Vijayapura Airport: ಕಾಮಗಾರಿಗೆ ಹೆಚ್ಚುವರಿ 120 ಕೋಟಿ: ಬೊಮ್ಮಾಯಿ

*  ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಸಮಾರಂಭ
*  ಐದು ಲಕ್ಷ ಮನೆಗಳನ್ನು ಕೊಡುವುದು ನಮ್ಮ ಕಾಲದಲ್ಲೇ ಆಗಬೇಕು
*  ವಿಜಯಪುರಕ್ಕೆ ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಒಳ್ಳೆಯ ಭವಿಷ್ಯವಿದೆ

Additional Rs 120 Crore for the Vijayapura Airport Says CM Basavaraj Bommai grg

ವಿಜಯಪುರ(ಡಿ.26): ನಗರ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿ ಇರುವ ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚುವರಿಯಾಗಿ 120 ಕೋಟಿ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಘೋಷಿಸಿದ್ದಾರೆ.  ಶನಿವಾರ ನಗರದ ಜಿಲ್ಲಾ ಪಂಚಾಯತಿ ಕಚೇರಿ ಮೈದಾನದಲ್ಲಿ ಬೃಹತ್‌ ವೇದಿಕೆಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವಿಮಾನ ನಿಲ್ದಾಣ(Airport) ಕಾಮಗಾರಿಗೆ ಈಗಾಗಲೇ 220 ಕೋಟಿ ಮಂಜೂರು ಮಾಡಲಾಗಿದೆ. ಎಟಿಆರ್‌-72 ವಿಮಾನಗಳ(Flight) ಹಾರಾಟದ ಉದ್ದೇಶ ಹೊಂದಲಾಗಿತ್ತು. ಈಗ ಈ ವಿಮಾನ ನಿಲ್ದಾಣದಲ್ಲಿ 320 ಏರ್‌ಬಸ್‌, ಕಾರ್ಗೋ ಹಾಗೂ 3600 ಮೀಟರ್‌ ರನ್‌ವೇ ಮಾಡುವಂತೆ ವಿಸ್ತ್ರತ ಯೋಜನೆ ಬೇಡಿಕೆ ಮುಂದಿಟ್ಟಿದ್ದು, ಈ ಕಾಮಗಾರಿಗೆ ಹೆಚ್ಚುವರಿಯಾಗಿ ಅಗತ್ಯವಿರುವ 120 ಕೋಟಿ ನೀಡಲಾಗುವುದು ಎಂದು ಅವರು ಹೇಳಿದರು.
ವಿಜಯಪುರ(Vijayapura) ನಗರದಲ್ಲಿ ಜಾರಿಯಲ್ಲಿ ಇರುವ 24X7 ನೀರು ಸರಬರಾಜು ಯೋಜನೆಗೆ ಅವಶ್ಯಕ ಅನುದಾನ ಒದಗಿಸಲಾಗುವುದು. ಮುಂದಿನ ಆರು ತಿಂಗಳಲ್ಲಿ ಈ ಯೋಜನೆ ಕಾಮಗಾರಿ ಮುಗಿಯಬೇಕು. ವಿಜಯಪುರ ನಗರಕ್ಕೆ ಆಗಮಿಸಿ ಈ ಯೋಜನೆ ಪರಿಶೀಲಿಸಲಾಗುವುದು ಎಂದರು.

Karnataka Glory Rational Festival: ಕನ್ನಡ ಭಾವನಾತ್ಮಕ ಸಂಬಂಧ ಬೆಸೆಯುವ ಭಾಷೆ: ಸಿಎಂ ಬೊಮ್ಮಾಯಿ

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಗ್ರಾಮೀಣ ಪ್ರದೇಶದ 2.40 ಲಕ್ಷ ವಿದ್ಯಾರ್ಥಿಗಳಿಗೆ(Students) ಶಿಷ್ಯ ವೇತನ(Scholarship) ನೀಡಲಾಗಿದೆ. ಈ ವರ್ಷ 5 ಲಕ್ಷ ರೈತ ಮಕ್ಕಳಿಗೆ ಶಿಷ್ಯವೇತನ ನೀಡಲಾಗುವುದು. ರೈತ ಕುಟುಂಬದ 8,9 ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ವಿದ್ಯಾನಿಧಿ ಶಿಷ್ಯ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರೈತರ(Farmers) ಬೆಳೆ ಹಾನಿಗೆ(Crop Loss) ಕೇಂದ್ರ ಸರ್ಕಾರ(Central Government) ಹೆಕ್ಟೇರ್‌ಗೆ .6800 ಪರಿಹಾರ(Compensation) ನೀಡುತ್ತಿದ್ದು, ಅದಕ್ಕೆ ರಾಜ್ಯ ಸರ್ಕಾರವೂ(Government of Karnataka) 6800 ಪರಿಹಾರ ಸೇರಿಸಿ ಒಟ್ಟು .13,600 ಗಳನ್ನು ಪ್ರತಿ ಹೆಕ್ಟೇರ್‌ಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ದ್ರಾಕ್ಷಿ ಬೆಳೆಗಾರರ(Grape Growers) ಸಮಸ್ಯೆ ಪರಿಹರಿಸಲು ವೈನ್‌ ಬೋರ್ಡ್‌ ವ್ಯಾಪ್ತಿಗೆ ದ್ರಾಕ್ಷಿ ಬೆಳೆಗಾರರನ್ನು ಸೇರಿಸಲಾಗುವುದು. ಸಂಸ್ಕರಣೆ ಹಾಗೂ ಬೆಲೆ ನಿರ್ಧಾರದಂತಹ ಪ್ರಮುಖ ಚರ್ಚೆಯಲ್ಲಿ ದ್ರಾಕ್ಷಿ ಬೆಳೆಗಾರರು ಭಾಗವಹಿಸಲು ಅವಕಾಶ ದೊರೆಯುತ್ತದೆ ಎಂದರು.

ಐದು ಲಕ್ಷ ಮನೆಗಳನ್ನು ಕೊಡುವುದು ನಮ್ಮ ಕಾಲದಲ್ಲೇ ಆಗಬೇಕು. ದೇಂತು, ದಿಲಾಂತು, ದೇನೆ ವಾಲೋಕೋ ದಿಕಾಂತು ಎಂಬ ಮಾತು ಬರಬಾರದು. ಭೂಮಿ ಪೂಜೆ ಮಾಡುವವರು ಒಬ್ಬರು, ಉದ್ಘಾಟನೆಗೆ ಬರುವವರು ಒಬ್ಬರು ಆಗಬಾರದು. ವಸತಿ ಸಚಿವ ವಿ. ಸೋಮಣ್ಣನವರಿಗೆ(V Somanna) ಈ ಹೆಸರು ಬರಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಒಂದು ವರ್ಷ ಎರಡು ತಿಂಗಳುಗಳಲ್ಲಿ ಮನೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ತಾಕೀತು ನೀಡಿದರು.

ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಅವರು ತನಗೆ ಬೆಳ್ಳಿ ಗಧೆ ನೀಡಿದ್ದಾರೆ. ಅದನ್ನು ನಾನು ಇಲ್ಲಿಯೇ ಕೊಡುತ್ತೇನೆ. ಹಾಗಾಗಿ ಈ ಗಧೆಯನ್ನು ವಿಜಯಪುರದ ಹನುಮಾನ ದೇವರಿಗೆ ಕೊಟ್ಟು ಹೋಗುತ್ತೇನೆ ಎಂದು ಗಧೆಯನ್ನು ಸಿಎಂ ಬೊಮ್ಮಾಯಿ ಅವರು ವೇದಿಕೆಯಲ್ಲಿಯೇ ಮರಳಿಸಿದರು. ವಿಜಯಪುರಕ್ಕೆ ಮುಂದಿನ ದಿನಗಳಲ್ಲಿ ಆಡಳಿತ, ಅಭಿವೃದ್ಧಿ ಹಾಗೂ ರಾಜಕಾರಣದಲ್ಲೂ ಒಳ್ಳೆಯ ಭವಿಷ್ಯವಿದೆ ಎಂದು ಹೇಳಿದರು.

ಜಿಲ್ಲೆಯ ಜನರು ಅತ್ಯಂತ ಕಠಿಣ ಪರಿಶ್ರಮವುಳ್ಳವರು. ಕಾಯಕ ಯೋಗಿ, ಪ್ರಾಮಾಣಿಕ ಮತ್ತು ನೇರ ನಡೆ ನುಡಿ ಉಳ್ಳವರಾಗಿದ್ದಾರೆ. ಗಂಡು ಮೆಟ್ಟಿನ ಸ್ಥಳ ಇದಾಗಿದೆ. ಈ ಜಿಲ್ಲೆಗೆ ನ್ಯಾಯ ಒದಗಿಸುವ ಕಾಲ ಕೂಡಿ ಬಂದಿದೆ. ಕಳೆದ ಐದು ದಶಕಗಳ ಹೋರಾಟದ ತ್ಯಾಗ ಮತ್ತು ಬಲಿದಾನದ ಫಲವಾಗಿ ಈ ಭಾಗದ ಭೂಮಿ ತಾಯಿಯನ್ನು ಹಸಿರನಾಗಿಸಲು ತಮ್ಮ ಸರ್ವಸ್ವ ಕಳೆದುಕೊಂಡು ಕೃಷ್ಣಾ ಮೇಲ್ದಂಡೆ ಯೋಜನೆ(Upper Krishna Project) ಈ ಭಾಗದಲ್ಲಿ ತರಲು ಹಲವರು ಶ್ರಮಿಸಿದ್ದಾರೆ. ಅವರ ತ್ಯಾಗ, ಬಲಿದಾನ ಹುಸಿಯಾಗಬಾರದು. ಬರಗಾಲ ಜಿಲ್ಲೆ ಹಣೆ ಪಟ್ಟಿಯನ್ನು ಅಳಿಸಿ ಹಾಕಬೇಕಾಗಿದೆ ಎಂದರು.

Karnataka BJP Politics: ಸಿಎಂ ಬೊಮ್ಮಾಯಿ ಬದಲಾವಣೆ: ರಾಜ್ಯ ಬಿಜೆಪಿಗರ ಪ್ರತಿಕ್ರಿಯೆ

ಐತಿಹಾಸಿಕ, ಆಡಳಿತಾತ್ಮಕ ಹಾಗೂ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಈ ಪ್ರದೇಶ ಅಭಿವೃದ್ಧಿಯಿಂದ ಹಿಂದುಳಿದಿದೆ. ಇನ್ನು ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಕರ್ನಾಟಕದ ನೆಲ, ಜಲ ಮತ್ತು ಜನರ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಳಗೇರಿ ನಿವಾಸಿಗಳಿಗೆ ಸಾಂಕೇತಿಕವಾಗಿ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಿದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಅವರು ನೇರ ನಡೆ ನುಡಿ ಮನುಷ್ಯ. ಯತ್ನಾಳ ಡಬಲ್‌ ಎಂಜಿನ್‌ ಹೊಂದಿರುವ ಶಾಸಕರಾಗಿದ್ದಾರೆ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ವಿಜಯಪುರ ಧೂಳಾಪುರ ಅಲ್ಲ. ಅದನು ಬಂಗಾರದಪುರ ಮಾಡುತ್ತೇವೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios