ಬೆಳಗಾವಿ(ಜೂ.17): ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಬೆಳ್ಳಂಬೆಳಗ್ಗೆ ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆ ಅಧಿಕಾರಿ ಸುಭಾಷ ಉಪ್ಪಾರ ಅವರ ಮನೆ, ಕಚೇರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಿ, ಭ್ರಷ್ಟ ಅಧಿಕಾರಿಗೆ ಶಾಕ್‌ ನೀಡಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆ ಅಧಿಕಾರಿ ಸುಭಾಷ ಉಪ್ಪಾರ ಅವರ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಎಸಿಬಿ ಎಸ್ಪಿ ಬಿ.ಎಸ್‌.ನೇಮಗೌಡರ ನೇತೃತ್ವದಲ್ಲಿ 30ಕ್ಕೂ ಅಧಿಕ ಸಿಬ್ಬಂದಿ ಏಕಕಾಲದಲ್ಲಿ ನಾಲ್ಕು ಕಡೆಗಳಲ್ಲಿ ದಾಳಿ ಮಾಡಿ, ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. 

ಬೆಳಗಾವಿ ಪೊಲೀಸ್ ಆಯುಕ್ತರ ಕಛೇರಿ ಎದುರು ಗ್ಯಾಸ್‌ ಲೀಕ್‌; ವಾಹನ ಸವಾರರಲ್ಲಿ ಆತಂಕ

ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆಯ ಇನ್ವೆಸ್ಟಿಗೇಷನ್‌ ಯೂನಿಟ್‌ 3ರ ಅಸಿಸ್ಟಂಟ್‌ ಕಂಟ್ರೋಲರ್‌ ಆಗಿ ಸೇವೆ ಸಲ್ಲಿಸುತ್ತಿರುವ ಸುಭಾಷ ಉಪ್ಪಾರ ಅವರ ರುಕ್ಮಿಣಿ ನಗರದ ಮನೆ, ಕಚೇರಿ, ಬಾಡಿಗೆ ಮನೆ ಹಾಗೂ ಬಸವನಕುಡಚಿಯಲ್ಲಿರುವ ಅವರ ಅಳಿಯ ಸದಾನಂದ ಎಂಬುವರ ಮನೆ ಮೇಲೆ ದಾಳಿ ಮಾಡಿದರು. ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ನಾಲ್ಕು ಕಡೆ ದಾಳಿ ಮಾಡಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ದಾಳಿ ವೇಳೆ ಚಿನ್ನಾಭರಣ, ನಗದು ಸೇರಿ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.