Asianet Suvarna News Asianet Suvarna News

ಅಲೆಮಾರಿ ಸಮುದಾಯಕ್ಕೆ ಸೂರು ಕಲ್ಪಿ​ಸು​ವುದು ಸರ್ಕಾ​ರದ ಕರ್ತ​ವ್ಯ: ನಟ ಚೇತನ್‌

ವಿಜಯಪುರ, ಬಾಗಲಕೋಟೆ ಸೇರಿದಂತೆ ಅನೇಕ ಭಾಗಗಳಲ್ಲಿ ಕೊರಚ, ಕೊರಮ, ಸೋಲಿಗ, ಶಿಳ್ಳೆಕ್ಯಾತರು, ಘಿಸಾಡಿ ಹೀಗೆ ಅನೇಕ ಅಲೆಮಾರಿ ಸಮುದಾಯದವರಿಗೆ ಸರ್ಕಾರದ ಅನೇಕ ಸೌಲಭ್ಯಗಳು ದೊರಕಿಲ್ಲ
ಅವರು ಇಂದಿಗೂ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ| ಸರ್ಕಾರವು ಈ ಜನಾಂಗದ ರಕ್ಷಣೆ, ಅಭಿವೃದ್ಧಿಗೆ ಮುಂದಾಗಬೇಕು ಎಂದ ನಟ ಚೇತನ್|
 

Actor Chetan Demand to Government for Facilities to Nomad Community
Author
Bengaluru, First Published Dec 1, 2019, 10:13 AM IST

ವಿಜಯಪುರ(ಡಿ.01): ತೀವ್ರ ಅನಕ್ಷರತೆಯಿಂದ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವಿಸುತ್ತಿರುವ ಅಲೆಮಾರಿ, ಬುಡಕಟ್ಟು ಜನಾಂಗದವರಿಗೆ ರಕ್ಷಣೆ ಇಲ್ಲದಾಗಿದೆ. ಅವರ ಬದುಕು ಇನ್ನೂ ಹಸನಾಗಿಲ್ಲ. ಅಲೆಮಾರಿಗಳಿಗೆ ಸೂರು, ಸುರಕ್ಷತೆ ಮೊದಲಾದವುಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯವಾಗಿದೆ. ಅಲೆಮಾರಿ ಸಮುದಾಯದವರ ಪ್ರಗತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಚಿತ್ರನಟ ಚೇತನ್‌ ಅವರು ಹೇಳಿದ್ದಾರೆ.

ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಜಯಪುರ, ಬಾಗಲಕೋಟೆ ಸೇರಿದಂತೆ ಅನೇಕ ಭಾಗಗಳಲ್ಲಿ ಕೊರಚ, ಕೊರಮ, ಸೋಲಿಗ, ಶಿಳ್ಳೆಕ್ಯಾತರು, ಘಿಸಾಡಿ ಹೀಗೆ ಅನೇಕ ಅಲೆಮಾರಿ ಸಮುದಾಯದವರಿಗೆ ಸರ್ಕಾರದ ಅನೇಕ ಸೌಲಭ್ಯಗಳು ದೊರಕಿಲ್ಲ, ಅವರು ಇಂದಿಗೂ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರವು ಈ ಜನಾಂಗದ ರಕ್ಷಣೆ, ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾ​ಯಿ​ಸಿ​ದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಲೆಮಾರಿ ಸಮುದಾಯದವರ ಪ್ರಗತಿ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಇಂದಿಗೂ ಅವರು ಸೌಲಭ್ಯಗಳಿಂದ ವಂಚಿತವಾಗಿ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಅಲೆಮಾರಿ ಜನರಿಗೆ ಧ್ವನಿಯೂ ಇಲ್ಲದಂತಾಗಿದೆ. ಹೀಗಾಗಿ ಅವರ ಕುರಿತು ನಿಖರವಾದ ಅಂಕಿ-ಅಂಶಗಳ ಸಂಗ್ರಹಣೆಗೊಳ್ಳಬೇಕಿದೆ. ಅವರ ಜನಗಣತಿ ನಡೆಸುವುದು ಅತ್ಯಂತ ಸೂಕ್ತ ಎಂದರು.

ಅಲೆಮಾರಿ ಜನಾಂಗದ ಅನೇಕರಿಗೆ ಸೂರು ಸಹ ಇಲ್ಲ, ಬಟ್ಟೆಯ ಗುಡಿಸಲ್ಲಿ ವಾಸ ಮಾಡುವಂತಹ ಪರಿಸ್ಥಿತಿ ಇದೆ. ಹೀಗಾಗಿ ಮೊದಲು ಅವರಿಗೆ ಸೂರು, ಅವರ ಬದುಕಿಗೆ ಸುರಕ್ಷತೆ ಒದಗಿಸುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳ ಅಲೆಮಾರಿ, ಅರೆಅಲೆಮಾರಿ ಮುಂತಾದ ಸಮುದಾಯಗಳ ಪ್ರಗತಿಗಾಗಿಯೇ ಪ್ರತ್ಯೆಕ ಅಭಿವೃದ್ಧಿ ಆಯೋಗ ರಚನೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸುವೆ. ಅರೆಅಲೆಮಾರಿ, ಅಲೆಮಾರಿ ಮೊದಲಾದ ಸಮುದಾಯಗಳ ಪ್ರಗತಿಗಾಗಿ ಶೀಘ್ರದಲ್ಲಿಯೇ ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಚರ್ಚೆಸುತ್ತೇನೆ ಎಂದು ತಿಳಿಸಿದರು.

ಆದಿವಾಸಿಗಳು, ಅಲೆಮಾರಿಗಳು ಅವರದ್ದೇ ಒಂದು ಭವ್ಯ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಅವರ ಆಚಾರ-ವಿಚಾರ, ಆಹಾರ ಪದ್ಧತಿ, ಉಡುಗೆ-ತೊಡುಗೆ ಭಿನ್ನ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವ ಕಾರ್ಯವೂ ಆದ್ಯತೆ ಮೇರೆಗೆ ನಡೆಯಬೇಕಿದೆ ಎಂದರು.

ಪಠ್ಯದಿಂದ ಟಿಪ್ಪು ಹೆಸರು ತೆಗೆಯಲು ವಿರೋಧ

ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿ ರಣರಂಗದಲ್ಲಿಯೇ ಪ್ರಾಣ ಬಿಟ್ಟವೀರಯೋಧ. ದಲಿತರ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸಿದ ಮಹಾನ್‌ ರಾಜ, ಅವರ ಇತಿಹಾಸವನ್ನು ಪಠ್ಯದಿಂದ ತೆಗೆದು ಹಾಕಿರುವುದು ಸರಿಯಲ್ಲ ಎಂದಿದ್ದಾರೆ.

ವಿಜಯಪುರ ಜಗದ್ಗುರು ಇಬ್ರಾಹಿಂ ಆದಿಲ್‌ಷಾಹಿ ಸಂಗೀತದ ಮೂಲಕ ಭಾವೈಕ್ಯತೆ ಬೆಸೆದ ಮಹಾನ್‌ ರಾಜ. ಆದರೆ ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ. ಹೀಗಾಗಿ ಇಬ್ರಾಹಿಂ ಆದಿಲ್‌ಷಾಹಿ ಅವರ ಚಿಂತನೆಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯಬೇಕು. ಈ ಬಗ್ಗೆ ಪ್ರಚಾರ ಮಾಡುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
 

Follow Us:
Download App:
  • android
  • ios