ಉತ್ತರ ಕನ್ನಡ: ಚುರುಕುಗೊಂಡ ಕೃಷಿ ಚಟುವಟಿಕೆ, ಬೀಜ, ರಸಗೊಬ್ಬರ ವಿತರಣೆಗೆ ಕೃಷಿ ಇಲಾಖೆ ತಯಾರಿ

ಮಳೆಗಾಲ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಕೃಷಿ ಇಲಾಖೆಯಿಂದ ಮಾಸಾಂತ್ಯದೊಳಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತಯಾರಿ ನಡೆದಿದೆ.

Accelerated agricultural activities in the district uttara kannada rav

ಕಾರವಾರ (ಮೇ.21) ಮಳೆಗಾಲ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಕೃಷಿ ಇಲಾಖೆಯಿಂದ ಮಾಸಾಂತ್ಯದೊಳಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತಯಾರಿ ನಡೆದಿದೆ.

ಉತ್ತರ ಕನ್ನಡ(Uttara kannada) ಕರಾವಳಿ, ಮಲೆನಾಡು ತಾಲೂಕುಗಳನ್ನು ಹೊಂದಿದ್ದು, ಕರಾವಳಿ ಭಾಗದಲ್ಲಿ ಜೂನ್‌ ಆರಂಭದಿಂದಲೇ ಬಿತ್ತನೆ ಪ್ರಾರಂಭಿಸಲಾಗುತ್ತದೆ. ಮಲೆನಾಡಿನ ತಾಲೂಕುಗಳಲ್ಲಿ ಸ್ವಲ್ಪ ವಿಳಂಬವಾಗಲಿದ್ದು, ಜೂನ್‌ ತಿಂಗಳ ಅಂತ್ಯದಲ್ಲಿ ಬಿತ್ತನೆ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ. ಹೀಗಾಗಿ ಕೃಷಿಕರೊಂದಿಗೆ ಕೃಷಿ ಇಲಾಖೆ ಕೂಡಾ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಹಾವೇರಿ: ಈ ಬಾರಿ ಬಿತ್ತನೆ ಬೀಜ, ಗೊಬ್ಬರಕ್ಕಿಲ್ಲ ಸಮಸ್ಯೆ

ಬೇಡಿಕೆ, ದಾಸ್ತಾನು:

ಜಿಲ್ಲೆಯಲ್ಲಿ ಒಟ್ಟು 9669 ಕ್ವಿಂಟಾಲ್‌ ಬತ್ತ ಬೇಡಿಕೆಯಿದ್ದು, 4860 ಕ್ವಿಂಟಾಲ್‌ ದಾಸ್ತಾನು ಇದೆ. ಮೆಕ್ಕೆಜೋಳ 1788 ಕ್ವಿಂಟಾಲ್‌ ಬೇಡಿಕೆಯಿದ್ದು, 610 ಕ್ವಿಂಟಾಲ್‌ ದಾಸ್ತಾನು ಇದೆ.

ಕುಮಟಾ ತಾಲೂಕಿನಲ್ಲಿ 1096 ಕ್ವಿಂಟಾಲ್‌ ಬೇಡಿಕೆಯಿದ್ದು, 650 (ಕ್ವಿ) ದಾಸ್ತಾನು, ಹೊನ್ನಾವರದಲ್ಲಿ 828 (ಕ್ವಿ) ಬೇಡಿಕೆಯಿದ್ದು, 520(ಕ್ವಿ) ದಾಸ್ತಾನು, ಭಟ್ಕಳದಲ್ಲಿ 855 (ಕ್ವಿ) ಬೇಡಿಕೆಯಿದ್ದು, 710(ಕ್ವಿ) ದಾಸ್ತಾನು, ಶಿರಸಿಯಲ್ಲಿ 1054 (ಕ್ವಿ) ಬೇಡಿಕೆಯಿದ್ದು, 400(ಕ್ವಿ) ದಾಸ್ತಾನು, ಸಿದ್ದಾಪುರ ತಾಲೂಕಿನಲ್ಲಿ 622 ಕ್ವಿಂಟಾಲ್‌ ಬೇಡಿಕೆಯಿದ್ದು, 150 ಕ್ವಿಂಟಾಲ್‌ ದಾಸ್ತಾನು ಇದೆ.

ಮುಂಡಗೋಡಿನಲ್ಲಿ 1720 ಕ್ವಿಂಟಾಲ್‌ ಬೇಡಿಕೆಯಿದ್ದು, 680(ಕ್ವಿ) ದಾಸ್ತಾನು, ಅಂಕೋಲಾದಲ್ಲಿ 840 (ಕ್ವಿ) ಬೇಡಿಕೆಯಿದ್ದು, 520 ದಾಸ್ತಾನು, ಕಾರವಾರದಲ್ಲಿ 420(ಕ್ವಿ) ಬೇಡಿಕೆಯಿದ್ದು, 150(ಕ್ವಿ) ದಾಸ್ತಾನು, ಹಳಿಯಾಳದಲ್ಲಿ 457(ಕ್ವಿ) ಬೇಡಿಕೆಯಿದ್ದು, 220(ಕ್ವಿ) ದಾಸ್ತಾನು, ಯಲ್ಲಾಪುರದಲ್ಲಿ 415(ಕ್ವಿ) ಬೇಡಿಕೆಯಿದ್ದು, 210 (ಕ್ವಿ) ದಾಸ್ತಾನು, ಜೊಯಿಡಾ ತಾಲೂಕಿನಲ್ಲಿ 1350 ಕ್ವಿಂಟಾಲ್‌ ಬೇಡಿಕೆಯಿದ್ದು, 650 ಕ್ವಿಂಟಾಲ್‌ ದಾಸ್ತಾನು ಇದೆ.

ಮೆಕ್ಕೆಜೋಳ ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ, ಮುಂಡಗೋಡ, ಹಳಿಯಾಳ ತಾಲೂಕಿನಲ್ಲಿ ಮಾತ್ರ ಬಿತ್ತನೆ ಮಾಡಲಾಗುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆ ಇಲ್ಲ. ಶಿರಸಿ ತಾಲೂಕಿನಲ್ಲಿ 20 ಕ್ವಿಂಟಾಲ್‌ ಬೇಡಿಕೆಯಿದ್ದು, 10 ಕ್ವಿಂಟಾಲ್‌ ದಾಸ್ತಾನು ಇದೆ. ಮುಂಡಗೋಡದಲ್ಲಿ 685 (ಕ್ವಿ) ಬೇಡಿಕೆಯಿದ್ದು, 150 (ಕ್ವಿ) ದಾಸ್ತಾನು, ಹಳಿಯಾಳದಲ್ಲಿ 1080(ಕ್ವಿ) ಬೇಡಿಕೆಯಿದ್ದು, 450 (ಕ್ವಿ) ದಾಸ್ತಾನು ಇದೆ. ಈ ತಾಲೂಕಿನಲ್ಲೇ ಅತ್ಯಂತ ಹೆಚ್ಚು ಬೇಡಿಕೆ ಮೆಕ್ಕೆಜೋಳಕ್ಕಿದೆ.

ಜಯಾ, ಎಂಟಿವಿ-1001, ಅಭಿಲಾಷ, ಬಿಪಿಟಿ-5204, ಇಂಟಾನ್‌, ಆರ್‌ಎನ್‌ಆರ್‌-150 ಜೆಜೆಎಲ್‌-1798, ಎಂಜೆ-4 ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬತ್ತದ ತಳಿಗಳಾಗಿದ್ದರೆ, ಡಿಕೆಸಿ-9126, ಸಿಪಿ-818, ಸಿಪಿ-201, ಜೆಕೆ-6240, ದ್ರೋಣ್‌, ಎನ್‌ಕೆ-6240, ಬಯೋ-716, ಬಯೋ-151 ಮೆಕ್ಕೆಜೋಳದ ಪ್ರಮುಖ ತಳಿಗಳಾಗಿದೆ.

ಕೃಷಿ ತಜ್ಞರಿಗೇ ಸವಾಲೊಡ್ಡಿದ ಅಪರೂಪದ ಮಾವಿನ ಹಣ್ಣು: ತೋಟದ ಎಲ್ಲ ಮಾವು ಹೀಗಿದೆಯಂತೆ!

ಜಿಲ್ಲೆಯಲ್ಲಿ ಒಟ್ಟು 9669 ಕ್ವಿಂಟಾಲ್‌ ಬತ್ತ ಬೇಡಿಕೆಯಿದ್ದು, 4860 ಕ್ವಿಂಟಾಲ್‌ ದಾಸ್ತಾನು ಇದೆ. ಮೆಕ್ಕೆಜೋಳ 1788 ಕ್ವಿಂಟಾಲ್‌ ಬೇಡಿಕೆಯಿದ್ದು, 610 ಕ್ವಿಂಟಾಲ್‌ ದಾಸ್ತಾನು ಇದೆ. ಉಳಿದಷ್ಟುಈ ತಿಂಗಳ ಅಂತ್ಯದೊಳಗೆ ದಾಸ್ತಾನು ಮಾಡಿಕೊಳ್ಳಲಾಗುತ್ತದೆ. ಕೃಷಿಕರಿಗೆ ಬಿತ್ತನೆಗೆ ತೊಂದರೆ ಆಗುವುದಿಲ್ಲ.

ನಟರಾಜ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ(ಪ್ರಭಾರ)

Latest Videos
Follow Us:
Download App:
  • android
  • ios