Asianet Suvarna News Asianet Suvarna News

ದಾವಣಗೆರೆ ಜಿಲ್ಲೆಯಲ್ಲಿ 7.8 ಮಿ.ಮೀ. ಮಳೆ: 20.70 ಲಕ್ಷ ರೂ. ನಷ್ಟ

ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜುಲೈ 26 ರಂದು 7.8 ಮಿ.ಮೀ. ಸರಾಸರಿ ಮಳೆಯಾಗಿದೆ. ಅಧಿಕ ಮಳೆಯಿಂದ ರೂ. 20.70 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ. 

Again Heavy Rain In Davanagere District gvd
Author
First Published Jul 27, 2023, 11:01 PM IST

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಜು.27): ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜುಲೈ 26 ರಂದು 7.8 ಮಿ.ಮೀ. ಸರಾಸರಿ ಮಳೆಯಾಗಿದೆ. ಅಧಿಕ ಮಳೆಯಿಂದ ರೂ. 20.70 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ. ಚನ್ನಗಿರಿ 6.4 ಮಿ.ಮೀ, ದಾವಣಗೆರೆ 9.0 ಮಿ.ಮೀ, ಹರಿಹರ 11.2 ಮಿ.ಮೀ, ಹೊನ್ನಾಳಿ 8.5 ಮಿ.ಮೀ, ಜಗಳೂರು 7.3 ಮಿ.ಮೀ, ನ್ಯಾಮತಿ 5.5 ಮಿ.ಮೀ ಮಳೆಯಾಗಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 16 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 4.80 ಲಕ್ಷ ಹಾಗೂ 2 ದನದ ಕೊಟ್ಟಿಗೆ ಹಾನಿಯಾಗಿ ರೂ.20 ಸಾವಿರ ಅಂದಾಜು ನಷ್ಟ ಸಂಭವಿಸಿದೆ.

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ತೀವ್ರ ಹಾನಿಯಾಗಿದ್ದು ಅಂದಾಜು ರೂ.2.00 ಲಕ್ಷ ಹಾಗೂ 4 ಮನೆ ಭಾಗಶಃ ಹಾನಿಯಾಗಿದ್ದು ರೂ. 1.20 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 10 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 0.65 ಸಾವಿರ ಹಾಗೂ 2 ಎಕರೆ ಬೆಳೆ ಹಾನಿಯಾಗಿ ಅಂದಾಜು ರೂ.50 ಸಾವಿರ ನಷ್ಟ, 1 ಜಾನುವಾರು ಜೀವ ಹಾನಿಯಾಗಿದ್ದು ಅಂದಾಜು ರೂ.0.35 ಸಾವಿರ ನಷ್ಟ ಸಂಭವಿಸಿದೆ.

ಕೋಲಾರ ಜಿಲ್ಲೆಗೆ ನೀಡಿರುವ ಅನುದಾನವನ್ನು ಸದ್ಬಳಿಸಿಕೊಳ್ಳಿ: ಸಚಿವ ದಿನೇಶ್‌

ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಮನೆ ತೀವ್ರ ಹಾನಿಯಾಗಿದ್ದು ಅಂದಾಜು ರೂ.4.00 ಲಕ್ಷ ಹಾಗೂ 5 ಮನೆ ಭಾಗಶಃ ಹಾನಿಯಾಗಿದ್ದು ರೂ. 2.60 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ತೀವ್ರ ಹಾನಿಯಾಗಿದ್ದು ಅಂದಾಜು ರೂ.1.20 ಲಕ್ಷ ಹಾಗೂ 7 ಮನೆ ಭಾಗಶಃ ಹಾನಿಯಾಗಿದ್ದು, ರೂ. 2.80 ಲಕ್ಷ ಅಂದಾಜು ನಷ್ಟ, 1 ಜಾನುವಾರು ಜೀವ ಹಾನಿಯಾಗಿದ್ದು ಅಂದಾಜು ರೂ.0.40 ಸಾವಿರ ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟಾರೆ ರೂ20.70 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios