Asianet Suvarna News Asianet Suvarna News

Chikkamagaluru; ಅಡಕೆಎಲೆ ಚುಕ್ಕಿ ರೋಗಕ್ಕೆ ರೈತನ ಮೊದಲ ಬಲಿ!

ಮಲೆನಾಡಿನ ಅಡಕೆ ತೋಟಗಳಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗಕ್ಕೆ ನೊಂದ ರೈತನೊಬ್ಬ ಬಲಿಯಾಗಿದ್ದಾನೆ.

after arecanut crop infection farmer suicide in chikkamagaluru gow
Author
First Published Oct 8, 2022, 9:29 PM IST

ಶಿವಮೊಗ್ಗ (ಅ.8): ಮಲೆನಾಡು ಜಿಲ್ಲೆಯ ಅಡಕೆ ತೋಟಗಳಲ್ಲಿ ಕಾಣಿಸಿಕೊಂಡ ಎಲೆ ಚುಕ್ಕಿ ರೋಗಕ್ಕೆ ರೈತರೋರ್ವರು ಮೊದಲ ಬಲಿಯಾಗಿದ್ದಾರೆ. ಹೊಸನಗರ ತಾಲೂಕಿನ ಕರಿಮನೆ ಗ್ರಾ.ಪಂ. ವ್ಯಾಪ್ತಿಯ ಕಿಳಂದೂರು ಗ್ರಾಮದ ಕೃಷ್ಣಪ್ಪಗೌಡ (60) ಎಂಬುವವರು ಮನೆಯ ಸಮೀಪ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಇವರ ಅಡಕ್ಕೆ ತೋಟಕ್ಕೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಸ್ವಲ್ಪ ಮಟ್ಟಿಗೆ ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಕೃಷ್ಣಪ್ಪಗೌಡರು ಮುಂದೆ ಸಾಲ ತೀರಿಸುವುದು ಹೇಗೆ ಎಂಬ ಹೆದರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಾರೆ ಎಂದು ಅವರ ಪುತ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿನ ಅಡಕೆ ಮರಗಳಲ್ಲಿ ಕಾಣಿಸಿಕೊಂಡಿರುವ ಚುಕ್ಕೆ ಎಲೆ ರೋಗ ಸಮಸ್ಯೆಗೆ ಸಿಲುಕಿರುವ ರೈತರು ಕಂಗಾಲಾಗಿ ಹೋಗಿದ್ದಾರೆ. ರೋಗ ನಿರ್ಮೂಲನಾ ಕ್ರಮದ ಬಗ್ಗೆ ಸರಕಾರ ಕೂಡ ಹಲವು ಕ್ರಮಗಳನ್ನು ಕೈಗೊಂಡಿದ್ದು, ರೈತರಿಗೆ  ಸಹಾಯಧನ ನೀಡಲು ಕೂಡ ಸರಕಾರ ತೀರ್ಮಾನಿಸಿದೆ. 

ಎಲೆಚುಕ್ಕೆ ರೋಗಕ್ಕೆ ಔಷಧ ಸಿಂಪಡಿಸಲು .4 ಕೋಟಿ ಸಹಾಯಧನ: ಚಿಕ್ಕಮಗಳೂರು ಜಿಲ್ಲೆಯ ಅಡಕೆ ತೋಟಗಳಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಉದ್ದೇಶದಿಂದ ಬೆಳೆಗಾರರಿಗೆ ಸಹಾಯಧನ ನೀಡುವುದಕ್ಕೆ ರಾಜ್ಯ ಸರ್ಕಾರ .4 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.

ಈ ಕುರಿತು ಶನಿವಾರ ಮಾಹಿತಿ ನೀಡಿದ ಅವರು, ಸರ್ಕಾರ .10 ಕೋಟಿ ನೀಡುವುದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದು, ಅದರಲ್ಲಿ ಈಗ .4 ಕೋಟಿ ಬಿಡುಗಡೆ ಮಾಡಿದೆ. ಇದು ಪರಿಹಾರವಲ್ಲ. ಔಷಧಿ ಸಿಂಪಡಣೆಗೆ ಸಹಾಯಧನವಾಗಿದೆ ಎಂದರು.

ಎಲೆಚುಕ್ಕೆ ರೋಗಕ್ಕೆ ಪರಿಹಾರವಾಗಿ ಕೊಡುವುದಕ್ಕೆ ಈ ಅನುದಾನ ಯಾವುದೇ ಕಾರಣಕ್ಕೂ ಸಾಕಾಗುವುದಿಲ್ಲ. ಈ ಕುರಿತು ಸರ್ಕಾರದೊಂದಿಗೆ ಮಾತನಾಡಲಾಗಿದೆ. ತುರ್ತು ಔಷಧ ಸಿಂಪಡಣೆಯ ಅನಿವಾರ್ಯತೆ ಇರುವುದರಿಂದ 1 ಎಕರೆ ತೋಟಕ್ಕೆ .1600 ನಂತೆ ಸಹಾಯಧನ ನೀಡಲಾಗುವುದು ಎಂದು ಹೇಳಿದರು.

Uttara Kannada ; 11,000 ಹೆಕ್ಟೇರ್‌ ಅಡಕೆಗೆ ಕೊಳೆ ರೋಗ!

ಸಾಗರ ಮತ್ತು ಹೊಸನಗರ ಕ್ಷೇತ್ರ ವ್ಯಾಪ್ತಿಯಲ್ಲಿ 9185 ಎಕರೆ ಅಡಕೆ ತೋಟಕ್ಕೆ ಎಲೆಚುಕ್ಕೆ ರೋಗ ಬಂದು ಉಲ್ಬಣಿಸಿದೆ. ತೀರ್ಥಹಳ್ಳಿಯಲ್ಲಿಯೂ ಹೆಚ್ಚಿದೆ. ಉಳಿದ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಮಾಡಿಕೊಳ್ಳಬೇಕು. ವ್ಯಾಪಕವಾಗಿ ಉಲ್ಬಣಗೊಂಡ ಪ್ರದೇಶದಲ್ಲಿ ಹೆಚ್ಚು ಆದ್ಯತೆ ನೀಡಬೇಕು. ಹಾಗಾಗಿ ಔಷಧ ಸಿಂಪಡಣೆ ಮಾಡಬೇಕಿರುವ ವ್ಯಾಪ್ತಿಗೆ ಹಣದ ಸಹಕಾರ ಹೆಚ್ಚು ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು.

 

ಭೂತಾನ್‌ ಅಡಕೆ ಆಮದಿನಿಂದ ಧಕ್ಕೆ ಇಲ್ಲ: ಜ್ಞಾನೇಂದ್ರ

ಅಡಕೆ ತೋಟಗಳು ರೋಗದಿಂದ ನಾಶವಾಗಿರುವುದಕ್ಕೆ ಮುಂದೇನು ಮಾಡಬೇಕು. ಯಾವ ರೀತಿಯ ಪರಿಹಾರ ಸೂಕ್ತ ಎಂಬಿತ್ಯಾದಿ ವಿಷಯಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಲ್ಲಿ ಮಾತನಾಡಿ ಸರ್ಕಾರದ ಗಮನಕ್ಕೆ ತರಲಾಗುವುದು. ವಿಶೇಷವಾಗಿ ಮಲೆನಾಡು ಭಾಗದಲ್ಲಿ ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರೇ ಹೆಚ್ಚಿದ್ದು ಅವರಿಗಿದ್ದ ಅಲ್ಪಸ್ವಲ್ಪ ತೋಟ ಕೂಡ ಕಳೆದುಕೊಂಡಿದ್ದಾರೆ. ಹಾಗಾಗಿ ಸರ್ಕಾರದ ಕಡೆಯಿಂದ ಯಾವ ರೀತಿ ಸಹಕಾರ ನೀಡಬಹುದು ಎನ್ನುವುದನ್ನು ಶೀಘ್ರ ತಿರ್ಮಾನಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ದೇವೇಂದ್ರಪ್ಪ ಯಲಕುಂದ್ಲಿ, ಚೇತನರಾಜ್‌ ಕಣ್ಣೂರು ಇದ್ದರು.

Follow Us:
Download App:
  • android
  • ios