Asianet Suvarna News Asianet Suvarna News

ಮಳೆ ನಡುವೆಯೇ ಅಗ್ನಿಪಥ್‌ ಆಯ್ಕೆ; ಯುವಕರು ಉತ್ಸಾಹದಿಂದ ಭಾಗಿ

ಕೇಂದ್ರ ಸರ್ಕಾರದ ಯೋಜನೆ, ಸೇನೆಗೆ ಅಗ್ನಿವೀರರನ್ನು ಆಯ್ಕೆ ಮಾಡುವ ಅಗ್ನಿಪಥ್‌ ರಾರ‍ಯಲಿ ಸೋಮವಾರ ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುರಿಯುತ್ತಿರುವ ಮಳೆಯಲ್ಲಿಯೇ ಆರಂಭವಾಯಿತು.

Agneepath Recruitment Rally in Udupi  heavy rains rav
Author
First Published Jul 18, 2023, 12:20 PM IST

 ಉಡುಪಿ (ಜು.18) :  ಕೇಂದ್ರ ಸರ್ಕಾರದ ಯೋಜನೆ, ಸೇನೆಗೆ ಅಗ್ನಿವೀರರನ್ನು ಆಯ್ಕೆ ಮಾಡುವ ಅಗ್ನಿಪಥ್‌ ರಾರ‍ಯಲಿ ಸೋಮವಾರ ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುರಿಯುತ್ತಿರುವ ಮಳೆಯಲ್ಲಿಯೇ ಆರಂಭವಾಯಿತು.

ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿ ಒಟ್ಟು 11 ಜಿಲ್ಲೆಗಳ ಯುವಕರು ರಾರ‍ಯಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಸುಮಾರು 6800 ಮಂದಿ ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಮೊದಲ ದಿನ ಚಿಕ್ಕಮಗಳೂರು ಜಿಲ್ಲೆಯ 41, ಉಡುಪಿಯ 59, ದಕ್ಷಿಣ ಕನ್ನಡದ 88, ದಾವಣಗೆರೆಯ 91, ಶಿವಮೊಗ್ಗದ 92 ಹಾಗೂ ಹಾವೇರಿ ಜಿಲ್ಲೆಯ 294 ಸೇರಿದಂತೆ ಒಟ್ಟು 665 ಅಭ್ಯರ್ಥಿಗಳು ಭಾಗವಹಿಸಿದ್ದರು.

ಉಡುಪಿ: 17 ರಿಂದ ಅಗ್ನಿಪಥ್‌ Rally, 6800 ಯುವಕರ ನೋಂದಣಿ!

ಮೊದಲ ಸುತ್ತಿನಲ್ಲಿ 1600 ಮೀ. ದೂರವನ್ನು 5.30 ನಿಮಿಷ ಮತ್ತು 5.30 ರಿಂದ 5.45 ನಿಮಿಷದೊಳಗೆ ಓಡಿದವರನ್ನು ಪ್ರತ್ಯೇಕಗೊಳಿಸಲಾಯಿತು. ನಂತರ ಅವರಿಗೆ 9 ಅಡಿ ಕಂದಕ ಜಿಗಿತ, ಪುಲ್‌ಅಪ್‌, ಎತ್ತರ, ಎದೆಯ ಸುತ್ತಳತೆ, ದೇಹ ತೂಕ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಯಶಸ್ವಿಯಾದವರನ್ನು ಆಯ್ಕೆ ಮಾಡಲಾಯಿತು.

ಈ ರಾರ‍ಯಲಿಯಲ್ಲಿ ಅಗ್ನಿವೀರ್‌ ಜನರಲ್‌ ಡ್ಯೂಟಿ, ಅಗ್ನಿವೀರ್‌ ಟೆಕ್ನಿಕಲ್‌, ಅಗ್ನಿವೀರ್‌ ಟ್ರೇಡ್‌್ಸಮೆನ್‌, ಅಗ್ನಿವೀರ್‌ ಕ್ಲರ್ಕ್/ಸ್ಟೋರ್‌ ಕೀಪರ್‌ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.

ಯುವಕರಿಗೆ ಜಿಲ್ಲಾಧಿಕಾರಿ ಶ್ಲಾಘನೆ:

ಸೋಮವಾರ ಮುಂಜಾನೆ 6.15ಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಅವರು ರಾರ‍ಯಲಿಗೆ ಚಾಲನೆ ನೀಡಿದರು. ಅವರು ಮಾತನಾಡಿ, ದೇಶದ ರಕ್ಷಣೆ ಅತ್ಯಂತ ದೊಡ್ಡ ಸೇವೆಯಾಗಿದೆ. ಈ ಸೇವೆಗೆ ಸ್ವಯಂಸ್ಪೂರ್ತಿಯಿಂದ ಮುಂದೆ ಬಂದಿರುವ ಯುವಕರು ಶ್ಲಾಘನಾರ್ಹರು ಎಂದರು.

ಭೂಸೇನೆಯ ಅಡಿಷನಲ್‌ ಮೇಜರ್‌ ಜನರಲ್‌ ಆರ್‌.ಆರ್‌.ರೈನಾ, ಮಂಗಳೂರು ಸೇನಾ ನೇಮಕಾತಿ ವಿಭಾಗದ ಕರ್ನಲ್‌ ಅನುಜ್‌ ಗುಪ್ತ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ಹಾಜರಿದ್ದರು.

ಅಭ್ಯರ್ಥಿಗಳ ರೋಧನ - ಅಧಿಕಾರಿಗಳ ಸಮಾಧಾನ!

Rally ಯಲ್ಲಿ 1600 ಮೀ. ಓಟವನ್ನು 5.45 ನಿಮಿಷಗೊಳಗೆ ಓಟ ಮುಗಿಸದವರನ್ನು ಅನರ್ಹಗೊಳಿಸಲಾಯಿತು. ಆದರೆ ಕೆಲವೇ ಸೆಕಂಡ್‌ಗಳ ಅಂತರದಲ್ಲಿ ಓಟ ಪೂರ್ಣಗೊಳಿಸಲಾಗದೆ ವಿಫಲರಾದ ಹಲವು ಅಭ್ಯರ್ಥಿಗಳು ಸ್ಥಳದಲ್ಲೇ ರೋಧಿಸಿ, ತಮ್ಮನ್ನು ಪರಿಗಣಿಸುವಂತೆ ಸೇನೆಯ ಅಧಿಕಾರಿಗಳಲ್ಲಿ ಬೇಡಿಕೊಳ್ಳುತ್ತಿದ್ದರು. ಆದರೆ ಸೇನೆಯ ಅಧಿಕಾರಿಗಳು ಅವರನ್ನು ಮುಂದಿನ ರಾರ‍ಯಲಿಯಲ್ಲಿ ಮತ್ತೊಮ್ಮೆ ಪ್ರಯತ್ನಿಸುವಂತೆ ಸಮಾಧಾನ ಮಾಡಿ ಕಳುಹಿಸುತ್ತಿದ್ದರು.

ವಾಯುಸೇನೆಗೆ ಸಮರ್ಪಣೆಗೊಂಡ ಮೊದಲ ಅಗ್ನಿ ವೀರರು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕುಂದಾನಗರಿ!

ಉಡುಪಿ ಜಿಲ್ಲಾಡಳಿದಿಂದ ಅತ್ಯುತ್ತಮ ವ್ಯವಸ್ಥೆ

ಓಟದ ಸ್ಪರ್ಧೆಯಲ್ಲಿ ನಿತ್ರಾಣರಾಗಿ ಕುಸಿದವರಿಗೆ ತುರ್ತು ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲು ಆ್ಯಂಬುಲೆನ್ಸ್‌, ವೈದ್ಯಾಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಸ್ಥಳದಲ್ಲಿ ಯಾವುದೇ ಗದ್ದಲ, ನೂಕು ನುಗ್ಗಲು ಉಂಟಾಗದಂತೆ ಪೊಲೀಸ್‌ ಸಿಬ್ಬಂದಿ ಅಗತ್ಯ ಮುಂಜಾಗ್ರತೆ ವಹಿಸಿದ್ದರು. ದೂರದೂರುಗಳಿಂದ ಬಂದ ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ಉಡುಪಿ ಜಿಲ್ಲಾಡಳಿತ ಉಡುಪಿ ಮತ್ತು ಸುತ್ತಮುತ್ತಲಿನ ದೇವಾಲಯಗಳಲ್ಲಿ ಉಚಿತ ವ್ಯವಸ್ಥೆ ಮಾಡಲಾಗಿದೆ.

Follow Us:
Download App:
  • android
  • ios