ರಾಯಚೂರು ಜಿಲ್ಲೆಯ ಲಿಂಗ​ಸು​ಗೂರು ತಾಲೂ​ಕಿನಲ್ಲಿ ಇದೇ ರೀತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 38ಕ್ಕೂ ಹೆಚ್ಚು ಮಂದಿ ಅಸ್ವಸ್ಥ. 

ರಾಯ​ಚೂರು(ಮೇ.30):  ಜಿಲ್ಲೆಯ ದೇವ​ದುರ್ಗ ಸಮೀ​ಪದ ಅರ​ಕೇರಾ ತಾಲೂ​ಕಿನ ರೇಕ​ಲ​ಮ​ರ​ಡಿ ಗ್ರಾಮ​ದಲ್ಲಿ ಕಲು​ಷಿತ ನೀರು ಕುಡಿದು ಬಾಲಕನೊಬ್ಬ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಇದೀಗ ಲಿಂಗ​ಸು​ಗೂರು ತಾಲೂ​ಕಿನಲ್ಲಿ ಇದೇ ರೀತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 38ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. 

ಲಿಂಗಸಗೂರು ತಾಲೂಕಿನ ಗೊರೇ​ಬಾಳ ಗ್ರಾಮ​ದಲ್ಲಿ 30 ಹಾಗೂ ತಾಲೂ​ಕಿನ ಜೂಲ​ಗು​ಡ್ಡ​ದ​ಲ್ಲಿ 8 ಮಂದಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಗೋರೆಬಾಳ ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಭೇಟಿ ನೀಡಿದ್ದು, ಮೂರು ದಿನಗಳಲ್ಲಿ ವಿಷಪೂರಿತ ಆಹಾರ ಮತ್ತು ಕಲುಷಿತ ಕುಡಿಯುವ ನೀರು ಸೇವನೆಯಿಂದ ಸಂಭವಿಸಿದೆ ಎನ್ನಲಾದ ಪ್ರಕರಣಗಳ ಕುರಿತು ಪರೀಶೀಲನೆ ನಡೆಸಲಾಗಿದೆ. 

ಕಲುಷಿತ ನೀರಿಗೆ ಬಾಲಕ ಬಲಿ: ಅಧಿಕಾರಿಗಳಿಗೆ ಸಿದ್ದು ತರಾಟೆ

ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಈಗಾಗಲೇ 10 ರೋಗಿಗಳನ್ನು ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲುಷಿತ ನೀರು ಸೇವನೆಗೆ 5 ವರ್ಷದ ಮಗು ಸಾವು, 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥ!

ರಾಯಚೂರು: ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಮೇ.26 ರಂದು ನಡೆದಿತ್ತು. ಕಲುಷಿತ ನೀರು ಸೇವಿಸಿ 5 ವರ್ಷದ ಮಗು ಸಾವನ್ನಪ್ಪಿತ್ತು.