ಧರ್ಮಸ್ಥಳಕ್ಕೆ ತೆರಳಬೇಕಿದ್ದ ಸಿಎಂ ಮಾರ್ಗ ಬದಲಾಯಿಸಿದ್ದು ಯಾಕೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Aug 2018, 7:47 PM IST
After Heavy rain CM H D Kumaraswamy changes road route
Highlights

ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಿಎಂ ಕುಮಾರಸ್ವಾಮಿ ಮಾರ್ಗ ಬದಲಾಯಿಸಿದ್ದಾರೆ. ಅನಿವಾರ್ಯ ಕಾರಣದಿಂದ ಹಾಸನ ಸಕಲೇಶಪುರ ಮಾರ್ಗದಲ್ಲಿ ಧರ್ಮಸ್ಥಳಕ್ಕೆ ತೆರಳಬೇಕಿದ್ದ ಸಿಎಂ ಚಾರ್ಮಾಡಿ ಘಾಟ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.

ಹಾಸನ[ಆ.13] ತಂದೆ‌ ದೇವೇಗೌಡ,ತಾಯಿ ಚೆನ್ನಮ್ಮ,ಪತ್ನಿ ಅನಿತಾ ಜೊತೆಗೆ ಧರ್ಮಸ್ಥಳದತ್ತ ಪ್ರಯಾಣ ಬೆಳೆಸುತ್ತಿದ್ದ ಕುಮಾರಸ್ವಾಮಿ ಮಾರ್ಗ ಬದಲಾಯಿಸಿದ್ದಾರೆ. ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾಗಿ ಪ್ರಯಾಣಕ್ಕೆ ಅಡ್ಡಿ ಉಂಟಾಗಿದ್ದರಿಂದ ಚಾರ್ಮಾಡಿ ಘಾಟ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.

 ಹಾಸನ,ಬೇಲೂರು,ಮೂಡಿಗೆರೆ ಮಾರ್ಗದಲ್ಲಿ ಚಾರ್ಮಾಡಿಘಟ್ ತಲುಪಿ ಧರ್ಮಸ್ಥಳದಕ್ಕೆ ಪ್ರಯಾಣ ಮಾಡಿದ್ದು ಧರ್ಮಸ್ಥಳ ತಲುಪಿದ್ದಾರೆ. ಭಾರೀ ಮಳೆಯಿಂದ ಗುಡ್ಡ ಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ಬಂದ್ ಆಗಿತ್ತು.

loader