Asianet Suvarna News Asianet Suvarna News

ವ್ಯಸನಮುಕ್ತರು ಸತ್ಪ್ರಜೆಗಳಾಗಿ ಬದುಕಬೇಕು: ಯು.ಟಿ.ಖಾದರ್‌

ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನ ಮುಕ್ತರಾದ ಮಂದಿ, ತಮ್ಮ ಕುಟುಂಬಗಳಿಗೆ ಶಕ್ತಿ ತುಂಬುವವರಾಗಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು, ಹೊಸ ಜೀವನ ರೂಪಿಸಿ ಸತ್ಪ್ರಜೆಗಳಾಗಿ ಬದುಕಬೇಕು.

Addiction free should live as good citizens Says UT Khader gvd
Author
First Published Jul 30, 2023, 11:41 PM IST

ಬೆಳ್ತಂಗಡಿ (ಜು.30): ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನ ಮುಕ್ತರಾದ ಮಂದಿ, ತಮ್ಮ ಕುಟುಂಬಗಳಿಗೆ ಶಕ್ತಿ ತುಂಬುವವರಾಗಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು, ಹೊಸ ಜೀವನ ರೂಪಿಸಿ ಸತ್ಪ್ರಜೆಗಳಾಗಿ ಬದುಕಬೇಕು. ಇವರಿಗೆ ಬದುಕು ರೂಪಿಸಿಕೊಳ್ಳಲು ಸರ್ಕಾರದಿಂದ ಸಹಕಾರ ನೀಡುವಂತೆ ಗಮನ ಸೆಳೆಯಲಾಗುವುದು ಎಂದು ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್‌ ಹೇಳಿದರು. 

ಅವರು  ಧರ್ಮಸ್ಥಳ ಅಮೃತವರ್ಷಿಣಿ ಸಭಾಂಗಣದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉಜಿರೆ ಇದರ ಆಶ್ರಯದಲ್ಲಿ, ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಸಂತೃಪ್ತ ಜೀವನ ನಡೆಸುತ್ತಿರುವ ನವಜೀವನ ಸದಸ್ಯರ ಶತದಿನೋತ್ಸವ ಕಾರ್ಯಕ್ರಮದ ಅಂಗವಾಗಿ ವ್ಯಸನಮುಕ್ತ ಸಾಧಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದುಶ್ಚಟಗಳನ್ನು ತೊರೆದು ಜೀವನದಲ್ಲಿ ಶಾಶ್ವತ ನೆಲೆ ನಿಲ್ಲಲು, ಹೊಸ ಜೀವನ ರೂಪಿಸಿಕೊಳ್ಳಲು ಸಾಮಾಜಿಕ ಚಿಂತನೆಯ ಅನುಭವದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧಾರ್ಮಿಕ ಶೈಕ್ಷಣಿಕವಾಗಿ ರೂಪಿಸಿರುವ ಯೋಜನೆಗಳು ಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿವೆ. 

ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್‌ ಆದ್ಯತೆ: ಸಚಿವ ಶಿವಾನಂದ ಪಾಟೀಲ

ದುಶ್ಚಟ ಹಾಗೂ ದ್ವೇಷ ಮುಕ್ತ ಸಮಾಜ ನಿರ್ಮಾಣದ ತೀರ್ಮಾನದಿಂದ ತೃಪ್ತಿಯ ಜೀವನ ನಡೆಸಬಹುದು. ಗ್ರಾಮೀಣ ಮಟ್ಟದಲ್ಲಿ ಸ್ವಾವಲಂಬನೆ ಮೂಡಿದರೆ ದೇಶ ಬಲಿಷ್ಠಗೊಳ್ಳುವುದು ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಧರ್ಮಾಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಯುವ ಜನತೆಗೆ ಇಂದಿನ ದಿನಗಳಲ್ಲಿ ದುಶ್ಚಟ ಎಂಬುದು ಹೆಮ್ಮೆಯ ವಿಚಾರವಾಗಿರುವುದು ವಿಷಾದನೀಯ. ಚಂಚಲ ಮನಸ್ಸು ದುಶ್ಚಟಗಳನ್ನು ಮುಂದುವರಿಸಲು ಪ್ರೇರೇಪಣೆ ನೀಡುತ್ತದೆ. ದೃಢವಾದ ನಿರ್ಧಾರದಿಂದ ದುಶ್ಚಟಗಳನ್ನು ದೂರ ಮಾಡಲು ಸಾಧ್ಯ. ಬಹಿರಂಗ ಶುದ್ಧಿಯಂತೆ ಅಂತರಂಗ ಶುದ್ಧಿಯೂ ಮುಖ್ಯ ಎಂದರು.

ವಾರ್ಷಿಕ ವರದಿಯನ್ನು ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್‌.ಎಚ್‌. ಮಂಜುನಾಥ್‌ ಬಿಡುಗಡೆಗೊಳಿಸಿದರು. ಮಂಗಳೂರಿನ ಮನೋವೈದ್ಯ ಡಾ. ಶ್ರೀನಿವಾಸ ಭಟ್‌ ಯು., ಗ್ರಾ.ಯೋ. ಮುಖ್ಯ ಕಾರ್ಯನಿರ್ವಹಣಾಕಾರಿ ಅನಿಲ್‌ ಕುಮಾರ್‌ ಎಸ್‌.ಎಸ್‌., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟಿಎ. ರಾಮಸ್ವಾಮಿ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್‌, ಗ್ರಾ.ಯೋ. ಟ್ರಸ್ಟಿಸಂಪತ್‌ ಸಾಮ್ರಾಜ್ಯ, ಜನಜಾಗೃತಿ ವೇದಿಕೆ ರಾಜ್ಯ ಸ್ಥಾಪಕಾಧ್ಯಕ್ಷ ಸತೀಶ್‌ ಹೊನ್ನವಳ್ಳಿ, ಧ .ಗ್ರಾ. ಯೋಜನೆಯ ಹಣಕಾಸು ವಿಭಾಗದ ನಿರ್ದೇಶಕ ಶಾಂತಾರಾಮ್‌ ಪೈ ಉಪಸ್ಥಿತರಿದ್ದರು. 

ರಾಜ್ಯ ಕಾರ್ಯದರ್ಶಿ ವಿವೇಕ್‌ ವಿನ್ಸೆಂಟ್‌ ಪಾಯಸ್‌ ಸ್ವಾಗತಿಸಿದರು. ಜಗದೀಶ್‌ ಗುಬ್ಬಿ, ನವ್ಯಾ ಮೈಸೂರು ಮತ್ತು ತೋಪೇ ಗೌಡ ತುರುವಕೆರೆ ಅನಿಸಿಕೆ ವ್ಯಕ್ತಪಡಿಸಿದರು. ತಿಮ್ಮಯ್ಯ ನಾಯ್ಕ ಮತ್ತು ಗಣೇಶ್‌ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಮೊ.ಕೊರವಿ ವಂದಿಸಿದರು. ಈ ಸಂದರ್ಭ ಸಭಾಪತಿ ಯು. ಟಿ. ಖಾದರ್‌ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಜಾಗೃತಿ ಅಣ್ಣ, ಜಾಗೃತಿ ಮಿತ್ರ ಪ್ರಶಸ್ತಿ: ವ್ಯಸನಮುಕ್ತ ಸಾಧಕರ ಸಮಾವೇಶದಲ್ಲಿ ಅತಿ ಹೆಚ್ಚು ಜನರನ್ನು ಶಿಬಿರದಲ್ಲಿ ಭಾಗವಹಿಸಲು ಪ್ರೇರೇಪಿಸಿದ, ಹಾಸನದ ಬಾಲು ಸುಬ್ರಹ್ಮಣ್ಯ, ರಾಮದುರ್ಗದ ಸೋಹನ ಯಮನಪ್ಪ ರಾಯಬಾಗ, ಶಿರಸಿಯ ರಾಜು ಗಣಪತಿ ಶೆಟ್ಟಿ, ತಿಪಟೂರಿನ ಯೋಗೇಶ ಎನ್‌. ಅವರಿಗೆ ಜಾಗೃತಿ ಅಣ್ಣ ಪ್ರಶಸ್ತಿ ಹಾಗೂ ಕೊರಟಗೆರೆಯ ಮಂಜಣ್ಣ ವಿ.ಆರ್‌., ಕೊಪ್ಪಳದ ಲಕ್ಷ್ಮಣ್‌, ಬಾದಾಮಿಯ ಸಂತೋಷ್‌ ವಡ್ಡರ, ಕಳಸದ ರವಿ ಶೆಟ್ಟಿ ಅವರಿಗೆ ಜಾಗೃತಿ ಮಿತ್ರ ಪ್ರಶಸ್ತಿ ನೀಡಲಾಯಿತು.

ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ ಹಾರಾಟಕ್ಕೆ ಅನುಮತಿ: ಸಂಸದ ರಾಘ​ವೇಂದ್ರ

ದುಶ್ಚಟದಿಂದ ವ್ಯಕ್ತಿತ್ವ ನಾಶ: ಗೆದ್ದರೆ ಸಂತಸಕ್ಕೆ, ಸೋತರೆ ದುಃಖಕ್ಕೆ ಎಂದು ಮದ್ಯಪಾನ ಮಾಡುವ ಮಂದಿ ಇದ್ದಾರೆ. ಆದರೆ ಇಲ್ಲಿ ಎರಡೂ ಕಡೆ ಗೆಲ್ಲುವುದು ಮದ್ಯಪಾನ, ಸೋಲುವುದು ವ್ಯಕ್ತಿ. ಮದ್ಯಪಾನವು ಜನರನ್ನು ದುಷ್ಟರನ್ನಾಗಿ ರೂಪಿಸಿ ಅವರ ವ್ಯಕ್ತಿತ್ವವನ್ನು ನಾಶಮಾಡುತ್ತದೆ. ಇಂತಹ ಅಸಹನೀಯ ಬದುಕಿಗೆ ಮದ್ಯವರ್ಜನ ಶಿಬಿರದ ಮೂಲಕ ಮಂಗಳ ಹಾಡಲಾಗುತ್ತದೆ. ಮದ್ಯಮುಕ್ತರು ಪರಿವರ್ತನೆಯಾಗುವುದರಿಂದ ಭವಿಷ್ಯದಲ್ಲಿ ಯಶಸ್ಸು ಸಾಸುತ್ತಾರೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Follow Us:
Download App:
  • android
  • ios