ಬೆಂಗಳೂರಿನಲ್ಲಿ ಮತ್ತೆ ಟ್ರಾಫಿಕ್‌ ಜಾಮ್‌| ಬೆಳಿಗ್ಗೆಯಿಂದಲೇ ರಸ್ತೆಗಿಳಿದ ವಾಹನಗಳು| ಐಟಿಪಿಎಲ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌| ಪರಿಸ್ಥಿತಿಯನ್ನ ನಿಭಾಯಿಸಲು ಹರಸಾಹಸ ಪಡುತ್ತಿರುವ ಪೊಲೀಸರು|  ಹೆಬ್ಬಾಳದಲ್ಲಿ ರಸ್ತೆಗಳಿದ ಬೈಕ್‌, ವಾಹನಗಳನ್ನ ತಪಾಸಣೆ ನಡೆಸುತ್ತಿರುವ ಪೊಲೀಸರು|

ಬೆಂಗಳೂರು(ಏ.23): ರಾಜ್ಯದಲ್ಲಿ ದಿನೇ ದಿನೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಏತನ್ಮಧ್ಯೆ ಕಳೆದೊಂದು ತಿಂಗಳಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ ಇಂದಿನಿಂದ(ಗುರುವಾರ) ಸ್ವಲ್ಪ ಮಟ್ಟಿಗೆ ಸಡಿಲವಾಗಿದೆ. ಇದರಿಂದ ಜನರು ಕೊಂಚ ನಿರಾಳರಾಗಿದ್ದಾರೆ. ಅದು ಕೂಡ ಕಂಟೈನ್‌ಮಂಟ್‌ ಪ್ರದೇಶ ಹೊರತು ಪಡಿಸಿ ಉಳಿದ ಪ್ರದೇಶಗಳಿಗೆ ಲಾಕ್‌ಡೌನ್‌ ಸಡಿಲಿಕೆ ಅನ್ವಯವಾಗಲಿದೆ. 

"

ಲಾಕ್‌ಡೌನ್‌ ಸ್ವಲ್ಪ ಮಟ್ಟಿಗೆ ಸಡಿಲಿಕೆಯಾಗಿದ್ದರಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಬೆಳಿಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದಿವೆ. ಇದರಿಂದ ಐಟಿಪಿಎಲ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಪರಿಸ್ಥಿತಿಯನ್ನ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

"

ಇಷ್ಟು ದಿನ ಬೆಂಗಳೂರು ಸಂಪೂರ್ಣವಾಗಿ ಸ್ವಬ್ಧವಾಗಿತ್ತು. ಇಂದಿನಿಂದ ಐಟಿ, ಬಿಟ ಕಂಪನಿಗಳೂ ಕೂಡ ಕಾರ್ಯಾರಂಭ ಮಾಡಿವೆ. ಇದರಿಂದ ನಗರದಲ್ಲಿ ಏಕಾಏಕಿ ಟ್ರಾಫಿಕ್‌ ಸಮಸ್ಯೆ ಉಂಟಾಗಿದೆ. ಇನ್ನು ಕಾವೇರಿ ಜಂಕ್ಷನ್‌ನಲ್ಲೂ ಕೂಡ ಭಾರೀ ಟ್ರಾಫಿಕ್‌ ಜಾಮ್‌ ಆಗಿದೆ. ಹಲವೆಡೆ ಎರಡೂ ಬದಿ ರಸ್ತೆಗಳಲ್ಲಿ ವಾಹನ ಸಂಚಾರ ನಡೆದಿದೆ. ಮಾಮೂಲಿ ದಿನಕ್ಕಿಂತ ಇಂದು ಟ್ರಾಫಿಕ್‌ ಹೆಚ್ಚಾಗಿದೆ. ಎಮರ್ಜನ್ಸಿ ಇಲ್ಲದಿದ್ರೂ ಜನರು ಮನೆಯಿಂದ ಹೊರಗಡೆ ಬರುತ್ತಿದ್ದಾರೆ. ಇದರಿಂದ ಹಲವೆಡೆ ಟ್ರಾಫಿಕ್‌ ಜಾಮ್‌ ಕಾರಣವಾಗುತ್ತಿದೆ. ಕಿಲೋಮೀಟರ್‌ಗಟ್ಟಲೇ ವಾಹನಗಳು ನಿಂತಿವೆ. 

"

ಹೆಬ್ಬಾಳದಲ್ಲಿ ರಸ್ತೆಗಳಿದ ಬೈಕ್‌, ವಾಹನಗಳನ್ನ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಪಾಸ್‌ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ನಿಯಮಾವಳಿ ಪ್ರಕಾರವೇ ಜನರು ವಾಹನಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ ಎಂಬುದನ್ನು ಪೊಲೀಸರು ಪ್ರತಿ ವಾಹನಗಳನ್ನ ಪರೀಕ್ಷೆ ಮಾಡುತ್ತಿದ್ದಾರೆ.