ಸಿಲ್ಕ್‌ಬೋರ್ಡ್‌ನಿಂದ ದೇವನಹಳ್ಳಿ ಏರ್‌ಪೋರ್ಟ್‌ಗೆ ಸಂಪರ್ಕ| ಟ್ಯಾಕ್ಸಿ ಸ್ಟಾಂಡ್, ಬಸ್‌ಬೇ, ಮೋಟರ್‌ಸೈಕಲ್ ಪೂಲ್ ಸೌಲಭ್ಯ|
ನವದೆಹಲಿ(ಡಿ.09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೂತನ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣಕ್ಕಾಗಿ .3680 ಕೋಟಿ (500 ಮಿಲಿಯನ್ ಅಮೆರಿಕನ್ ಡಾಲರ್)ನಷ್ಟು ಸಾಲ ನೀಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್(ಎಡಿಬಿ) ಅನುಮೋದನೆ ನೀಡಿದೆ.
ಈ ಯೋಜನೆಯಡಿ ನಗರದ ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 56 ಕಿ.ಮೀ ಉದ್ದದ ಮೇಲ್ಸೇತುವೆ ಮೆಟ್ರೋ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಯೋಜನೆಯು ಅತ್ಯಾಧುನಿಕ ವ್ಯವಸ್ಥೆಗಳಾದ ಬಸ್ ಬೇಸ್, ಟ್ಯಾಕ್ಸಿ ಸ್ಟಾಂಡ್‌ಗಳು, ಮೋಟರ್‌ಸೈಕಲ್ ಪೂಲ್ಸ್ ಮತ್ತು ಜನರ ಓಡಾಟಕ್ಕೆ ಅನುಕೂಲವಾಗುವ ಮೇಲ್ಸೇತುವೆಗಳು ಮತ್ತು ವಾಕ್‌ವೇಸ್‌ಗಳನ್ನು ಒಳಗೊಂಡ 30 ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ. ಅಲ್ಲದೆ ಮಹಿಳೆಯರು, ಮಕ್ಕಳು ಮತ್ತು ದಿವ್ಯಾಂಗರು, ಹಿರಿಯ ನಾಗರಿಕರು ಸೇರಿದಂತೆ ಸಹಾಯದ ಅಗತ್ಯವಿರುವವರೆಗೂ ನೆರವು ಕಲ್ಪಿಸುವ ನಿಟ್ಟಿನಲ್ಲಿ ಈ ಮೆಟ್ರೋ ಯೋಜನೆ ರೂಪಿಸಲಾಗುತ್ತದೆ ಎಂದು ಎಡಿಬಿ ಹೇಳಿದೆ.
ಬೆಂಗಳೂರಲ್ಲಿ ಮೆಟ್ರೋ ಸಂಚಾರ ಶುರುವಾಗಿ 10 ವರ್ಷ
ತಾಂತ್ರಿಕ ಸಹಾಯಕ್ಕಾಗಿ ಎಡಿಬಿ ಹೆಚ್ಚುವರಿ ಸುಮಾರು 15 ಕೋಟಿ (2 ಮಿಲಿಯನ್ ಡಾಲರ್)ಗಳನ್ನು ನೀಡಲಿದ್ದು, ಅದನ್ನು ಕರ್ನಾಟಕ ಸರ್ಕಾರ ಕೈಗೊಳ್ಳಲಿರುವ ನಗರಾಭಿವೃದ್ಧಿ ಯೋಜನೆ ಹಾಗೂ ಸಾರಿಗೆ ಆಧಾರಿತ ಅಭಿವೃದ್ಧಿ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳಲು ನೆರವಾಗಲಿದೆ. ಜೊತೆಗೆ ಈ ಯೋಜನೆಯು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿ. ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ಸಾರಿಗೆ ಆಧಾರಿತ ಸರ್ಕಾರಿ ಸಂಸ್ಥೆಗಳ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಎಡಿಬಿಯ ದಕ್ಷಿಣ ಏಷ್ಯಾದ ಹಿರಿಯ ಸಾರಿಗೆ ತಜ್ಞ ಕ್ವಾರು ಕಸಾಹರ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 9, 2020, 7:28 AM IST