ಕಾಡುಗೋಡಿ ನಿಲ್ದಾಣದಿಂದ ಮುಂದುವರಿದು ಹೆಚ್ಚುವರಿ 500 ಮೀ. ಟ್ರ್ಯಾಕನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ರೈಲನ್ನು ತಿರುಗಿಸಿಕೊಂಡು ಇನ್ನೊಂದು ಟ್ರ್ಯಾಕ್‌ಗೆ ಬರಲು ಸಾಧ್ಯವಾಗಲಿದೆ. ಇದರಿಂದ ನಿಲ್ದಾಣದ ಎರಡೂ ಪ್ಲಾಟ್‌ಫಾರ್ಮ್‌ಗಳು ಬಳಕೆ ಆಗಲಿವೆ. ಅಲ್ಲದೆ, ರೈಲು ವೈಟ್‌ಫೀಲ್ಡ್‌ಗೆ ಕೇವಲ 1.5 ನಿಮಿಷದಲ್ಲಿ ವಾಪಸ್ಸಾಗಲು ಸಾಧ್ಯವಾಗುತ್ತದೆ.
ಬೆಂಗಳೂರು(ಜೂ.15): ಮೆಟ್ರೋ ರೈಲುಗಳು ತ್ವರಿತವಾಗಿ ಕಾಡುಗೋಡಿ-ವೈಟ್‌ಫೀಲ್ಡ್ ನಿಲ್ದಾಣ ತಲುಪಲು ವೈಟ್‌ಫೀಲ್ಡ್-ಕಾಡುಗೋಡಿ ನಿಲ್ದಾಣದ ಮುಂದೆ ಹೆಚ್ಚುವರಿ 500 ಮೀ. ಟ್ರ್ಯಾಕ್ ಅಳವಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಇದರಿಂದ ರೈಲು ಚನ್ನಸಂದ್ರ ನಿಲ್ದಾಣದವರೆಗೆ ತೆರಳಿ ವಾಪಸ್ಸಾಗುವ 4.5 ನಿಮಿಷ ಸಮಯ ಉಳಿಯಲಿದೆ.
ಈ ಬಗ್ಗೆ ಮಂಗಳವಾರ ನಡೆದ ಬಿಎಂಆರ್‌ಸಿಎಲ್ ನಿರ್ದೇಶಕರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಮ್ಮ ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಡುಗೋಡಿ-ವೈಟ್‌ಫೀಲ್ಡ್ ನಿಲ್ದಾಣದಲ್ಲಿ ಸದ್ಯ ಒಂದೇ ಪ್ಲಾಟ್‌ಫಾರ್ಮ್ ಬಳಸಲಾಗುತ್ತಿದೆ. ಇಲ್ಲಿ ರೈಲು ತಿರುಗಲು ಸಾಧ್ಯವಾಗದ ಕಾರಣ ರಿವರ್ಸ್ ಎಂಜಿನ್ ಮೂಲಕ ಒಂದೇ ಪ್ಲಾಟ್‌ಫಾಮ್‌ರ್‍ನಲ್ಲಿ ರೈಲನ್ನು ಚಾಲನೆ ಮಾಡಲಾಗುತ್ತಿದೆ. ಇದಕ್ಕಾಗಿ ಹೋಪ್‌ಫಾರ್ಮ್ ಚನ್ನಸಂದ್ರದವರೆಗೆ ರೈಲನ್ನು ಕೊಂಡೊಯ್ದು ವಾಪಸ್ ಬರಬೇಕಿದ್ದು, ಹೆಚ್ಚುವರಿ 4.5 ನಿಮಿಷ ತಗಲುತ್ತಿದೆ. ಜತೆಗೆ ವಿದ್ಯುತ್ ಬಳಕೆ ಕೂಡ ಹೆಚ್ಚುತ್ತಿದೆ.
ಜುಲೈನಲ್ಲಿ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಪರೀಕ್ಷೆ: ಬಳಿಕ ಸಿಎಂಆರ್‌ಎಸ್ ತಪಾಸಣೆ
ಹೀಗಾಗಿ ಕಾಡುಗೋಡಿ ನಿಲ್ದಾಣದಿಂದ ಮುಂದುವರಿದು ಹೆಚ್ಚುವರಿ 500 ಮೀ. ಟ್ರ್ಯಾಕನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ರೈಲನ್ನು ತಿರುಗಿಸಿಕೊಂಡು ಇನ್ನೊಂದು ಟ್ರ್ಯಾಕ್‌ಗೆ ಬರಲು ಸಾಧ್ಯವಾಗಲಿದೆ. ಇದರಿಂದ ನಿಲ್ದಾಣದ ಎರಡೂ ಪ್ಲಾಟ್‌ಫಾರ್ಮ್‌ಗಳು ಬಳಕೆ ಆಗಲಿವೆ. ಅಲ್ಲದೆ, ರೈಲು ವೈಟ್‌ಫೀಲ್ಡ್‌ಗೆ ಕೇವಲ 1.5 ನಿಮಿಷದಲ್ಲಿ ವಾಪಸ್ಸಾಗಲು ಸಾಧ್ಯವಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಕೆ.ಆರ್.ಪುರದಿಂದ ವೈಟ್‌ಫೀಲ್ಡ್‌ಗೆ ತೆರಳುವ ಎಲ್ಲ ರೈಲುಗಳಿಗೆ ಇದು ಸಹಕಾರಿಯಾಗಲಿದೆ. ಜೊತೆಗೆ ಮೆಟ್ರೋದ ಸಂಚಾರ ದಟ್ಟಣೆ ಸಮಯದಲ್ಲಿ 2-3 ನಿಮಿಷಗಳ ಅಂತರದಲ್ಲಿ ಹೆಚ್ಚಿನ ರೈಲುಗಳನ್ನು ಸಂಚರಿಸಲು ಸಾಧ್ಯವಾಗಲಿವೆ ಎಂದು ತಿಳಿಸಿದರು.
ಮೆಟ್ರೋಗಾಗಿ 203 ಮರಗಳನ್ನು ಕಡಿಯಲು ಹೈಕೋರ್ಟ್ ಒಪ್ಪಿಗೆ
ಕೆ.ಆರ್.ಪುರ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವಿನ 2.5 ಕಿ.ಮೀ. ಸಂಪರ್ಕ ಕೊಂಡಿ ಮಾರ್ಗ ಇದೇ ಜೂನ್ ಅಂತ್ಯದೊಳಗೆ ಪೂರ್ಣಗೊಂಡು ಪ್ರಯಾಣಿಕರಿಗೆ ಮುಕ್ತವಾಗಲಿವೆ.
ಏರ್‌ಪೋರ್ಟ್ ಮೆಟ್ರೋ: 203 ಮರಗಳಿಗೆ ಕೊಡಲಿ
ಈಚೆಗಷ್ಟೇ ಬಿಎಂಆರ್‌ಸಿಎಲ್‌ಗೆ ಮುಂದಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಯೋಜನೆಗಾಗಿ 203 ಮರಗಳನ್ನು ಕಡಿಯಲು ಅನುಮತಿ ದೊರೆತಿದೆ. ಈ ನಡುವೆ ಮೆಟ್ರೋ ಮಾರ್ಗಕ್ಕಾಗಿ ಕಳೆದೆರಡು ವರ್ಷದಲ್ಲಿ (ಹಂತ-2, ಹಂತ-2ಎ ಮತ್ತು ಹಂತ-2ಬಿ ಯೋಜನೆ) 3,626 ಮರಗಳನ್ನು ಕಡಿಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಂತ-2 ಮತ್ತು ಹಂತ 2ಎ ಯೋಜನೆಗಳಿಗಾಗಿ 2,461 ಮರಗಳನ್ನು ಕಡಿಯಲಾಗಿದೆ. ಹಂತ 2ಬಿ ಯೋಜನೆಗಾಗಿ 1165 ಮರಗಳನ್ನು ಕಡಿಯಲಾಗಿದೆ. ಈವರೆಗೆ 1193 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
