ಪಟ್ಟಣದಲ್ಲಿನ ಬಿಜೆಪಿ ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌ ನಿವಾಸಕ್ಕೆ ಚಿತ್ರನಟ ಅಭಿಷೇಕ್‌ ಅಂಬರೀಶ್‌ ಭೇಟಿ ನೀಡಿದ್ದರು.

 ಪಿರಿಯಾಪಟ್ಟಣ : ಪಟ್ಟಣದಲ್ಲಿನ ಬಿಜೆಪಿ ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌ ನಿವಾಸಕ್ಕೆ ಚಿತ್ರನಟ ಅಭಿಷೇಕ್‌ ಅಂಬರೀಶ್‌ ಭೇಟಿ ನೀಡಿದ್ದರು.

ನಟ ಅಭಿಷೇಕ್‌ ಅಂಬರೀಶ್‌ ಅವರು ಮಾತನಾಡಿ, ನಮ್ಮ ತಂದೆ ಅಂಬರೀಶ್‌ ಅವರಿಗೆ ವಿಜಯಶಂಕರ್‌ ಅವರು ಆತ್ಮೀಯ ಸ್ನೇಹಿತರಾಗಿದ್ದರು, ಖಾಸಗಿ ಕಾರ್ಯಕ್ರಮ ನಿಮಿತ್ತ ಪಿರಿಯಾಪಟ್ಟಣಕ್ಕೆ ಆಗಮಿಸಿದ್ದು, ವಿಜಯ…ಶಂಕರ್‌ ಅವರನ್ನು ಮಾತನಾಡಿಸಿ ಆಶೀರ್ವಾದ ಪಡೆಯಲು ಅವರ ನಿವಾಸಕ್ಕೆ ಆಗಮಿಸಿದ್ದೇನೆ ಎಂದು ತಿಳಿಸಿ ರಾಜಕೀಯ ವಿಚಾರ ಪ್ರಸ್ತಾಪಿಸಲು ನಿರಾಕರಿಸಿದರು.

ಮಾಜಿ ಸಂಸದ ಸಿ.ಎಚ್‌. ವಿಜಯ…ಶಂಕರ್‌ ಮಾತನಾಡಿ, ಚಿತ್ರರಂಗವಲ್ಲದೆ ರಾಜಕೀಯದಲ್ಲಿ ಹೆಸರು ಮಾಡಿದ್ದ ದಿವಂಗತ ಅಂಬರೀಶ್‌ ಅವರು ನನಗೆ ಆತ್ಮೀಯರಾಗಿದ್ದರು, ಅದೇ ಬಾಂಧವ್ಯದಲ್ಲಿ ಅವರ ಮಗ ಚಿತ್ರನಟ ಅಭಿಷೇಕ್‌ ಅವರು ನಮ್ಮ ಮನೆಗೆ ಭೇಟಿ ನೀಡಿದ್ದು, ಬಹಳ ಸಂತೋಷವಾಯಿತು. ಅವರ ತಾಯಿ ಸಂಸದೆ ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭಿಷೇಕ್‌ ಅಂಬರೀಶ್‌ ನನ್ನ ಪರ ತಾಲೂಕಿನಲ್ಲಿ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ. ರಾಜೇಗೌಡ, ಮಾಜಿ ಅಧ್ಯಕ್ಷ ಪಿ.ಜೆ. ರವಿ, ಪ್ರಧಾನ ಕಾರ್ಯದರ್ಶಿ ಚಂದ್ರು, ಒಪಿಸಿ ಜಿಲ್ಲಾ ಉಪಾಧ್ಯಕ್ಷ ಲೋಕಪಾಲಯ್ಯ, ತಾಲೂಕು ಅಧ್ಯಕ್ಷ ಪ್ರಸನ್ನ, ಪುರಸಭಾ ಸದಸ್ಯೆ ನಳಿನಿ, ನಗರ ಘಟಕ ಅಧ್ಯಕ್ಷ ರವಿ, ಮುಖಂಡರಾದ ವಕೀಲ ಕೃಷ್ಣಪ್ರಸಾದ್‌, ನೇಮಿಚಂದ್‌ ಜೈನ್‌, ಶಶಿ, ಭಾನು, ಚಂದ್ರನ್‌, ಕೃಷ್ಣ ಇದ್ದರು.

ಅವಿವಾ ಬಗ್ಗೆ ಅಭಿ ಮಾತು

ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಅಭಿಷೇಕ್ ಅಂಬರೀಶ್ ಲವ್- ಫ್ರೆಂಡ್‌ಶಿಪ್‌-ಮದುವೆ ಆಂಡ್ ಫ್ಯಾಮಿಲಿ ಬಗ್ಗೆ ಹಂಚಿಕೊಂಡಿದ್ದಾರೆ.

'ನನ್ನ ಎಂಗೇಜ್‌ಮೆಂಟ್‌ನ ಬ್ರೇಕಿಂಗ್ ನ್ಯೂಸ್ ನಾನು ಮಾಡಿಲ್ಲ ಅದೇ ಲೀಕ್ ಅಗಿ ಹೋಯ್ತು. ಪ್ರೈವೇಟ್ ಆಗಿ ಮಾಡಿಕೊಳ್ಳಬೇಕು ಅನ್ನೋ ಆಸೆ ತುಂಬಾ ಇತ್ತು. ನನ್ನ ಜೀವನದಲ್ಲಿ ಎಲ್ಲಾ ಪಬ್ಲಿಕ್ ಆಗಿದೆ ಬೆಳಗ್ಗಿನಿಂದ ರಾತ್ರಿವರೆಗೂ ಪಬ್ಲಿಕ್....ಚಿಕ್ಕ ವಯಸ್ಸಿನಿಂದ ಎಲ್ಲಾ ಪಬ್ಲಿಕ್‌ ಚಡ್ಡಿ ಹಾಕೊಂಡು ಬಂದ್ರೂ ಪಬ್ಲಿಕ್‌....ಏನೂ ಪ್ರೈವೇಟ್‌ ಆಗಿಲ್ಲ ನನ್ನ ಜೀವನದಲ್ಲಿ. ಸಾರ್ವಜನಿಕ ಜೀವನ ಹೀಗೆ ಬೇಕು ಎಂದು ನಾನು ಕೇಳಿಕೊಂಡು ಬಂದಿಲ್ಲ ಹುಟ್ಟಿದಾಗಿನಿಂದ ಅದಾಗದೇ ಬಂದಿರುವುದು' ಎಂದು ಕನ್ನಡ ಖಾಸಗಿ ಸಂದರ್ಶನದಲ್ಲಿ ಅಭಿ ಮಾತನಾಡಿದ್ದಾರೆ.

ಲವ್ ಹೇಗಾಯ್ತು? 

'ಲವ್ ಹೇಗೆ ಆಯ್ತು ಅನ್ನೊದು ಹೇಳಲು ಆಗಲ್ಲ...ಜೀವನದಲ್ಲಿ ಎಲ್ಲವೂ ಬೇಕು ಎಲ್ಲನೂ ಆಗಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಬ್ಯುಸಿಯಾಗಿರುತ್ತಾರೆ ಎಲ್ಲರಿಗೂ ಲವ್ ಆಗಿರುತ್ತದೆ...ಎಲ್ಲದಕ್ಕೂ ಟೈಂ ಬರುತ್ತೆ ಆಗ ಅದಾಗಿ ಅದೇ ಆಗುತ್ತೆ. ಸೆಲೆಬ್ರಿಟಿ ಮಗ ಅಂತ ನಾನು ಮನೆಯಲ್ಲಿ ಕೂರುವುದಕ್ಕೆ ಆಗಲ್ಲ ಎಲ್ಲಾ ಕಡೆ ಓಡಾಡುತ್ತಿರುವೆ. ತುಂಬಾ ಜನರು ಇರುವ ಜಾಗದಲ್ಲಿ ನಾನು ಓಡಾಡಿರುವೆ...ವಿವಿ ಪುರಂ ಫುಡ್‌ ಸ್ಟ್ರೀಟ್‌, ಚಿಕ್ಕಪೇಟೆ, ಯುಬಿ ಸಿಟಿ ಮತ್ತು ಲ್ಯಾವೆಲ್‌ ರಸ್ತೆ..ಎಲ್ಲಾ ಕಡೆ ಭಯವಿಲ್ಲದೆ ನೆಮ್ಮದಿಯಾಗಿ ಓಡಾಡುವ ವ್ಯಕ್ತಿ ನಾನು. 

ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಅಂಬರೀಶ್ ರೊಮ್ಯಾಂಟಿಕ್ ಫೋಟೋ ವೈರಲ್

ಅವಿವಾ ರಿಯಾಕ್ಷನ್?

ನಿಶ್ಚಿತಾರ್ಥ ಆದ ಮೇಲೆ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದಾಗಿರುವ ಕಾರಣ ಅವಿವಾಗೆ ಯಾವ ನಿರೀಕ್ಷೆನೂ ಇಲ್ಲ ಎನ್ನುತ್ತಾರೆ ಅಭಿ. 'ನಮ್ಮನ್ನು ಪ್ರೀತಿಸುವವರು ಯಾವತ್ತಿದ್ದರೂ ನಾವು ಮಾಡಿರುವುದನ್ನು ಪ್ರೀತಿಸುತ್ತಾರೆ.ಹೀಗಾಗಿ ಅವಿವಾ ಯಾವುದಕ್ಕೂ ರಿಯಾಕ್ಷನ್ ಕೊಡುವುದಿಲ್ಲ.ಖಡಕ್ ವಿಮರ್ಶೆ ನನ್ನ ತಾಯಿ ಕೊಡಬಹುದು ಬೇರೆ ಅವರು ಏನೂ ಹೇಳುವುದಿಲ್ಲ. ಅವಿವಾ ನನಗೆ ತುಂಬಾ ಸಪೋರ್ಟ್‌ ಮಾಡುತ್ತಾಳೆ ಮಾಡಿದ ಎಲ್ಲಾ ಕೆಲಸಗಳನ್ನು ಖುಷಿ ಖುಷಿಯಾಗಿ ನೋಡುತ್ತಾಳೆ. ನನ್ನ ಸ್ನೇಹಿತರು ಎಲ್ಲಾ ಒಳ್ಳೆಯದನ್ನು ಹೇಳುವುದು ಆದರೆ ಮಾಡಿರುವುದನ್ನೆಲ್ಲಾ ಕಳಪೆ ಎಂದು ಹೇಳುವವರೂ ಇದ್ದಾರೆ ಅವರನ್ನು ತುಂಬಾ ಹತ್ತಿರ ಇಟ್ಟುಕೊಂಡಿರುವೆ. ಎಷ್ಟೇ ಸರಿ ಮಾಡಿದ್ದರೂ ತಪ್ಪು ಕಂಡು ಹಿಡಿಯುವವರು ಇದ್ದಾರೆ ಅಂದ್ರೆ ಅಂತವರು ನನಗೆ ಬೇಕು ಅವರನ್ನು ನಾನು ಎದುರಿಸಿದರೆ ನೆಗೆಟಿವ್ ಟ್ರೋಲ್ ಮಾಡುವವರ ಬಗ್ಗೆ ಏನೂ ಅನಿಸುವುದಿಲ್ಲ' ಎಂದು ಅಭಿ ಹೇಳಿದ್ದಾರೆ.