇನ್ನೊಂದಡೆ ಗೊಬ್ಬರ ಅಂಗಡಿ ಅವರು ಡಿಎಪಿ, ಯೂರಿಯಾ ,ರಸ ಗೊಬ್ಬರಗಳ ದರವನ್ನ ಹೆಚ್ಷಿನ ರೇಟಿಗೆ ಮಾರಾಟ ಮಾಡುತ್ತಾರೆ...ಅವಶ್ಯಕತೆ ಇದ್ದ ರೈತರು ಗೊಬ್ಬರವನ್ನು ಖರಿದಿ ಮಾಡಲೇಬೇಕಾದ ಅನಿರ್ವಾವಾಗಿದೆ..ಇನ್ನು ರೈತರಿಗೆ ಸೂಕ್ತ ಕಡಮೆ ದರದಲ್ಲಿ ಗೊಬ್ಬರ ಸಿಗುವ ಹಾಗೆ ಕೃಷಿ ಅಧಿಕಾರಿಗಳು ನಿಗಾ ಇಡಬೇಕು...ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಅಂಗಡಿಕಾರರಿಗೆ ಬುದ್ದಿ ಕಲಿಸಬೇಕಿದೆ..ರೈತರ ನೆರವಿಗೆ ನಿಲ್ಲ ಬೇಕಿದೆ...ಸರಕಾರ...ಎಂದು ರೈತ ಮಹಾದೇವ ಹುಂಬೇರಿ, ಈರಪ್ಪ ಅಂಗಡಿ ಏಷ್ಯಾ ನೆಟ್ ಸುವರ್ಣ ನ್ಯೂಸ್ ಗೆ ಕೇಳಿಕ್ಕೊಂಡರು...

Latest Videos
Follow Us:
Download App:
  • android
  • ios