Asianet Suvarna News Asianet Suvarna News

Mangaluru Airport: ಯಾನಿಗಳಿಗೆ ಇನ್ನು 3ರಿಂದ 10 ಪಟ್ಟು ಅಭಿವೃದ್ಧಿ ಶುಲ್ಕ ಬಳಕೆ ಹೆಚ್ಚಳ!

  • ಮಂಗಳೂರು ವಿಮಾನ ನಿಲ್ದಾಣದ ಯಾನಿಗಳಿಗೆ ಇನ್ನು 3 ರಿಂದ 10 ಪಟ್ಟು ಅಭಿವೃದ್ಧಿ ಶುಲ್ಕ ಬಳಕೆ ಹೆಚ್ಚಳ
  • UDF ದರ ಪರಿಷ್ಕರಣೆಗೆ AER ಗೆ 5 ವರ್ಷಗಳ ಪ್ರಸ್ತಾವನೆ ಸಲ್ಲಿಸಿದ ಅದಾನಿ ಕಂಪನಿ,
  • ನಿರ್ಗಮನ ಮಾತ್ರವಲ್ಲ ಆಗಮನ ಯಾನಿಗಳಿಗೂ ದುಬಾರಿ ಶುಲ್ಕ ಪರಿಷ್ಕರಣೆ ಪ್ರಸ್ತಾಪ
Adani owned Mangaluru airport seeks user fee hike rav
Author
Mangalore, First Published Aug 20, 2022, 11:13 AM IST

ಮಂಗಳೂರು (ಆ.20): ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ ದೇಶ, ವಿದೇಶ ಯಾನ ಕೈಗೊಳ್ಳುವವರಿಗೆ ಮಾತ್ರವಲ್ಲ, ಬೇರೆ ಕಡೆಗಳಿಂದ ಆಗಮಿಸುವವರ ಪಾಲಿಗೂ ಭವಿಷ್ಯದಲ್ಲಿ ಅತಿ ದುಬಾರಿಯಾಗಿ ಪರಿಣಮಿಸಲಿದೆ. ಮುಂದಿನ ಐದು ವರ್ಷದಲ್ಲಿ ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿ ಬಳಕೆ ಶುಲ್ಕ 3ರಿಂದ 10 ಪಟ್ಟು ಹೆಚ್ಚಳವಾಗಲಿದ್ದು, ಯಾನಿಗಳು ಇಷ್ಟೊಂದು ದುಬಾರಿ ಮೊತ್ತವನ್ನು ತೆರಲೇ ಬೇಕಾದ ಅನಿವಾರ್ಯತೆಗೆ ಸಿಲುಕಲಿದ್ದಾರೆ.

ಮಂಗಳೂರು ಏರ್‌ಪೋರ್ಟ್‌ ವಾರದಲ್ಲಿ ಅದಾನಿ ತೆಕ್ಕೆಗೆ

ಈ ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಅದಾನಿ ಕಂಪನಿ(Adani company) ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವ ಅಭಿವೃದ್ಧಿ ಬಳಕೆ ಶುಲ್ಕ(ಯುಡಿಎಫ್‌-ಯೂಸರ್‌ ಡೆವಲಪ್‌ಮೆಂಟ್‌ ಫೀ) ಪರಿಷ್ಕರಣೆಯ ಪ್ರಸ್ತಾವನೆಯನ್ನು ಆ.12ರಂದು ಏರ್‌ಪೋರ್ಚ್‌(Airport) ಇಕನಾಮಿಕ್ಸ್‌ ರೆಗ್ಯುಲೇಟರಿ ಅಥಾರಿಟಿ(ಎಇಆರ್‌ಎ)ಗೆ ಅನುಮತಿಗಾಗಿ ಸಲ್ಲಿಸಿದೆ. ಇದರಲ್ಲಿ ದೇಶಿಯ ಹಾಗೂ ವಿದೇಶಿ ವಿಮಾನಯಾನಿಗಳಿಗೆ ಅಭಿವೃದ್ಧಿ ಬಳಕೆ ಶುಲ್ಕ ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ. ನಿರ್ಗಮನ ಯಾನಿಗಳಿಗೆ ಮಾತ್ರವಲ್ಲ, ಆಗಮನ ಯಾನಿಗಳಿಗೂ ಅನ್ವಯಿಸುವಂತೆ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾಗಿದೆ. ಬೇಗನೆ ಅನುಮತಿ ಲಭಿಸಿದರೆ ಅಕ್ಟೋಬರ್‌ 1ರಿಂದಲೇ ಜಾರಿಗೊಳಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಎಇಆರ್‌ಎ ಇನ್ನಷ್ಟೆಅನುಮತಿ ನೀಡಬೇಕಾಗಿದೆ. 2022 ಏಪ್ರಿಲ್‌ನಿಂದ ಪೂರ್ವಾನ್ವಯವಾಗುವಂತೆ ಮಾಚ್‌ರ್‍ 31, 2026ರ ವರೆಗಿನ ಅಭಿವೃದ್ಧಿ ಬಳಕೆ ಶುಲ್ಕ ಪರಿಷ್ಕರಣೆಯನ್ನು ಪ್ರಸ್ತಾಪಿಸಲಾಗಿದೆ. ಸದ್ಯ ಇದರ ವಿವರವನ್ನು ಸಾರ್ವಜನಿಕ ಅವಗಾಹನೆಗೆ ಎಇಆರ್‌ಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ನಿರ್ಗಮನ ಮಾತ್ರವಲ್ಲ ಆಗಮನ ಯಾನಿಗಳಿಗೂ ಶುಲ್ಕ: ಪ್ರಸಕ್ತ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ದೇಶೀಯ ಯಾನಿಗಳಿಗೆ 150 ರು. ಹಾಗೂ ವಿದೇಶಿ ಯಾನಿಗಳಿಗೆ 825 ರು. ಅಭಿವೃದ್ಧಿ ಬಳಕೆ ಶುಲ್ಕವನ್ನು ವಿಧಿಸಲಾಗುತ್ತಿದೆ. 2010ರಿಂದ ಇದೇ ಶುಲ್ಕ ವಿಧಿಸುತ್ತಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ನಿಲ್ದಾಣದ ನಿರ್ವಹಣೆ ಮಾಡುತ್ತಿದ್ದುದರಿಂದ ಈ ಶುಲ್ಕದಲ್ಲಿ ಪರಿಷ್ಕರಣೆಯಾಗಿರಲಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರದ ನಿಯಮದ ಪ್ರಕಾರ ಪ್ರತಿ ಐದು ವರ್ಷಕ್ಕೆ ಅಭಿವೃದ್ಧಿ ಬಳಕೆ ಶುಲ್ಕ ಪರಿಷ್ಕರಣೆಗೆ ಅವಕಾಶ ಇದೆ.

ಕಳೆದ ಎರಡು ವರ್ಷದಿಂದ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಕಂಪನಿ ವಹಿಸಿಕೊಂಡಿದೆ. ಇದೀಗ ಎರಡು ವರ್ಷದ ಬಳಿಕ ಅದಾನಿ ಕಂಪನಿ ಅಭಿವೃದ್ಧಿ ಬಳಕೆ ಶುಲ್ಕ ಪರಿಷ್ಕರಣೆಗೆ ಹೊರಟಿದೆ. ಪ್ರಸ್ತಾವನೆಯಲ್ಲಿ ಆಗಮನ ಯಾನಿಗಳಿಗೂ ದುಬಾರಿ ಶುಲ್ಕವನ್ನು ಪ್ರಸ್ತಾಪಿಸುವ ಮೂಲಕ ಯಾನಿಗಳಿಗೆ ಬರೆ ಹಾಕಲು ಮುಂದಾಗಿದೆ ಎಂಬ ಆರೋಪ ಕೇಳುವಂತಾಗಿದೆ.

'ಮಂಗಳೂರು ಏರ್‌ಪೋರ್ಟ್‌ಗೆ ಕೋಟಿ ಚೆನ್ನಯ ಹೆಸರು'

ಎಷ್ಟೆಷ್ಟುದುಬಾರಿ ಶುಲ್ಕ ಪ್ರಸ್ತಾಪ?:

2022ರಿಂದ 2026ರ ಐದು ವರ್ಷಗಳ ಅವಧಿಯಲ್ಲಿ ದೇಶೀಯ ಯಾನಿಗಳಿಗೆ 250 ರು.ನಿಂದ 725 ರು. ವರೆಗೆ, ವಿದೇಶಿ ಯಾನಿಗಳಿಗೆ 1,200 ರು. ವರೆಗೆ ಅಭಿವೃದ್ಧಿ ಬಳಕೆ ಶುಲ್ಕ ಹೆಚ್ಚಳವಾಗಲಿದೆ.

2022 ಮತ್ತು 2023ರಲ್ಲಿ ದೇಶಿಯ ಯಾನಿಗಳಿಗೆ ಹಾಲಿ 150 ರು.ನಿಂದ 250 ರು.ಗೆ ಶುಲ್ಕ ಹೆಚ್ಚಳ ಪ್ರಸ್ತಾಪಿಸಿದರೆ, ವಿದೇಶಿ ಯಾನಿಗಳಿಗೆ 825 ರು. ಇರುವುದನ್ನು 525 ರು.ಗೆ ಇಳಿಕೆ ಪ್ರಸ್ತಾಪಿಸಲಾಗಿದೆ. 2024ಕ್ಕೆ ದೇಶೀಯ ಯಾನಿಗೆ 575 ರು.ಗೆ ಏರಿಕೆ ಮಾಡಿದರೆ, ವಿದೇಶಿ ಯಾನಿಗೆ 525 ರು. ಅಷ್ಟೇ ನಿಗದಿಪಡಿಸಲಾಗಿದೆ. 2025 ಮತ್ತು 2026ರಲ್ಲಿ ದೇಶೀಯ ಯಾನಿಗೆ 725 ರು. ಹಾಗೂ ವಿದೇಶಿ ಯಾನಿಗೆ 1,200 ರು. ಪ್ರಸ್ತಾಪಿಸಲಾಗಿದೆ. ಪ್ರಸ್ತಾವಿತ ಪರಿಷ್ಕೃತ ಅಭಿವೃದ್ಧಿ ಬಳಕೆ ಶುಲ್ಕವನ್ನು ನಿರ್ಗಮನ ಮಾತ್ರವಲ್ಲ ಆಗಮನ ಯಾನಿಗಳಿಗೂ ವಿಧಿಸಲು ಪ್ರಸ್ತಾಪಿಸಿರುವುದಕ್ಕೆ ವಿಮಾನ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 2 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅಭಿವೃದ್ಧಿ ಬಳಕೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.

ಲಗೇಜು ಸಾಗಾಟಗಾರರ ದರವೂ ದುಬಾರಿ!

ಮಂಗಳೂರಿನ ವಿಮಾನ ನಿಲ್ದಾಣದಲಿ ಪ್ರಯಾಣಿಕರ ಲಗೇಜು ಸಾಗಾಟಗಾರರ ದರವೂ ಲಗೇಜ್‌ವೊಂದಕ್ಕೆ 100 ರು.ಇದ್ದುದು ಮೂರು ಪಟ್ಟು ಏರಿಕೆಯಾಗಿದೆ. ದೇಶೀಯ ಯಾನಿಗಳಿಗೆ 400 ರು. ಹಾಗೂ ವಿದೇಶಿ ಯಾನಿಗಳಿಗೆ 600 ರು. ದುಬಾರಿ ದರ ನಿಗದಿಪಡಿಸಲಾಗಿದೆ. ಈಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯಾನಿಗಳಿಗೆ ದರ ಏರಿಕೆಯದ್ದೇ ಬಿಸಿ ತಟ್ಟುತ್ತಿದೆ.

ಪ್ರಧಾನಿ ಕಚೇರಿಗೆ ದೂರು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಭಿವೃದ್ಧಿ ಬಳಕೆ ಶುಲ್ಕ ವಿಪರೀತ ಏರಿಕೆ ಮಾಡುವುದರ ವಿರುದ್ಧ ಕುವೈಟ್‌ನಲ್ಲಿರುವ ಅನಿವಾಸಿ ಕನ್ನಡಿಗ ಎಂಜಿನಿಯರ್‌ ಮೋಹನದಾಸ ಕಾಮತ್‌ ಅವರು ಈಗಾಗಲೇ ಭಾರತದ ಪ್ರಧಾನಿ ಕಚೇರಿಗೆ ಟ್ವೀಟ್‌ ಮೂಲಕ ದೂರು ನೀಡಿದ್ದಾರೆ. ಇದೇ ರೀತಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಸಭಾ ಸದಸ್ಯ ಜಗ್ಗೇಶ್‌, ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಇವರಿಗೂ ಟ್ವೀಟ್‌ ಮೂಲಕ ದರ ಹೆಚ್ಚಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನಿವಾಸಿ ಕನ್ನಡಿಗರು ಮಂಗಳೂರಿಗೆ ಬಂದುಹೋಗಬೇಕಾದರೆ ಇಷ್ಟೊಂದು ದುಬಾರಿ ದರ ತೆರಬೇಕಾ? ಜನಪ್ರತಿನಿಧಿಗಳು ಎಲ್ಲಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ದರ ಹೆಚ್ಚಳ ವಿರುದ್ಧ ಅನಿವಾಸಿ ಕನ್ನಡಿಗ ಸಂಘಟನೆಗಳೂ ಭಾರತದ ಪ್ರಧಾನಿಗಳಿಗೆ ಆಕ್ಷೇಪ ಪತ್ರ ಕಳುಹಿಸಲು ಮುಂದಾಗಿದ್ದಾರೆ.

Follow Us:
Download App:
  • android
  • ios