ಕೃಷಿ ವಿಜ್ಞಾನಿ, ಪದ್ಮಭೂಷಣ ಭತ್ತದ ಮಹದೇವಪ್ಪ ನಿಧನ
ಕೃಷಿ ವಿಜ್ಞಾನಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಭತ್ತದ ಮಹದೇವಪ್ಪ| ಸರ್ಕಾರ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದ ಭಾರತ ಸರ್ಕಾರ| ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಾಲ್ಕನೇ ಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಮಹದೇವಪ್ಪ|
ಮೈಸೂರು(ಮಾ.06): ಕೃಷಿ ವಿಜ್ಞಾನಿ, ಪದ್ಮಭೂಷಣ ಭತ್ತದ ಮಹದೇವಪ್ಪ ಅವರು ಇಂದು(ಶನಿವಾರ) ನಿಧನ ಹೊಂದಿದ್ದಾರೆ. ಮೃತ ಮಹದೇವಪ್ಪ ಅವರಿಗೆ 83 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.
ಭತ್ತದ ಮಹದೇವಪ್ಪ ಅವರು ಕೃಷಿ ವಿಜ್ಞಾನಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ಡಾ. ಎಮ್. ಮಹಾದೇವಪ್ಪನವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಾಲ್ಕನೇ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಮಹಾದೇವಪ್ಪನವರು ಭತ್ತದ ಹೊಸ ಹೊಸ ತಳಿಗಳನ್ನ ಸಂಶೋಧಿಸಿದ್ದರು. ಹೀಗಾಗಿಯೇ ಇವರು ಭತ್ತದ ಮಹದೇವಪ್ಪ ಎಂದೇ ಹೆಸರುವಾಗಿದ್ದರು. ಇವರ ಸೇವೆಯನ್ನ ಪರಿಗಣಿಸಿದ ಭಾರತ ಸರ್ಕಾರ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮಹಾದೇವಪ್ಪ ಅವರಿಗೆ ಜೀವಮಾನ ಸಾಧನೆ ನೀಡಿ ಗೌರವಿಸಿತ್ತು.
ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ ಡಾ .ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಇನ್ನಿಲ್ಲ!
ನಾಳೆ(ಭಾನುವಾರ) ಮಧ್ಯಾಹ್ನ ಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ.