Asianet Suvarna News Asianet Suvarna News

ಸಾವಿತ್ರಿ ಫುಲೆ ಆದರ್ಶಗಳನ್ನು ರೂಢಿಸಿಕೊಳ್ಳಿ : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ

ಅಕ್ಷರದ ಅವ್ವ ಶೋಷಿತರ ಬೆಳಕು ಸಾವಿತ್ರಿಬಾಯಿ ಫುಲೆ ಅವರ ಅದರ್ಶ ಹಾಗೂ ಸೇವಾಮನೋಭಾವ ಪ್ರತಿಯೊಬ್ಬ ಶಿಕ್ಷಕರು ರೂಢಿಸಿಕೊಳ್ಳುಬೇಕಿದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಹಾಗೂ ಮುಖ್ಯ ಶಿಕ್ಷಕರಾದ ಪಿ.ಎನ್‌.ನಾಗವೀಣಾ ಕರೆ ನೀಡಿದರು.

Adopt the ideals of Savitri Phule : Director of Primary School Teachers Association snr
Author
First Published Jan 6, 2024, 10:05 AM IST

  ಪಾವಗಡ :   ಅಕ್ಷರದ ಅವ್ವ ಶೋಷಿತರ ಬೆಳಕು ಸಾವಿತ್ರಿಬಾಯಿ ಫುಲೆ ಅವರ ಅದರ್ಶ ಹಾಗೂ ಸೇವಾಮನೋಭಾವ ಪ್ರತಿಯೊಬ್ಬ ಶಿಕ್ಷಕರು ರೂಢಿಸಿಕೊಳ್ಳುಬೇಕಿದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಹಾಗೂ ಮುಖ್ಯ ಶಿಕ್ಷಕರಾದ ಪಿ.ಎನ್‌.ನಾಗವೀಣಾ ಕರೆ ನೀಡಿದರು.

ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮದಿನದ ಅಂಗವಾಗಿ ಬುಧವಾರ ತಾಲೂಕಿನ ತಿಮ್ಮಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಜ,3 ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನ.ಇಂದು ತಮಗೆಲ್ಲಾ ಶುಭಾಶಯ ಕೋರಿದ್ದು ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಣೆಯ ದಿಟ್ಟ ಮಹಿಳೆ ಹಾಗೂ ಕೆಳವರ್ಗದವರ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಹೊಂದಿದ್ದರು. 19 ನೇ ಶತಮಾನದ ಕಾಲ ಘಟ್ಟದಲ್ಲಿ ಪುಣೆಯಲ್ಲಿ ದೌರ್ಜನ್ಯ ಹಾಗೂ ಜಾತಿವ್ಯವಸ್ಥೆ ಮತ್ತು ದಬ್ಬಾಳಿಕೆಯ ದಿನಮಾನಗಳಲ್ಲಿ ಸಾಮಾಜಿಕ ಶೋಷಣೆ ವಿರುದ್ಧ ಧ್ವನಿ ಎತ್ತಿದ ಏಕೈಕ ಮಹಿಳೆ ಎಂದರೆ ಸಾವಿತ್ರಿಬಾಯಿ ಫುಲೆ. ಸಮಾಜಕ್ಕೆ ಆಕೆಯ ಕೊಡುಗೆ ವೈಚಾರಿಕತೆ ಮತ್ತು ಸತ್ಯ, ಸಮಾನತೆ ಮತ್ತು ಮಾನವೀಯತೆಯಂತಹ ಗುಣಗಳು ಇಂದಿನ ದಿನಮಾನಗಳಲ್ಲಿ ಪ್ರಸುತ್ತದ ಅವಶ್ಯತೆ ಇದೆ ಎಂದರು. ಸಾವಿತ್ರಿಬಾಯಿ ಫುಲೆ ಅವರು ಮೊದಲು ಮಾನವೀಯ ತತ್ವ ಸಿದ್ದಾಂತ ಅದರ್ಶ ಹಾಗೂ ಸಮಾಜ ಸುಧಾರಕಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ವಿವಾಹವಾಗಿದ್ದರು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಫುಲೆ ಅವರೆ ಗುರುಗಳು. 1842ರಲ್ಲಿ ಸಾವಿತ್ರಿಬಾಯಿ ಫುಲೆ, ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದ್ದರು. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಪಡೆದ ಮೊದಲ ಶಿಕ್ಷಕಿ. ಅವರ ಅದರ್ಶ ತತ್ವ ಸಿದ್ಧಾಂತ ಎಲ್ಲಾ ಶಿಕ್ಷಕರು ಅನುಸರಿಸಿ ಪ್ರತಿಯೊಬ್ಬರಿಗೂ ಶಿಕ್ಷಣ ರೂಪಿಸುವಂತೆ ಸಲಹೆ ನೀಡಿದರು.

ಇದೇ ವೇಳೆ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯ ಹಾಗೂ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Follow Us:
Download App:
  • android
  • ios