ಹುಬ್ಬಳ್ಳಿ(ಫೆ.24): ನಗರದಲ್ಲಿ ದೇಶದ್ರೋಹದ ಘೋಷಣೆ ಕೂಗಿದ ಆರೋಪದ ಮೇರೆಗೆ ಕಾಶ್ಮೀರ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ಬಂದ ಬೆಂಗಳೂರಿನ ವಕೀಲರ ವಿರುದ್ಧ ಸ್ಥಳೀಯ ವಕೀಲರು ಪ್ರತಿಭಟನೆ ನಡೆಸಿದ ಘಟನೆ ಇಂದು(ಸೋಮವಾರ) ನಡೆದಿದೆ.

"

'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

ಬಲಗೈಗೆ ಕೆಂಪು ಪಟ್ಟಿ ಕಟ್ಟಿಕೊಂಡ ಹುಬ್ಬಳ್ಳಿಯ ವಕೀಲರು ದೇಶದ್ರೋಹಿಗಳ ಪರ ವಕಾಲತ್ತು ವಹಿಸಲು ಬಂದ ಬೆಂಗಳೂರಿನ ವಕೀಲವ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಗೇಟ್ ಎದುರು ರಾಷ್ಟ್ರಧ್ವಜ ಹಿಡಿದು ಮಾತಾ ಕಿ ಜೈ ಎಂದು ಸ್ಥಳೀಯ ವಕೀಲರು ಕೂಗಿದ್ದಾರೆ.  

ದೇಶದ್ರೋಹಿ ಘೋಷಣೆ: ಅಮೂಲ್ಯ ಲಿಯೋನಾ ಜತೆ ಪರಪ್ಪನ ಅಗ್ರಹಾರ ಸೇರಿದ ಅರುದ್ರಾ

ಬೆಂಗಳೂರಿನ ನಾಲ್ಕು ಜನ ವಕೀಲರ ತಂಡ ಇಂದು ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿದೆ. ನರೇಂದ್ರ, ಮೈತ್ರಿ ನೇತೃತ್ವದ ತಂಡ ದೇಶದ್ರೋಹದ ಘೋಷಣೆ ಕೂಗಿದ ಕಾಶ್ಮೀರ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ಬಂದಿದ್ದಾರೆ. ಕೇರಳ‌-ಮೂಲದ ವ್ಯಕ್ತಿಯ ಒಡೆತನದ ಮೆಟ್ರೊ ಪೊಲಿಸ್ ಹೋಟೆಲ್‌ನಲ್ಲಿ ಈ ವಕೀಲರ ತಂಡ ವಾಸ್ತವ್ಯ ಹೂಡಿದೆ. ವಕೀಲರನ್ನು ಬಿಗಿ ಭದ್ರತೆ ಮೂಲಕ ನಗರದ ನ್ಯಾಯಾಲಕ್ಕೆ ಪೊಲೀಸರು ಕರೆ ತಂದಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ವಿಮಾನ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹೀಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ- ಹೋಟೆಲ್‌ವರೆಗೆ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿತ್ತು.

ಹುಬ್ಬಳ್ಳಿಯಲ್ಲಿ ಕಾಶ್ಮೀರ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧ ಸಮಾವೇಶಲ್ಲಿ ಎಡಪಂಥಿಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಕೊಪ್ಪ ಮೂಲದ ಯುವತಿ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಳು. ಸದ್ಯ ಅಮೂಲ್ಯಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ

ಅಮೂಲ್ಯ ಪಾಕಿಸ್ತಾನ್‌ ಜಿಂದಾಬಾದ್ ಘೊಷಣೆ ಕೂಗಿದ ಘಟನೆ ಮಾಸುವ ಮುನ್ನವೇ ಬೆಂಗಳೂರಿನ ಆರ್ದ್ರಾ ಎಂಬುವಳೂ ಕೂಡ ಫ್ರೀ ಕಾಶ್ಮೀರ, ಕಾಶ್ಮೀರ ಮುಕ್ತಿ ಎಂದು ಪ್ರದರ್ಶಿಸಿದ್ದಾಳೆ. ಹೀಗಾಗಿ ಪೊಲೀಸರು, ಅರುದ್ರಾ ಆರ್ದ್ರಾ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡು 153 (a) ಎರಡು ಗುಂಪುಗಳ ನಡುವೆ ಶತೃತ್ವ ಬಿತ್ತುವುದು,153 (b) ರಾಷ್ಟ್ರೀಯ ಭಾವೈಕ್ಯತೆ, ಐಕ್ಯತೆಗೆ ಧಕ್ಕೆ ಆರೋಪದ ಮೇಲೆ SJ ಪಾರ್ಕ್ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಮಾರ್ಚ್​​​​ 5ರವೆಗೂ ಅರುದ್ರಾಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ.