Asianet Suvarna News Asianet Suvarna News

ಬೆಂಗಳೂರು: ಕೆಂಪೇಗೌಡ ಲೇಔಟ್‌ಗೆ ಮತ್ತೆ 3973 ಎಕರೆ ವಶ

ಕೆಂಪೇಗೌಡ ಬಡಾವಣೆಯಲ್ಲಿ ಅಂತಿಮ ಅಧಿಸೂಚನೆಯಲ್ಲಿ ಕೈಬಿಟ್ಟಿರುವ ಜಮೀನು ಮತ್ತು ಇದುವರೆಗೂ ಭೂಸ್ವಾಧೀನವಾಗದೇ ಇರುವ ಜಮೀನು ಹಾಗೂ ಲೇಔಟ್‌ನ ಸುತ್ತಮುತ್ತಲ ಗ್ರಾಮ ಗಳಜಮೀನು ಸೇರಿದಂತೆ 3973 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರ ಯೋಚಿಸಿದೆ.

Again 3973 Acres Acquired for Kempegowda Layout in Bengaluru grg
Author
First Published Mar 22, 2024, 6:43 AM IST

ಸಂಪತ್ ತರೀಕೆರೆ

ಬೆಂಗಳೂರು(ಮಾ.22):  ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅಧಿ ಸೂಚಿತ ಪ್ರದೇಶದ ವ್ಯಾಪ್ತಿಯಿಂದ ಕೈಬಿಟ್ಟಿದ್ದ ಭೂಮಿಯೂ ಸೇರಿದಂತೆ ಬರೋಬ್ಬರಿ 3973 ಎಕರೆ ರೈತರ ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿದೆ. 

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣ ದಲ್ಲಿ ಹಿಂದಿನ ಅಂತಿಮ ಅಧಿಸೂಚನೆಯಲ್ಲಿ ಕೈಬಿಟ್ಟಿ ರುವ ಜಮೀನು ವಿವರಗಳು ಮತ್ತು ಇದುವರೆಗೂ ಭೂಸ್ವಾಧೀನವಾಗದೇ ಇರುವ ಜಮೀನುಗಳನ್ನು సమస్తవాగి బడావణి నిమిశానలు పడిఎ ನಿರ್ಧರಿಸಿದೆ. ಹೀಗಾಗಿ, ಸಮಗ್ರ ನಿರ್ಮಾಣ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣಕ್ಕಾಗಿ ಬಡಾವಣೆಯ ಸುತ್ತಮುತ್ತ 11 ಗ್ರಾಮದಲ್ಲಿ ಒಟ್ಟು 2105.35 ಎಕರೆ (ಅಂತಿಮ ಅಧಿಸೂಚನೆಯಲ್ಲಿ ಕೈಬಿಟ್ಟ 827.16 ಎಕರೆ ಜಮೀನು ಸೇರಿ) ಅಧಿಸೂಚನೆ ಹೊರಡಿಸಿ ಭೂಸ್ವಾಧೀನಕ್ಕೆ ಬಿಡಿಎ ತಯಾರಿ ನಡೆಸಿದೆ.

ಬೆಂಗಳೂರು: ಕೆಂಪೇಗೌಡ ಲೇಔಟಲ್ಲಿ ಉಕ್ಕುತ್ತಿದೆ ಅಂತರ್ಜಲ!

ಜೊತೆಗೆ ಬಡಾವಣೆಯ ಸುತ್ತಮುತ್ತಲ ಯಲಚೆಗುಪ್ಪೆ, ಯಲಜೆಗುಪ್ಪೆ-ರಾಮಪುರ, ಚೆನ್ನೇನಹಳ್ಳಿ ಮತ್ತು ಎಂ.ಕೃಷ್ಣಸಾಗರ ಗ್ರಾಮಗಳಲ್ಲಿ 1868 ಎಕರೆ ಭೂಮಿಯೂ ಸೇರಿದಂತೆ ಒಟ್ಟು 3973 ಎಕರೆ ಭೂ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ಅದಕ್ಕಾಗಿ ಸರ್ವೆ ನಡೆಸಲು ಅಧಿಕಾರಿಗಳ ನೇತೃತ್ವದಲ್ಲಿ ತಂಡ ಗಳನ್ನು ರಚಿಸಲು ಸಿದ್ಧತೆ ನಡೆಸಿದೆ ಎಂದು ಬಿಡಿಎ ಮೂಲಗಳು ತಿಳಿಸಿದೆ.

ಪೆರಿಫೆರಲ್ ಸಂತ್ರಸ್ತ ರೈತರಿಗೆ ಪರಿಹಾರ?: 

ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರೋಡ್) ಯೋಜನೆಗೆ ಜಮೀನು ನೀಡುವ ರೈತರಿಗೆ ಮತ್ತು ಭೂಮಾಲಿಕರಿಗೆ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರವಾಗಿ ನೀಡಬೇಕಾಗುತ್ತದೆ. ಅದಕ್ಕಾಗಿ ಡಾ| ಶಿವರಾಮ ಕಾರಂತ ಬಡಾವಣೆ ಹಾಗೂ ಮುಂದುವರೆದ ಬಡಾವಣೆ (ಎಕ್ಸ್‌ಟೆನ್ನನ್) ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಪಡಿಸುವ ಮೂಲಕ ಪಿಆರ್‌ಆರ್ ರೈತರಿಗೆ ಪರಿಹಾರದ ರೂಪದಲ್ಲಿ ನಿವೇಶನ ಕೊಡುವ ಉದ್ದೇಶವನ್ನು ಬಿಡಿಎ ಹೊಂದಿದೆ.

ಅದಕ್ಕಾಗಿ ಕೆಂಪೇಗೌಡ ಬಡಾವಣೆಯಲ್ಲಿ ಅಂತಿಮ ಅಧಿಸೂಚನೆಯಲ್ಲಿ ಕೈಬಿಟ್ಟಿರುವ ಜಮೀನು ಮತ್ತು ಇದುವರೆಗೂ ಭೂಸ್ವಾಧೀನವಾಗದೇ ಇರುವ ಜಮೀನು ಹಾಗೂ ಲೇಔಟ್‌ನ ಸುತ್ತಮುತ್ತಲ ಗ್ರಾಮ ಗಳಜಮೀನು ಸೇರಿದಂತೆ 3973 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರ ಯೋಚಿಸಿದೆ. ಇಲ್ಲಿ ಪಡೆದ ಭೂಮಿಯನ್ನು ಅಭಿವೃದ್ಧಿಪಡಿಸಿ ಪಿಆರ್ ಆರ್‌ಗೆ ಭೂಮಿ ಕೊಟ್ಟಂತಹ ರೈತರಿಗೆ ನಿವೇಶನಗಳನ್ನು ಪರಿಹಾರವಾಗಿ ನೀಡುವ ಯೋಚನೆಯೂ ಪ್ರಾಧಿಕಾರಕ್ಕಿದೆ ಎನ್ನಲಾಗಿದೆ.

ಬೆಂಗಳೂರು: ಕೆಂಪೇಗೌಡ ಲೇಔಟ್‌ಗಾಗಿ ಅರಣ್ಯ ಜಾಗ ಒತ್ತುವರಿ ಮಾಡಿದ್ದ ಬಿಡಿಎ..!

11 ಗ್ರಾಮಗಳಲ್ಲಿ ಎಷ್ಟೆಷ್ಟು ಭೂಮಿ?

ಕನ್ನಲ್ಲಿಯಲ್ಲಿ 458 ಎಕರೆ, ಭೀಮನಕುಪ್ಪೆ ೫೦ ಎಕರೆ, ಕೆಂಚನಪುರ 303, ಸೂಲಿಕೆರೆ 245, ಮಂಗನಹಳ್ಳಿಯಲ್ಲಿ 55 ಎಕರೆ, ಬಿ.ರಾಮಸಾಗರ 12, ಸೀಗೇಹಳ್ಳಿ 95. ಕೊಮ್ಮಘಟ್ಟ 166, ರಾಮಸಂದ್ರದಲ್ಲಿ 137 ಎಕರೆ, ಕೊಡಿಗೇಹಳ್ಳಿಯಲ್ಲಿ 134 ಎಕರೆ, ಕೆ.ಕೃಷ್ಣಸಾಗರ 16, ಚಲ್ಲಘಟ್ಟ 93 ಸೇರಿದಂತೆ 11 ಗ್ರಾಮಗಳಲ್ಲಿ ಒಟ್ಟು 2105 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ನಾಲ್ಕು ಹಳ್ಳಿಗಳಲ್ಲಿ 1868 ಎಕರೆ: ಯಲಚಗುಪ್ಪೆ 984, ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ 563, ಕೆಂಗೇರಿ ಹೋಬಳಿಯ ಎಂ. ಕೃಷ್ಣಸಾಗರ 130, ಯಲಚಗುಪ್ಪೆ-ರಾಮಪುರ 149 (ಒಟ್ಟು 1868 ಎಕರ) ಎಕರೆಯನ್ನು ಅಧಿಸೂಚನೆ ಹೊರಡಿಸಿ ಭೂಸ್ವಾಧಿನಪಡಿಸಿಕೊಳ್ಳಲು ಬಿಡಿಎ ನಿರ್ಧರಿಸಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣ ಕೈಂದು 2014ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸ ಲಾಗಿತ್ತು. ಅದರಂತೆ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿತ್ತು. ಆದರೆ ಪ್ರಸ್ತುತ 2694 ಎಕರೆ ಭೂಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ತಂಡಕ್ಕೆ ಹಸ್ತಾಂತರಿ ಸಲಾಗಿದ್ದು 2,200 ಎಕರೆಯಲ್ಲಿ ಸುಮಾರು 22 ಸಾವಿರ ನಿದೇಶನಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಸಾರ್ವಜನಿಕರಿಗೆ 10 ಸಾವಿರ, ಕೆಂಪೇಗೌಡ ಲೇಡಿ ಟ್‌ಗೆ ಮತ್ತು ಆರ್ಕಾವತಿ ಬಡಾವಣೆಗೆ ಭೂಮಿ ನೀಡಿದ ಭೂ ಮಾಲೀಕರಿಗೆ ಪರಿಹಾರಾರ್ಥವಾಗಿ ಉಳಿದ ನಿವೇಶನ ಹಂಚಿಕೆ ಮಾಡಲಾಗಿದೆ.

Follow Us:
Download App:
  • android
  • ios