ಫೇಸ್ಬುಕ್‌ ಖಾತೆಯಲ್ಲಿ ಸರ್ಕಾರಗಳ ಬಗ್ಗೆ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಕಾನುಬೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಾಂತಮೂರ್ತಿ ಅವರನ್ನು ಬಿಇಓ ಎಲ್‌.ಜಯಪ್ಪ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಹೊಸದುರ್ಗ (ಮೇ.21) : ಫೇಸ್ಬುಕ್‌ ಖಾತೆಯಲ್ಲಿ ಸರ್ಕಾರಗಳ ಬಗ್ಗೆ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಕಾನುಬೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಾಂತಮೂರ್ತಿ ಅವರನ್ನು ಬಿಇಓ ಎಲ್‌.ಜಯಪ್ಪ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಿದ್ದರಾಮಯ್ಯ(Siddaramaiah) ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸರ್ಕಾರಗಳ ಕುರಿತಂತೆ ಈ ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಅಂದರೆ ಎಸ್‌.ಎಂ ಕೃಷ್ಣ ಅವರ ಅವಧಿಯಲ್ಲಿ 3590 ಕೋಟಿ ರು, ಧರ್ಮಸಿಂಗ್‌ 15,635 ಕೋಟಿ ರು, ಎಚ್‌.ಡಿ ಕುಮಾರಸ್ವಾಮಿ 3,545 ಕೋಟಿ ರು, ಬಿಎಸ್‌ವೈ 25,653ಕೋಟಿ ರು, ಸದಾನಂದ ಗೌಡ 9,464 ಕೋಟಿ ರು, ಜಗದೀಶ್‌ ಶೆಟ್ಟರ್‌ 13,464 ಕೋಟಿ ರು, ಸಿದ್ದರಾಮಯ್ಯ 2,42,000 ಕೋಟಿ ರು. ಎಸ್‌.ಎಂ ಕೃಷ್ಣ ಅವರಿಂದ ಜಗದೀಶ್‌ ಶೆಟ್ಟರ್‌ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ರು. ಹಾಗೂ ಸಿದ್ದು ಮಾಡಿದ ಸಾಲ 2,42,000 ಕೋಟಿ ರು. ಇದ್ದು, ಬಿಟ್ಟಿಭಾಗ್ಯ ಕೊಡದೆ ಇನ್ನೇನು ಎಂದು ಮುಖ್ಯಮಂತ್ರಿಗಳು ರಾಜ್ಯಕ್ಕಾಗಿ ಮಾಡಿದ ಸಾಲಗಳನ್ನು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಸಂದೇಶವನ್ನು ಪ್ರಕಟಿಸಿದ್ದು,

ಈ ರೀತಿಯಾಗಿ ಸರ್ಕಾರದ ಮುಖ್ಯಮಂತ್ರಿಗಳ ವಿರುದ್ಧ ಅವಹೇಳನ ಮಾಡಿರುವ ವಿಷಯಕ್ಕೆ ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ.ಈ ಹಿನ್ನೆಲೆಯಲ್ಲಿ ಸದರಿ ಶಿಕ್ಷಕನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಾಶಿಇ ಉಪನಿರ್ದೇಶಕರು ನೀಡಿದ ನಿರ್ದೇಶನದ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಜಯಪ್ಪ ಸದರಿ ಶಿಕ್ಷಕರನ್ನು ಆಮಾನತ್ತುಗೊಳಿಸಿ ಅದೇಶಿಸಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿಗೆ ಚಿತ್ರದುರ್ಗ ಜನತೆ ಟಕ್ಕರ್‌ : ವಿದ್ಯುತ್‌ ಬಿಲ್‌ ಕಟ್ಟಲ್ಲ ಎಂದು ಪಟ್ಟು- ವಿಡಿಯೋ ವೈರಲ್‌