ಕಾಡುಗೊಲ್ಲರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಿ: ಗಂಗಾಧರ್
ಕಾಡುಗೊಲ್ಲರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಒತ್ತಾಯಿಪಿ ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸುತ್ತಿದ್ದೇವೆ ಎಂದು ಕಾಡುಗೊಲ್ಲರ ಜಿಲ್ಲಾಧ್ಯಕ್ಷ ಗಂಗಾಧರ್ ತಿಳಿಸಿದರು.
ಗುಬ್ಬಿ : ಕಾಡುಗೊಲ್ಲರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಒತ್ತಾಯಿಪಿ ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸುತ್ತಿದ್ದೇವೆ ಎಂದು ಕಾಡುಗೊಲ್ಲರ ಜಿಲ್ಲಾಧ್ಯಕ್ಷ ಗಂಗಾಧರ್ ತಿಳಿಸಿದರು.
ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಮಾಚ್‌ರ್ 13ರಂದು ಪಟ್ಟಣದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದ ಸುಮಾರು 12 ಜಿಲ್ಲೆಗಳಲ್ಲಿ ಕಾಡುಗೊಲ್ಲರು ನಿರ್ಣಾಯಕರಾಗಿದ್ದಾರೆ. ಕಾಡುಗೊಲ್ಲರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಲು ಕ್ರಮ ಕೈಗೊಂಡರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತೇವೆ. ಇಲ್ಲವಾದಲ್ಲಿ ಅನುಕೂಲ ಮಾಡಿಕೊಡುವ ಪಕ್ಷವನ್ನು ಬೆಂಬಲಿಸುವೆವು. ಕಾಡುಗೊಲ್ಲ ಮತ್ತು ಯಾದವ ಸಮುದಾಯಗಳು ಬೇರೆ ಬೇರೆಯಾಗಿರುವುದರಿಂದ ಯಾದವ ಸಮುದಾಯಕ್ಕೆ ಸೇರಿರುವ ತಾಲೂಕಿನ ಬಿಜೆಪಿ ಮುಖಂಡ ಬೆಟ್ಟಸ್ವಾಮಿಯವರನ್ನು ಈ ಸಮಾವೇಶಕ್ಕೆ ಆಹ್ವಾನಿಸಿಲ್ಲ ಎಂದರು.
ಸಂಘದ ಗೌರವಾಧ್ಯಕ್ಷ ಬಸವರಾಜು ಮಾತನಾಡಿ, ಕಾಡುಗೊಲ್ಲರು ಪರಿಶಿಷ್ಟಪಂಗಡಕ್ಕೆ ಸೇರುವ ಎಲ್ಲಾ ಅರ್ಹತೆಯನ್ನು ಹೊಂದಿದ್ದರೂ, ಸರ್ಕಾರ ಉದ್ದೇಶಪೂರ್ವಕವಾಗಿ ತಡೆಯುತ್ತಿರುವುದು ದುರಾದೃಷ್ಟಕರ. ಎಲ್ಲಾ ರಾಜಕೀಯ ಪಕ್ಷಗಳು ಕಾಡುಗೊಲ್ಲರನ್ನು ನಿರ್ಲಕ್ಷಿಸಿದ್ದು, ಬಿಜೆಪಿ ಸರ್ಕಾರವು ಅದೇ ಹಾದಿಯಲ್ಲಿ ಸಾಗುತ್ತಿದೆ. ಬುಡಕಟ್ಟು ಪಂಗಡ ಮತ್ತು ಜಾತಿಯಲ್ಲಿ ಭಿನ್ನತೆ ಇದ್ದು ಕಾಡುಗೊಲ್ಲರು ಬುಡಕಟ್ಟು ಪಂಗಡಕ್ಕೆ ಸೇರುವುದರಿಂದ ಮೀಸಲಾತಿಗೆ ಅರ್ಹರಿದ್ದಾರೆ ಎಂದರು.
ಸಮಾವೇಶದ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಸಮುದಾಯದ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಸಮಾವೇಶವನ್ನು ಹಮ್ಮಿಕೊಂಡಿದ್ದು, ಸುಮಾರು 6 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಸಮಾವೇಶಕ್ಕೂ ಮುಂಚೆ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಡುಗೊಲ್ಲ ಸಂಘದ ತಾಲೂಕು ಘಟಕದ ಖಜಾಂಚಿಗಳಾದ ತಿಮ್ಮಣ್ಣ, ಗುರುಲಿಂಗಯ್ಯ, ಮುಖಂಡರಾದ ಪೂಜಾರಿ ಯರ್ರಪ್ಪ, ಯಶೋಧಮ್ಮ, ಜುಂಜೇಗೌಡ, ಮಲ್ಲಿಕಾರ್ಜುನ್, ಹಾಲೇಗೌಡ, ನಾಗಣ್ಣ, ಜಯಣ್ಣ, ಉಮೇಶ್ ಹಾಗೂ ಇತರರು ಹಾಜರಿದ್ದರು.
ಮಹಿಳೆಯರೊಗೆ ಸ್ಥಾನ ಮೀಸಲು
ಕೆ.ಆರ್. ನಗರ : ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟುಸ್ಥಾನಗಳ ಮೀಸಲಾತಿ ನೀಡುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಶೀಘ್ರವಾಗಿ ಜಾರಿಗೆ ತರಬೇಕು ಎಂದು ಶಾಸಕ ಸಾ.ರಾ. ಮಹೇಶ್ ಒತ್ತಾಯಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಯುವ ರೈತ ವೇದಿಕೆ, ಕೃಷಿ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದು, ಅವರಿಗೆ ನಾವು ಸದಾ ಪೋ›ತ್ಸಾಹ ನೀಡಬೇಕು ಎಂದರು.
ದುಷ್ಟಶಕ್ತಿಗಳನ್ನು ನಿಗ್ರಹಿಸುವ ಶಕ್ತಿಯನ್ನು ದೇವರು ಸ್ತ್ರೀಯರಿಗೆ ನೀಡಿರುವುದರಿಂದ ಎಲ್ಲರೂ ಅವರನ್ನು ಗೌರವ ಮನೋಭಾವನೆಯಿಂದ ಕಂಡು ಸಮಾನತೆಯ ಸಮಾಜಕ್ಕೆ ಪರಸ್ಪರ ಒಂದಾಗಿ ಕೆಲಸ ಮಾಡಬೇಕೆಂದರು.
ಹೆಣ್ಣು ಮತ್ತು ಗಂಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಆದ್ದರಿಂದ ಇಬ್ಬರು ಹೊಂದಾಣಿಕೆಯಿಂದ ಸುಂದರವಾದ ಜೀವನ ನಡೆಸಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕೆಂದು ಸಲಹೆ ನೀಡಿದರು.
ಪುರುಷರಿಗಿಂತ ಅತ್ಯಂತ ಶಕ್ತಿಶಾಲಿಯಾಗಿರುವ ಮಹಿಳೆಯರು ಕುಟುಂಬವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸರ್ವರನ್ನು ಸರಿದಾರಿಗೆ ತಂದು ಸಾಕಷ್ಟುತ್ಯಾಗ ಮಾಡುವುದರಿಂದ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪುರುಷನ ಆಧ್ಯ ಕರ್ತವ್ಯ ಎಂದರು.