ಎಸಿಬಿ ಬಲೆಗೆ ಗೃಹ ರಕ್ಷಕ ದಳದ ಕಮಾಂಡರ್, ತೋಟಗಾರಿಕೆ ಡಿಡಿ
ಎಸಿಬಿ ಅಧಿಕಾರಿಗಳು ಇಬ್ಬರು ಭ್ರಷ್ಟರ ಮೇಲೆ ದಾಳಿ ಮಾಡಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ
ಚಿಕ್ಕಬಳ್ಳಾಪುರ/ಯಾದಗಿರಿ (ಅ.01): ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿಕ್ಕಬಳ್ಳಾಪುರದಲ್ಲಿ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಹಾಗೂ ಯಾದಗಿರಿಯ ತೋಟಗಾರಿಕೆ ಉಪನಿರ್ದೇಶಕ ಭ್ರಷ್ಟ್ರಚಾರ ನಿಗ್ರಹ ದಳದ(ಎಸಿಬಿ) ಬಲೆಗೆ ಬಿದಿದ್ದಾರೆ.
ಚಿಕ್ಕಬಳ್ಳಾಪುರದ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡರ್ ಆಂಜಿನಪ್ಪ ಕರ್ತವ್ಯಕ್ಕೆ ರಜೆ ಹಾಕಿ ಹೋಗಿದ್ದ ಗೌರಿಬಿದನೂರಿನ ಮಂಚೇನಹಳ್ಳಿಯ ಚೇತನ್ ಕುಮಾರ್ ಎಂಬಾತನ ಬಳಿ ಕರ್ತವ್ಯಕ್ಕೆ ಮರು ನೇಮಕ ಮಾಡಲು 35 ಸಾವಿರ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಲೆಗೆ ಬೀಳಿಸಿದ್ದಾರೆ.
ಯಾದಗಿರಿ: ಲಂಚ ಸಮೇತ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ ...
ಇನ್ನು ಯಾದಗಿರಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಕೌಳೂರು ಗ್ರಾಮದ ಶಿವಾರೆಡ್ಡಿ ಎಂಬುವರಿಗೆ ಹನಿ ನೀರಾವರಿ ಯೋಜನೆಗೆ 1 ಲಕ್ಷ ಸಬ್ಸಿಡಿಗೆ 5 ಸಾವಿರ ಹಣ ಪಡೆಯುತ್ತಿರುವಾಗ ಅಧಿಕಾರಿಗಳು ಸಾಕ್ಷಿ ಸಮೇತ ಹಿಡಿದಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದ್ದು ಕೋಟಿ ಕೋಟಿ ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ.