Asianet Suvarna News Asianet Suvarna News

ಗೂಳಿ ಆಯ್ತು, ಟಗರು ಕಾಳಗಕ್ಕೆ ಹೊನ್ನಾಳಿ ಶಾಸಕ ರೇಣು ಚಾಲನೆ!

ಗೂಳಿ ಓಟ ಆಯ್ತು, ಟಗರು ಕಾಳಗಕ್ಕೆ ರೇಣು ಚಾಲನೆ| ಗೂಳಿಯಿಂದ ಗುದ್ದಿಸಿಕೊಂಡು ಗಾಯಗೊಂಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

After Bull Race Honnali BJP MLA MP Renukacharya Inagurates Sheep Fight
Author
Bangalore, First Published Jan 13, 2020, 8:01 AM IST
  • Facebook
  • Twitter
  • Whatsapp

ಹೊನ್ನಾಳಿ[ಜ.13]: ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅತಿಥಿಯಾಗಿ ತೆರಳಿದ್ದ ವೇಳೆ ಗೂಳಿಯಿಂದ ಗುದ್ದಿಸಿಕೊಂಡು ಗಾಯಗೊಂಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಇದೀಗ ಟಗರು ಕಾಳಗಕ್ಕೆ ಚಾಲನೆ ನೀಡಿ ಗಮನ ಸೆಳೆದಿದ್ದಾರೆ.

ದುರ್ಗಾಂಬಿಕೆ ಹಾಗೂ ಮರಿಯಮ್ಮ ದೇವಿ ಜಾತ್ರೋತ್ಸವದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಟಗರು ಕಾಳಗ ಏರ್ಪಡಿಸಲಾಗಿತ್ತು. ಇದಕ್ಕೆ ಚಾಲನೆ ನೀಡಲು ತೆರಳಿದ್ದ ರೇಣುಕಾಚಾರ್ಯ, ಟಗರುಗಳ ಕೊಂಬುಗಳನ್ನು ಹಿಡಿದುಕೊಂಡು ಕಾಳಗಕ್ಕೆ ಅವುಗಳನ್ನು ಪ್ರೇರೇಪಿಸಿದ್ದು, ಅದರ ವಿಡಿಯೋ ವೈರಲ್‌ ಆಗಿದೆ.

ಬಸ್ ಚಲಾಯಿಸಿ ಹೊನ್ನಾಳಿ ಶಾಸಕನ ಹೀರೋಯಿಸಂ: ಅಧಿಕಾರಿಗಳಿಗೆ ಸಂಕಷ್ಟ!

ಇತ್ತೀಚೆಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನ ಬಸ್‌ ಸೇವೆಗೆ ಚಾಲನೆ ನೀಡುವ ವೇಳೆ ತಾವೇ 58 ಕಿ.ಮೀ. ಸರ್ಕಾರಿ ಬಸ್‌ ಚಲಾಯಿಸಿದ್ದ ರೇಣುಕಾಚಾರ್ಯ ವಿವಾದಕ್ಕೆ ಸಿಲುಕಿದ್ದರು.

Follow Us:
Download App:
  • android
  • ios