ಯುವತಿಗೆ ಆ್ಯಸಿಡ್ ಹಾಕಿ ಆಕೆಯ ಜೀವನದ ಜೊತೆ ಆಟವಾಡಿದ್ದ ಆಸಿಡ್ ನಾಗನಿಗೆ ವಿಧಿಯೇ ಶಿಕ್ಷೆಯನ್ನೇ ನೀಡಿದೆ. 

ವರದಿ: ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ನ.06): ಯುವತಿಗೆ ಆ್ಯಸಿಡ್ ಹಾಕಿ ಆಕೆಯ ಜೀವನದ ಜೊತೆ ಆಟವಾಡಿದ್ದ ನಾಗೇಶ @ ಆ್ಯಸಿಡ್ ನಾಗನಿಗೆ ವಿಧಿಯೇ ಶಿಕ್ಷೆಯನ್ನೇ ನೀಡಿದೆ. ಹೌದು, ಆಸಿಡ್ ನಾಗನ ಕಾಲಿನಲ್ಲಿ ಗ್ಯಾಂಗ್ರಿನ್ ಶುರುವಾಗಿದ್ದು ನಡೆಯಲು, ಎದ್ದೇಳಲು ಆಗದೇ ಇರುವ ಸ್ಥಿತಿ ಎದುರಾಗಿದೆ.

ಈಗಾಗಲೇ ಪ್ರಕರಣದಲ್ಲಿ ಅರೆಸ್ಟ್ ಆಗಿ ನಾಗ ಜೈಲು ಪಾಲಾಗಿ ಶಿಕ್ಷೆ ಅನುಭವಿಸುತ್ತಿದ್ದಾನೆ. ನಾಗನಿಗೆ ಕಳೆದ ಆರು ತಿಂಗಳಿಂದ ಬಲಗಾಲಿನಲ್ಲಿ ಗಾಯದ ಸಮಸ್ಯೆ ಎದುರಾಗಿದ್ದು ಗ್ಯಾಂಗ್ರಿನ್ ಗುಣ ಲಕ್ಷಣಗಳು ಕಂಡುಬಂದಿದೆ. ಆರೋಪಿ ನಾಗೇಶ್ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂದು ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಆರೋಪಿ ಪತ್ತೆ ವೇಳೆ ಪೊಲೀಸರು ಕಾಲಿಗೆ ಗುಂಡು ಹಾಕಿಸಿದ್ದರು. ಆದ್ರೆ ಈಗ ಆರೋಪಿ ನಾಗೇಶ್ ಗುಂಡೇಟು ತಗುಲಿದ್ದ ಸ್ಥಳದಲ್ಲಿ ರಾಡ್ ಹಾಕಿ ಬ್ಯಾಂಡೇಜ್ ಹಾಕಿದ್ರೂ ನೋವು ಹೆಚ್ಚಾಗಿದೆ. 

ಆಸಿಡ್ ದಾಳಿ ಪ್ರಕರಣ: ಎಸ್ಕೇಪ್ ಆಗ ಹೊರಟ ಆರೋಪಿ ನಾಗೇಶ್ ಕಾಲಿಗೆ ಗುಂಡೇಟು!

ಚಿಕಿತ್ಸೆ ಕೊಡಿಸುತ್ತಿದ್ದರೂ ಕಾಲಿನ ಗಾಯದ ತೀವ್ರತೆ ಕಡಿಮೆಯಾಗಿಲ್ಲ. ನಡೆದಾಡಲು ಆಗದೆ ವಿಕ್ಟೋರಿಯಾ ಆಸ್ಪತ್ರೆಗೆ ಜೈಲಿನ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಜೈಲಧಿಕಾರಿಗಳು ಕೋರ್ಟ್‌ಗೆ ಮಾಹಿತಿಯನ್ನು ನೀಡಿದ್ದು ಅಪರಾಧಿ ಯಾರೇ ಆದರೂ ಅವರಿಗೆ ಸೂಕ್ತ ಚಿಕಿತ್ಸೆ ಪಡೆಯುವ ಹಕ್ಕಿದೆ. ಹೀಗಾಗಿ ಆತನಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನವನ್ನು ನೀಡಿದೆ. 

ಘಟನೆ ಹಿನ್ನೆಲೆ: 

ಇದೇ ವರ್ಷ ಏಪ್ರಿಲ್ 28ರಂದು ಹೆಗ್ಗನಹಳ್ಳಿಯ ಮುತ್ತೂಟ್​ ಫೈನಾನ್ಸ್​ ಕಚೇರಿ ಬಳಿ ಯುವತಿ ಮೇಲೆ ಆ್ಯಸಿಡ್ ಹಾಕಿ ನಾಗೇಶ್ ಪರಾರಿಯಾಗಿದ್ದ. ತಮಿಳುನಾಡಿನ ಆಶ್ರಮವೊಂದರಲ್ಲಿ ಸನ್ಯಾಸಿ ವೇಶ ಧರಿಸಿ ಓಡಾಡ್ಕೊಂಡಿದ್ದ. ಬಳಿಕ ಬೆಂಗಳೂರು ಪೊಲೀಸರು ತಮಿಳುನಾಡಿನ ಆಶ್ರಮದಲ್ಲಿ ಬಂಧಿಸಿ ಕರೆತಂದಿದ್ದರು.