ಬರೋಬ್ಬರಿ 25 ವರ್ಷಗಳಿಂದ  ಜೀತ ನಡೆಸುತ್ತಿದ್ದ ದಂಪತಿ ಇದೀಗ ಜೀತಮುಕ್ತರಾಗಿದ್ದಾರೆ.  ದಂಪತಿಯ ಶ್ರಮಕ್ಕೆ ತಕ್ಕಂತೆ ಸಂಬಳ ನೀಡದೆ ಬರೀ ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿರುವುದಾಗಿ ದೂರು ಬಂದಿತ್ತು. 

ಬಂಗಾರಪೇಟೆ (ಜ.18): 25 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ದಂಪತಿಯನ್ನು ತಹಸೀಲ್ದಾರ್‌ ದಯಾನಂದ್‌ ವಿಮುಕ್ತಿಗೊಳಿಸಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದಲ್ಲಿ ನಡೆದಿದೆ. 

ಹುದುಕುಳ ಗ್ರಾಮದ ಮೃತ್ಯುಂಜಯ ಎಂಬುವರ ತೋಟದಲ್ಲಿ 25 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ಬೂದಿಕೋಟೆ ಹೋಬಳಿಯ ದೊಡ್ಡಪೊನ್ನಾಂಡಹಳ್ಳಿಯ ಕೃಷ್ಣಪ್ಪ ಮತ್ತು ಅವರ ಪತ್ನಿ ರುಕ್ಕಮ್ಮ ಎಂಬುವರನ್ನು ಜೀತಮುಕ್ತಗೊಳಿಸಲಾಗಿದೆ.

ವೈದ್ಯ ಸೀಟು ಕೊಡಿಸುವುದಾಗಿ 52 ಲಕ್ಷ ವಂಚನೆ ...

 ದಂಪತಿಯ ಶ್ರಮಕ್ಕೆ ತಕ್ಕಂತೆ ಸಂಬಳ ನೀಡದೆ ಬರೀ ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿರುವುದಾಗಿ ದೂರು ಬಂದಿತ್ತು. ಇದನ್ನು ಪರಿಗಣಿಸಿದ ತಹಸೀಲ್ದಾರ್‌ ದಯಾನಂದ್‌, ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸತ್ಯಂಶ ಬೆಳಕಿಗೆ ಬಂದಿದೆ.

 ತಹಸೀಲ್ದಾರ್‌ ದಯಾನಂದ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯಡಿ ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.