Panchamasali: ‘2ಎ’ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ಹೋರಾಟ: ಕೂಡಲ ಶ್ರೀ

*   ಯಲಬುರ್ಗಾ ಪಂಚಮಸಾಲಿ ಸಮಾಜದ ತವರೂರು
*  ಪಂಚಮಸಾಲಿ ಸಮಾಜದವರು ಸಹೃದಯ ಉಳ್ಳವರು
*  ಹೆಣ್ಣು ಮಕ್ಕಳು ಬುದ್ಧಿವಂತರಾದರೆ ಸಮಾಜದ ಅಭಿವೃದ್ಧಿ ಸಾಧ್ಯ 

Again Fight If Doesn't Make Reservation to Panchamasali Says Jayamrutunjaya Swamiji grg

ಯಲಬುರ್ಗಾ(ಡಿ.27): ‘2ಎ’ ಮೀಸಲಾತಿ ಚಳವಳಿ ಈಗಾಗಲೇ ಒಂದು ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದಾರೆ. ವಿಳಂಬವಾದಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದು ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ್ಯ ಸ್ವಾಮೀಜಿ(Jayamrutunjaya Swamiji)  ಹೇಳಿದರು. ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಭಾನುವಾರ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ 243ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜ ಭವನದ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಮಸಾಲಿ(Panchamasali) ಸಮಾಜದವರು ಎಂದುಕೊಳ್ಳಲು ಹಿಂಜರಿಯುತ್ತಿದ್ದ ಜನರು ‘2ಎ’ ಮೀಸಲಾತಿ(2 A Reservation) ಪಾದಯಾತ್ರೆಯಿಂದ ಪಂಚಮಸಾಲಿ ಸಮಾಜದವರು ಎಂದು ಹೇಳಿಕೊಳುವ ಮೂಲಕ ಸಮಾಜ ಸಂಘಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಯಲಬುರ್ಗಾ ಪಂಚಮಸಾಲಿ ಸಮಾಜದ ತವರೂರು. ತುಮ್ಮರಗುದ್ದಿ ಗ್ರಾಮದಲ್ಲಿ ಒಂದೇ ವರ್ಷದಲ್ಲಿ ಚನ್ನಮ್ಮ ಪುತ್ಥಳಿ, ಪಾದಯಾತ್ರೆ ಕಾರ್ಯಕ್ರಮ, ಚೆನ್ನಮ್ಮ ಉತ್ಸವ ಮಾಡುವ ಮೂಲಕ 3 ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ ಎಂದು ಹೇಳಿದರು.

Resarvation For Panchamasali : ಪಂಚಮಸಾಲಿ ಮೀಸಲು ಬಗ್ಗೆ ಒಳ್ಳೆ ನಿರ್ಧಾರ: ಸಿಎಂ

ಪಂಚಮಸಾಲಿ ಸಮಾಜದವರು ಸಹೃದಯ ಉಳ್ಳವರು. ಬಡಮಕ್ಕಳಿಗೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ಅವರಿಗೆ ಶಿಕ್ಷಣ ದೊರಕಿಸಿ ಕೊಡಲು ಕೈಜೋಡಿಸಬೇಕು. ಆರತಿ ಹಿಡಿಯುವ ಕೈಯಲ್ಲಿ ಪೆನ್ನು ಬರಬೇಕು. ಕುಂಭ ಹೋರುವ ತಲೆಯ ಮೇಲೆ ಪುಸ್ತಕಗಳು ಬರಬೇಕು. ಹೆಣ್ಣು ಮಕ್ಕಳು ಬುದ್ಧಿವಂತರಾದರೆ ಸಮಾಜದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರು ಸಮಾಜ ಸಂಘಟನೆ ಬಲಿಷ್ಠಗೊಳಿಸಲು ಶ್ರಮಿಸಬೇಕು ಎಂದರು.

ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ ಮಾತನಾಡಿ, ಜಯಂತಿ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮಾಡುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಮದುವೆ ಮಾಡಬೇಕು. ಉಳಿದ ಹಣವನ್ನು ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ ವಿದ್ಯಾಭ್ಯಾಸಕ್ಕೆ(Study) ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಸಮಾಜದ ಬಡವರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಸಮಾಜದ ಮುಖಂಡ ಬಸವಲಿಂಗಪ್ಪ ಬೂತೆ, ಸಮಾಜದ ಧರ್ಮದರ್ಶಿ ಕಳಕನಗೌಡ ಪಾಟೀಲ ಕಲ್ಲೂರು, ಕಳಕಪ್ಪ ಕಂಬಳಿ, ಶರಣಪ್ಪ ಈಳಿಗೇರ್‌, ರುದ್ರಗೌಡ ಸೋಲಬಗೌಡ್ರ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಬಸವರಾಜ ರೇಮಠ, ಶೇಷಗಿರಿರಾವ್‌ ಕುಲಕರ್ಣಿ, ನಿಂಗಪ್ಪ ಈಳಿಗೇರ್‌, ಪಪಂ ಸದಸ್ಯ ಬಸವಲಿಂಗಪ್ಪ ಕೊತ್ತಲ್‌, ಸಮಾಜದ ಅಧ್ಯಕ್ಷ ವೀರಭದ್ರಪ್ಪ ಮುಸಿಗೇರಿ, ಉಪಾಧ್ಯಕ್ಷೆ ಲಲಿತಾ ಚಿಕ್ಕೊಪ್ಪ, ಮುಖಂಡರಾದ ಬಸಪ್ಪ ಹಳ್ಳದ, ಬಾಳಪ್ಪ ತಳವಾರ, ಕೆಂಚಪ್ಪ ಕಂಬಳಿ, ಶಂಕ್ರಪ್ಪ ಬಡಿಗೇರ್‌, ನಿಂಗಪ್ಪ ಶಾಶ್ವಿಹಾಳ, ಪುಟ್ಟರಾಜ ಹಳ್ಳದ, ಮುಖ್ಯ ಶಿಕ್ಷಕರಾದ ದೇವಪ್ಪ ವಾಲ್ಮೀಕಿ, ಮಲ್ಲನಗೌಡ್ರ, ಗುರುಪಾದಪ್ಪ ಸೇರಿದಂತೆ ಗ್ರಾಮ ಗಣ್ಯರು, ಸಮಾಜದ ಮುಖಂಡರು, ಯುವಕರು ಮತ್ತಿತರರಿದ್ದರು.

Bagalkot| ಪಂಚ​ಮ​ಸಾಲಿ ಶ್ರೀಗಳ ಟ್ರಸ್ಟ್‌ ರಚನೆ: 3ನೇ ಪೀಠಕ್ಕೆ ಮುನ್ನುಡಿ?

ಅದ್ಧೂರಿ ಮೆರವಣಿಗೆ:

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಬಸ್‌ ನಿಲ್ದಾಣದಿಂದ ಚೆನ್ನಮ್ಮ ವೃತ್ತದವರೆಗೂ ಚೆನ್ನಮ್ಮ ಭಾವಚಿತ್ರ ಹಾಗೂ ಶ್ರೀಗಳ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಈ ವೇಳೆ ಡೊಳ್ಳು ಕುಣಿತ, ಕೋಲಾಟ, ಮಳೆಯರ ಕುಂಭ ಮೇಳದೊಂದಿಗೆ ಮೆರವಣಿಗೆ ನಡೆಯಿತು.

2ಎ ಮೀಸಲಾತಿ ನೀಡದಿದ್ರೆ ಮತ್ತಷ್ಟು ಉಗ್ರ ಹೋರಾಟ: ಕೂಡಲ ಶ್ರೀ

ಕೊಟ್ಟೂರು: ಪಂಚಮಸಾಲಿ ಜನಾಂಗಕ್ಕೆ ಸರ್ಕಾರ 2ಎ ಮೀಸಲಾತಿ(2A Reservation) ಸೌಲಭ್ಯ ನೀಡುವ ನಿರ್ಧಾರವನ್ನು ಜನವರಿ 14ರೊಳಗೆ ಘೋಷಿಸುವ ನಿರೀಕ್ಷೆ ಹೊಂದಿದ್ದೇವೆ. ಒಂದೊಮ್ಮೆ ಸರ್ಕಾರ ಅನಗತ್ಯ ಕಾರಣದಿಂದ ವಿಳಂಬ ಮಾಡಿದರೆ ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಹಮ್ಮಿಕೊಳ್ಳುವುದು ನಿಶ್ಚಿತ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. 

ಡಿ.05 ರಂದು ಕೊಟ್ಟೂರಿನ(Kotturu) ಬ್ಯಾಂಕರ್‌ ಅಂಗಡಿ ಪಂಪಾಪತಿಯವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ನಂತರ ಪಂಚಮಸಾಲಿ ಜನಾಂಗದ ಮುಖಂಡರು ಮತ್ತು ತಮ್ಮನ್ನು ಕರೆಯಿಸಿಕೊಂಡು ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆ ಖಚಿತತೆ ವ್ಯಕ್ತಪಡಿಸಿ ಕೆಲ ಸಮಯ ನೀಡುವಂತೆ ಕೇಳಿದ್ದರು. ಇದರ ಜೊತೆಗೆ ಹಿಂದುಳಿದ ವರ್ಗಗಳ ಆಯೋಗ ವರದಿ ಸ್ವೀಕಾರದ ನಂತರ ಅದರ ಮಾರ್ಗಸೂಚಿಯಂತೆ ಜನಾಂಗಕ್ಕೆ ಮೀಸಲಾತಿ ದೊರಕಿಸಿ ಕೊಡುತ್ತೇನೆ ಎಂಬ ಭರವಸೆ ನೀಡಿದ್ದರು.
 

Latest Videos
Follow Us:
Download App:
  • android
  • ios