Adulterated Petroleum Mafia : ನಡೆಯುತ್ತಿದೆ ಕಲಬೆರಕೆ ಪೆಟ್ರೋಲಿಯಂ ದಂಧೆ - ಎಚ್ಚರ!
- ನಡೆಯುತ್ತಿದೆ ಕಲಬೆರಕೆ ಪೆಟ್ರೋಲಿಯಂ - ಎಚ್ಚರ!
- ಕೊತ್ತಲವಾಡಿಯಲ್ಲಿ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಹಸ್ತಾಂತರ
ಚಾಮರಾಜನಗರ (ಡಿ.25): ತಮಿಳುನಾಡಿನಿಂದ (Tamilnadu) ಚಾಮರಾಜನಗರಕ್ಕೆ (chamarajanagar) ಹಲವು ದಿನಗಳಿಂದ ಕಲ ಬೆರಕೆ ಪೆಟ್ರೋಲಿಯಂ ( petroleum ) ದಂಧೆ ನಡೆಸುತ್ತಿದ್ದ ವ್ಯಕ್ತಿಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರ (Police) ಇಲಾಖೆ ಒಪ್ಪಿಸಿರುವ ಘಟನೆ ಕೊತ್ತಲವಾಡಿಯಲ್ಲಿ ನಡೆದಿದೆ. ಜಿಲ್ಲೆಯ ಕೆಲ ಕರಿಕಲ್ಲು ಕ್ವಾರಿಗಳಿಗೆ ನಕಲಿ ಡಿಸೇಲ್ (Diesel) ಪೂರೈಸುತ್ತಿದ್ದ ಆರು ಜನರ ತಂಡವನ್ನು ಸಾರ್ವಜನಿಕರು ಮಾಲು ಸಮೇತ ಹಿಡಿದು ಪೊಲೀಸ್ ಇಲಾಖೆ ಹಾಗೂ ಆಹಾರ ಇಲಾಖೆಯವರಿಗೆ (Food Department) ಒಪ್ಪಿಸುವ ಮೂಲಕ ಕಲಬೆರಕೆ ಪೆಟ್ರೋಲಿಯಂ (Petrolium) ಉತ್ಪನ್ನ ಮಾರಾಟ ಜಾಲ ಪತ್ತೆ ಹಚ್ಚಿದ್ದಾರೆ.
ಹಲವು ದಿನಗಳಿಂದ ಚಾಮರಾಜನಗರ (Chamarajanagar) ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ಕರಿಕಲ್ಲು ಕ್ವಾರಿಗಳಿಗೆ ತಮಿಳುನಾಡಿನಿಂದ (Tamilnadu) ಒಂದು ಟ್ಯಾಂಕರ್ (Tanker) ಮೂಲಕ ಡಿಸೇಲ್ (Diesel) ಪೂರೈಸಲಾಗುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು, ಟ್ಯಾಂಕರ್ ಕ್ವಾರಿಯ ಒಳಗೆ ಹೋಗಿ ಡಿಸೇಲ್ ನೀಡುತ್ತಿರುವುದನ್ನು ಪತ್ತೆ ಹಚ್ಚಿ ನಂತರ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯನ್ನು ಸ್ಥಳಕ್ಕೆ ಕರೆಸಿ ಮಾಲು ಸಮೇತ ದಂಧೆಕೋರರನ್ನು ಹಿಡಿದು ಒಪ್ಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಆಹಾರ ಇಲಾಖೆ (Food Department) , ಪೊಲೀಸ್ (Police) ಇಲಾಖೆ ಪರಿಶೀಲನೆ ನಡೆಸಿ, ಕ್ವಾರಿಗಳಿಗೆ ಕಲಬೆರಕೆ ಪೆಟ್ರೋಲಿಯಂ (Petrolium) ಉತ್ಪನ್ನಗಳ ಪೂರೈಕೆ ಮಾಡುತ್ತಿದ್ದ ತಮಿಳುನಾಡು ಮೂಲದ ಕಾರ್ತಿ, ಈಶ್ವರ್‌ಮೂರ್ತಿ, ರವಿ, ಬಿಹಾರ ಮೂಲದ ರಾಜು ಹಾಗೂ ಚಾಮರಾಜನಗರದ ಪೃಥ್ವಿ ಬಂಧಿತ ಆರೋಪಿಗಳು. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕೃಷ್ಣ ಗ್ರಾನೈಟ್‌ಗೆ ಡೀಸೆಲ್ ಇಳಿಸುವಾಗ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ನೇತೃತ್ವದಲ್ಲಿ ರಾಜಣ್ಣ ಹಾಗೂ ಸಿಬ್ಬಂದಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಕರಿಕಲ್ಲು ಕ್ವಾರಿಗಳಿಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
5 ಸಾವಿರ ಲೀ. ಡೀಸೆಲ್ ತುಂಬಿದ ಟ್ಯಾಂಕರ್ (Tanker) ಮತ್ತು ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಕೈಗೊಂಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕಿದೆ.
ಸದ್ಯಕ್ಕೆ ತಮಿಳುನಾಡಿನಿಂದ ಚಾಮರಾಜನಗರಕ್ಕೆ ಡೀಸೆಲ್ (Diesel) ಪೂರೈಕೆಯಾಗ್ತಿತ್ತು ಎಂದು ತಿಳಿದು ಬಂದಿದ್ದು, ಘಟನೆ ಸಂಬಂಧ ಚಾಮರಾಜನಗರ (Chamarajanagar) ಗ್ರಾಮಾಂತರ ಠಾಣೆಯಲ್ಲಿ 6ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹಲವು ದಿನಗಳಿಂದಲೂ ಆಹಾರ ಇಲಾಖೆ ಹಾಗೂ ಪೊಲೀಸ್ (Police) ಇಲಾಖೆಯ ಗಮನಕ್ಕೆ ತಂದಿದ್ದರೂ ಸಿಗದ ಈ ದಂಧೆಕೋರರು ಸಾರ್ವಜನಿಕರ ಕೈಗೆ ಸಿಲುಕಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಚಾಮರಾಜನಗರ (Chamarajanagar) ತಾಲೂಕಿನ ಕೊತ್ತಲವಾಡಿ ಗ್ರಾಮದ ಕೃಷ್ಣ ಗ್ರಾನೈಟ್‌ಗೆ ಡಿಸೇಲ್ (Diesel) ಇಳಿಸುವಾಗ ಪತ್ತೆ ಹಚ್ಚಿದ ಯುವಕರ ತಂಡ, ನಂತರ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಕರಿಕಲ್ಲು ಕ್ವಾರಿಗಳಿಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಸಪ್ಲೈ ಮಾಡುತ್ತಿರುವುದು ಬೆಳಕಿಗೆ ತಂದಿದ್ದಾರೆ.
-ಯೋಗಾನಂದ್, ಡಿಡಿ, ಆಹಾರ ಇಲಾಖೆ.
ಇಂದನ ದರ ಪರಿಶೀಲಿಸಲು ಮನವಿ : ಕೇಂದ್ರ ಸರ್ಕಾರ ಅಬಕಾರಿ ಸುಂಕ (excise duty) ಕಡಿತಗೊಳಿಸಿದ ಪರಿಣಾಮ ನವೆಂಬರ್ 4ರಂದು ದೇಶಾದ್ಯಂತ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ದರದಲ್ಲಿ ಲೀಟರ್ ಗೆ ಕ್ರಮವಾಗಿ 5ರೂ. ಹಾಗೂ 10ರೂ. ಇಳಿಕೆಯಾಗಿದೆ.ಕೇಂದ್ರ ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಅನೇಕ ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ (VAT) ಕಡಿತಗೊಳಿಸಿದವು. ಇದ್ರಿಂದ ಕೆಲವು ರಾಜ್ಯಗಳಲ್ಲಿ ಇಂಧನ ದರದಲ್ಲಿ ಇನ್ನಷ್ಟು ಇಳಿಕೆ ಕಂಡುಬಂದಿದೆ. ದೆಹಲಿ( Delhi) ಸರ್ಕಾರ ಡಿಸೆಂಬರ್ 1ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ (VAT)ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಕೆ ಮಾಡಿದೆ. ಇದ್ರಿಂದ ರಾಷ್ಟ್ರ ರಾಜ್ಯಧಾನಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 8ರೂ.ಇಳಿಕೆಯಾಗಿದೆ. ದೆಹಲಿ ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲೂ ಸುಮಾರು ಒಂದೂವರೆ ತಿಂಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು(ಡಿ.25) ಇಂಧನ ದರ ಹೀಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿಇಂಧನ ದರ
ಬೆಂಗಳೂರಿನಲ್ಲಿ( Bengaluru)ಇಂದು ಪೆಟ್ರೋಲ್ ದರದಲ್ಲಿ 0.07 ಏರಿಕೆ ಕಂಡುಬಂದಿದ್ದು, ಲೀಟರ್ ಗೆ 100.65ರೂ. ಇದೆ. ಡೀಸೆಲ್ ದರದಲ್ಲಿ ಲೀಟರ್ ಗೆ 0.07ರೂ. ಏರಿಕೆಯಾಗಿದ್ದು, 85.08 ರೂ.ಇದೆ. ಹುಬ್ಬಳ್ಳಿಯಲ್ಲಿ (Hubli)ಪೆಟ್ರೋಲ್ ಬೆಲೆ 100.31ರೂ. ಇದೆ. ಡೀಸೆಲ್ ಬೆಲೆ ಇಂದು 84.79 ರೂ.ಇದೆ. ಮಂಗಳೂರಿನಲ್ಲಿ (Mangalore) ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದೆ. ಮೈಸೂರಿನಲ್ಲಿ (Mysore)ಪೆಟ್ರೋಲ್ ದರ ಲೀಟರ್ ಗೆ 100.65ರೂ. ಇದೆ. ನಿನ್ನೆ ಪೆಟ್ರೋಲ್ ದರ 100.08ರೂ. ಇದ್ದು, ೦.57ರೂ. ಏರಿಕೆಯಾಗಿದೆ. ಇನ್ನು ಡೀಸೆಲ್ ದರ ಇಂದು ಲೀಟರ್ ಗೆ 85.08ರೂ. ಇದೆ. ನಿನ್ನೆ 84.56ರೂ. ಇದ್ದು, 0.52ರೂ. ಏರಿಕೆಯಾಗಿದೆ. ಕಲಬುರಗಿಯಲ್ಲಿ(Kalburgi)ನಿನ್ನೆ ಪೆಟ್ರೋಲ್ ಬೆಲೆ ಲೀಟರ್ ಗೆ 101.28ರೂ. ಇತ್ತು. ಇಂದು 0.68ರೂ. ಏರಿಕೆಯಾಗಿ 100.96ರೂ. ಇದೆ. ಡೀಸೆಲ್ ಲೀಟರ್ ಗೆ ನಿನ್ನೆ 84.77ರೂ. ಇತ್ತು. ಇಂದು 85.38ರೂ. ಇದೆ. ಅಂದ್ರೆ 0.61ರೂ. ಏರಿಕೆಯಾಗಿದೆ.