Asianet Suvarna News Asianet Suvarna News

Kodagu: ಗಡಿಪಾರು ಪ್ರಕರಣದಲ್ಲಿ ಕೋರ್ಟಿಗೆ ಗೈರಾದ ಇಬ್ಬರ ಪರ ವಕೀಲರಿಂದ ವಕಾಲತ್ತು, ಪ್ರತಿಭಟನೆ

ಕಮ್ಯುನಲ್ ಗೂಂಡಾಗಳೆಂದು ಪ್ರಕರಣ ದಾಖಲಿಸಿ ಎಸಿ ಕೋರ್ಟ್ ಮೂಲಕ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಹಿಂದೂ ಯುವವಾಣಿ ಜಿಲ್ಲಾ ಸಂಚಾಲಕ ವಿನಯ್ ಮತ್ತು ಮಡಿಕೇರಿ ನಗರಸಭೆ ಬಿಜೆಪಿ ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಇಬ್ಬರ ಪರವಾಗಿ ವಕೀಲ ಮೋಹನ್ ಕುಮಾರ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ವಕಾಲತ್ತು ನಡೆಸಿದರು.

Absence from court in deportation case Advocacy by lawyers in Kodagu gow
Author
First Published Feb 2, 2023, 6:06 PM IST

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಫೆ.2): ಕಮ್ಯುನಲ್ ಗೂಂಡಾಗಳೆಂದು ಪ್ರಕರಣ ದಾಖಲಿಸಿ ಎಸಿ ಕೋರ್ಟ್ ಮೂಲಕ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಹಿಂದೂ ಯುವವಾಣಿ ಜಿಲ್ಲಾ ಸಂಚಾಲಕ ವಿನಯ್ ಮತ್ತು ಮಡಿಕೇರಿ ನಗರಸಭೆ ಬಿಜೆಪಿ ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಇಬ್ಬರ ಪರವಾಗಿ ವಕೀಲ ಮೋಹನ್ ಕುಮಾರ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ವಕಾಲತ್ತು ವಹಿಸಿದ್ದರು. ನ್ಯಾಯಾಧೀಶ ಯತೀಶ್ ಉಳ್ಳಾಲ್ ಅವರು ಪ್ರಕರಣದ ವಿಚಾರಣೆ ನಡೆಸಿದರು. ಈ ವೇಳೆ ಯಾವುದೇ ಸರಿಯಾದ ಸಾಕ್ಷ್ಯಗಳನ್ನು ಒದಗಿಸದ ಕಾರಣ ಮುಂದಿನ ವಿಚಾರಣೆಯನ್ನು ಇದೇ ಫೆಬ್ರವರಿ 7 ಕ್ಕೆ ಮುಂದೂಡಿತು. ಈ ಸಂದರ್ಭ ಮಾತನಾಡಿದ ವಕೀಲ ಮೋಹನ್ ಕುಮಾರ್ ಅವರು ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿಗಳಾಗಿದ್ದು, ಅವುಗಳು ಖುಲಾಸೆಗೊಂಡರೂ ಪೊಲೀಸರು ಇಬ್ಬರ ಮೇಲೆ ಕಮ್ಯುನಲ್ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಉಪ ವಿಭಾಗಧಿಕಾರಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಹೀಗಾಗಿ ಬುಧವಾರ ಇಬ್ಬರಿಗೆ ನೋಟಿಸ್ ನೀಡಿ ಇಂದು ಕೋರ್ಟಿಗೆ ಹಾಜರಾಗುವಂತೆ ಸೂಚಿಸಿದ್ದರು.

ಇಂದು ಇಬ್ಬರು ಕಾರಣಾಂತರಗಳಿಂದ ಕೋರ್ಟಿಗೆ ಹಾಜರಾಗಲಿಲ್ಲ. ನಾನೇ ವಕಾಲತ್ತು ಹಾಕಿದ್ದೇನೆ ಎಂದರು. ಕಾಯ್ದೆ ಹಾಕಬೇಕಾದರೆ ಯಾವುದೇ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿರಬೇಕು. ಆದರೆ ಇಲ್ಲಿ ಇಬ್ಬರು ಯಾವುದೇ ಶಿಕ್ಷೆಗೆ ಗುರಿಯಾಗಿಲ್ಲ. ಬದಲಾಗಿ ಇಬ್ಬರ ಮೇಲೆ ಇದ್ದ ಪ್ರಕರಣಗಳನ್ನು ನ್ಯಾಯಾಲಯವೇ ಖುಲಾಸೆಗೊಳಿಸಿತ್ತು. ಇದೀಗ ಸರ್ಕಾರಕ್ಕೆ ಲೆಕ್ಕ ತೋರಿಸುವುದಕ್ಕಾಗಿ ಕಮ್ಯುನಲ್ ಗೂಂಡಾ ಪ್ರಕರಣ ದಾಖಲಿಸಿ ಹಿಂದೂ ಸಂಘಟನೆ ಪ್ರಮುಖರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇಬ್ಬರನ್ನು ಈ ರೀತಿ ಹತ್ತಿಕ್ಕಿದರೆ ಮುಂದೆ ಯಾರೂ ಈ ರೀತಿಯ ಹೋರಾಟಗಳಿಗೆ ಮುಂದೆ ಬರುವುದಿಲ್ಲ ಎನ್ನುವ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ ಎಂದರು.

ಇನ್ನು ಈ ಇಬ್ಬರು ಅಲ್ಲದೆ ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಅಜೀಂ ಬೇಗ್, ಕುಶಾಲನಗರ ಠಾಣಾ ವ್ಯಾಪ್ತಿಯ ನವೀನ್ ಕುಮಾರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಂಗೇರಿಯ ಅಬ್ದುಲ್ ಸಲಾಂ ಈ ಮೂವರನ್ನು ಕೂಡ ಗೂಂಡಾ ಕಾಯ್ದೆ ಪ್ರಕರಣದ ಅಡಿಯಲ್ಲಿ ಕೋರ್ಟಿಗೆ ಹಾಜರು ಪಡಿಸಲಾಗಿತ್ತು. ಇವರು ಕೂಡ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಅಲ್ಲದೆ ಕಮ್ಯೂನಲ್ ಗಲಾಟೆಗಳಲ್ಲಿ ಭಾಗಿಯಾಗುತ್ತಿದ್ದರು ಎನ್ನುವ ಹಿನ್ನೆಲೆಯಲ್ಲಿ ಮೂವರ ಮೇಲೂ ಕಮ್ಯೂನಲ್ ಗೂಂಡಾ ಕಾಯ್ಕೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

Chitradurga:ಎಗ್ಗಿಲ್ಲದೇ ನಡೆಯುತ್ತಿದೆ ಮಣ್ಣು ಗಣಿಗಾರಿಕೆ, ಬ್ರೇಕ್ ಹಾಕುವಂತೆ ಸ್ಥಳೀಯರಿಂದ

ಸದ್ಯ ಇವರ ವಿಚಾರಣೆಯನ್ನು ನಡೆಸಿರುವ ಎ.ಸಿ. ಕೋರ್ಟ್ ಎಲ್ಲಾ ಐದು ಜನರ ಮೇಲಿನ ಪ್ರಕರಣದ ವಿಚಾರಣೆಯನ್ನು ಇದೇ ಫೆಬ್ರವರಿ 7 ಕ್ಕೆ ಮುಂದೂಡಿದೆ. ಮತ್ತೊಂದೆಡೆ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿದೇಶಿಗರು 45 ಸಾವಿರ ಕೊಟ್ರೆ ಭಾರತೀಯ ನಕಲಿ ದಾಖಲೆ ಸೃಷ್ಟಿ: ಅಕ್ರಮ ನುಸುಳುಕೋರರಿಗೆ ರಹದಾರಿ

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣವನ್ನು ವಾಪಸ್ ಪಡೆಯದಿದ್ದರೆ ತೀವ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಪ್ರತಿಭಟನಾಕರರು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್ ಸೇರಿದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಒಟ್ಟಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ಪೊಲೀಸ್ ಇಲಾಖೆ ಕಮ್ಯೂನಲ್ ಗೂಂಡಾ ಕಾಯ್ದೆ ಹಾಕಿದೆ. 

Follow Us:
Download App:
  • android
  • ios