ಬೆಳಗಾವಿ(ನ.26): ಉಪಚುನಾವಣೆಯ ನಂತರ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ. ನಂತರ ಕಾಂಗ್ರೆಸ್‌ನಿಂದಲೇ ಹೊರಗೆ ಉಳಿಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅಥಣಿ ಉಪಚುನಾವಣಾ ಕ್ಷೇತ್ರದಲ್ಲಿ ಅವರು ಮತಬೇಟೆ ನಡೆಸಿದ್ದಾರೆ.

ಅಥಣಿಯಲ್ಲಿ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿದ್ದುಗೆ ನಳಿನ್ ಗುದ್ದು ನೀಡಿದ್ದು, ಅಥಣಿಯಲ್ಲಿ ವಿಪಕ್ಕಷ ನಾಯಕ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮಾತಿನಲ್ಲಿ ಆರ್ಭಟವಿದೆ, ಅಭಿವೃದ್ಧಿ ಇಲ್ಲ: ದಿನೇಶ್ ಗುಂಡೂರಾವ್

ಸಿದ್ಧರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಗಳಾದಾಗ ಮತ್ತೊಮ್ಮೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಈಗ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನಕ್ಕೂ ನಾಲಾಯಕ್ಕಾದರು. ನಂತರ ಎದೆ ತಟ್ಟಿಕೊಂಡು ಲೋಕಸಭೆ ಚುನಾವಣೆಯಲ್ಲಿ ಓಡಾಡಿದರು. ಅಗ ಒಂದೇ ಸ್ಥಾನದಲ್ಲಿ ಗೆದ್ದಿದ್ದಾರೆ. ಈ ಚುನಾವಣೆ ನಂತರ ಸಿದ್ಧರಾಮಯ್ಯ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಿಂದಲೆ ಸಿದ್ದರಾಮಯ್ಯ ಅವರು ಹೊರಗೆ ಉಳಿಯಲಿದ್ದಾರೆ. ಬಿಜೆಪಿ ಭ್ರಮೆಯಲ್ಲಿಲ್ಲ. ಸಿದ್ಧರಾಮಯ್ಯ ಭ್ರಮೆಯಲ್ಲಿದ್ದಾರೆ. ಅವರ ಮೂರು ಭ್ರಮೆಗಳು ಇವತ್ತು ಸುಳ್ಳಾಗಿದೆ. ಇವರ ನೇತೃತ್ವದಲ್ಲಿ ಹೋದ ಎಲ್ಲ ಚುನಾವಣೆಯಲ್ಲು ಅವರು ಸೋತಿದ್ದಾರೆ. ಸಿದ್ಧರಾಮಯ್ಯ ಅನರ್ಹರು ಎಂದು ಅವರ ಮತ ಕ್ಷೇತ್ರದವರೇ ಹೇಳಿದ್ದಾರೆ. ಅದಕ್ಕೆ ಬೇರೆ ಕಡೆ ಬಂದು‌ ನಿಂತು ಚುನಾವಣೆ ಎದುರಿಸಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಚಡ್ಡಿಯಲ್ಲಿ ಸೂಸು ಮಾಡಿದ ಮಗುವಿಗೆ ಚಾಕುವಿನಿಂದ ಹಲ್ಲೆ

ಅವರನ್ನ ಅನರ್ಹರನ್ನಾಗಿ ಮಾಡಿ ಜನ ಹೊರಗೆ ಇಟ್ಟಿದ್ದಾರೆ. ಹೀಗಾಗಿಯೇ ಅವರು ಇವತ್ತು ಜಾಗ ಹುಡುಕುವ ಪರಿಸ್ಥಿತಿಯಲ್ಲಿದ್ದಾರೆ. ಅವರು ಬಹಳಷ್ಟು ಶಬ್ದಗಳ ಅರ್ಥ ಹುಡುಕಿದವರು. ಹೀಗಾಗಿ ಅವರಿಗೆ ಅರ್ಥವನ್ನ ಅನರ್ಥ ಮಾಡಬಲ್ಲ, ಅನರ್ಥವನ್ನ ಅರ್ಥ ಮಾಡಬಲ್ಲ ಶಕ್ತಿ ಇದೆ. ಸಿದ್ದರಾಮಯ್ಯ ಬುದ್ಧಿವಂತ. ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಅವರೊಬ್ಬರೇ ಇರುತ್ತಾರೆ ಎಂದಿದ್ದಾರೆ.

ಮಹಾರಷ್ಟ್ರ ಬಿಜೆಪಿ ಸರಕಾರ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಬುಧವಾರ ಶಕ್ತಿ ಪ್ರದರ್ಶನ ಮಾಡಲಿದೆ. ಬಿಜೆಪಿ ಅಲ್ಲಿ ಸರಕಾರ ಮಾಡುತ್ತದೆ. ಮೊನ್ನೆ ಬೆಳಗ್ಗೆ ಯಾವ ರೀತಿ ತಿರುವು ಪಡೆದು ಬಿಜೆಪಿ ಸರಾಕರ ರಚಿಸಿತೋ ಅದೇ ರೀತಿ ಬುಧವಾರವೂ ಕೂಡ ತಿರುವು ಪಡೆಯಲಿದೆ ಎಂದು ಹೇಳಿದ್ದಾರೆ.

ಉಪಚುನಾವಣೆ: ಹುಣಸೂರಲ್ಲಿ 40 FIR ದಾಖಲು