Asianet Suvarna News Asianet Suvarna News

ಉಡುಪಿ: 17 ರಿಂದ ಅಗ್ನಿಪಥ್‌ Rally, 6800 ಯುವಕರ ನೋಂದಣಿ!

ಭಾರತೀಯ ಸೇನೆಯ ಅಗ್ನಿ ಪಥ್‌ ಸೇನಾ ನೇಮಕಾತಿ ರಾರ‍ಯಲಿ ಜು.17ರಿಂದ 25ರ ತನಕ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ವರೆಗೆ 11 ಜಿಲ್ಲೆಗಳಿಂದ 6,800 ಅಧಿಕ ಮಂದಿ ಯುವಕರು ಹೆಸರು ನೋಂದಣಿ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ತಿಳಿಸಿದ್ದಾರೆ.

Agnipath recruitment rally 6800 youths Registration at udupi district rav
Author
First Published Jul 13, 2023, 1:20 PM IST

ಮಣಿಪಾಲ (ಜು.13) : ಭಾರತೀಯ ಸೇನೆಯ ಅಗ್ನಿ ಪಥ್‌ ಸೇನಾ ನೇಮಕಾತಿ ರಾರ‍ಯಲಿ ಜು.17ರಿಂದ 25ರ ತನಕ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ವರೆಗೆ 11 ಜಿಲ್ಲೆಗಳಿಂದ 6,800 ಅಧಿಕ ಮಂದಿ ಯುವಕರು ಹೆಸರು ನೋಂದಣಿ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ತಿಳಿಸಿದ್ದಾರೆ.

ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ರಾರ‍ಯಲಿಯ ಪೂರ್ವಸಿದ್ಧತೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾರ‍ಯಲಿಗೆ ಈಗಾಗಲೇ ಆನ್‌ಲೈನ್‌ ಮೂಲಕ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದಾರೆ. ಪ್ರತಿದಿನ 1000 ಮಂದಿ ನೇಮಕಾತಿ ಪರೀಕ್ಷೆಗೆ ಆಗಮಿಸಲಿದ್ದು, ಅವರಿಗೆ ಕುಡಿಯುವ ನೀರು, ಸಾಕಷ್ಟುಸಂಖ್ಯೆಯ ಮೊಬೈಲ್‌ ಟಾಯ್ಲೆಟ್‌ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಿ, ಕ್ರೀಡಾಂಗಣದ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

NABARD: ಪಿಎಂ ಸ್ವನಿಧಿ ಯೋಜನೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ

ಅಭ್ಯರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗದಂತೆ, ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗದಂತೆ ಮತ್ತು ರಾತ್ರಿ ವೇಳೆಯಲ್ಲಿ ಅಭ್ಯರ್ಥಿಗಳು ರಸ್ತೆ ಬದಿಗಳಲ್ಲಿ ಮಲಗದಂತೆ, ಕ್ರೀಡಾಂಗಣ ಸುತ್ತಮುತ್ತ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸುವಂತೆ ಪೊಲೀಸ್‌ ಇಲಾಖೆ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಡಿವೈಎಸ್ಪಿ ಸಿದ್ಧಲಿಂಗಪ್ಪ, ನಗರಸಭೆಯ ಪೌರಾಯುಕ್ತ ರಾಯಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ ಕುಮಾರ್‌ ಶೆಟ್ಟಿಮತ್ತಿತರರಿದ್ದರು.

Follow Us:
Download App:
  • android
  • ios