ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಚಿಕ್ಕಮಗಳೂರಿಗೆ ಕಾಲಿಟ್ಟ ಅಭಿಮನ್ಯು ನೇತೃತ್ವದ ತಂಡ
ಅಭಿಮನ್ಯು ನೇತೃತ್ವದಲ್ಲಿ ಆನೆಗಳನ್ನು ಕಾಡಿಗಟ್ಟಲು ಪ್ಲಾನ್. ಚಿಕ್ಕಮಗಳೂರು ಬಳಿಯ ಮತ್ತಾವರಕ್ಕೆ ಬಂದಿಳಿದ ಸಾಕಾನೆಗಳು. ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಧನಂಜಯ, ಅಶ್ವತ್ಥಾಮ, ಸುಗ್ರೀವ ಸೇರಿ 8 ಆನೆಗಳು ನಾಗರಹೊಳೆ ಹಾಗೂ ಮಡಿಕೇರಿ ದುಬಾರೆಯಿಂದ ಬಂದಿಳಿದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.30): ಚಿಕ್ಕಮಗಳೂರು ನಗರದ ಸಮೀಪಕ್ಕೆ ಬಂದು ಬೀಡುಬಿಟ್ಟಿದ್ದ 30 ಕಾಡಾನೆಗಳ ಹಿಂಡು ಇಂದು ಬೆಳಗಾಗುವಷ್ಟರಲ್ಲಿ ಬಂದ ಮಾರ್ಗವನ್ನೇ ಹಿಡಿದು ಕೆ.ಆರ್.ಪೇಟೆಯ ಪ್ಲಾಂಟೇಷನ್ಗೆ ಮರಳಿದ್ದು, ನಗರದ ಜನರ ಆತಂಕ ದೂರಮಾಡಿವೆ. ಇದರ ಬೆನ್ನಲ್ಲೇ ಆನೆಗಳನ್ನು ಹಿಮ್ಮೆಟ್ಟಿಸಲು 8 ಸಾಕಾನೆಗಳು ಬಂದಿಳಿದಿವೆ.ರಾತ್ರಿ ಇಡೀ ನಗರ ಸಮೀಪದ ಆಂಬರ್ವ್ಯಾಲಿ ವಸತಿ ಶಾಲೆ ಆವರಣದಲ್ಲಿ ಠಿಕಾಣಿ ಹೂಡಿದ್ದ ಆನೆಗಳು ಬೆಳಗಾಗುತ್ತಲೇ ಕೆ.ಆರ್.ಪೇಟೆ ಕಡೆಗೆ ಪಯಣಿಸಲಾರಂಭಿಸಿದವು. ರಾತ್ರಿ ಇಡೀ ಜೀವ ಬಿಗಿ ಹಿಡಿದು ಕಾದಿದ್ದ ಅರಣ್ಯ ಸಿಬ್ಬಂದಿಗಳು ಹಾಗೂ ನಗರದ ಜನತೆ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಅದರ ಬೆನ್ನಲ್ಲೇ ನಿನ್ನೆ ರಜೆ ನೀಡಲಾಗಿದ್ದ ಶಾಲಾ ಕಾಲೇಜುಗಳ ತರಗತಿಗಳು ಬೆಳಗಿನಿಂದಲೇ ಆರಂಭಗೊಂಡವು.
15ನೇ ವಯಸ್ಸಿಗೆ ಸ್ಟಾರ್ ನಟಿ ವಿವಾಹಿತ ದಕ್ಷಿಣದ ಸ್ಟಾರ್ ನಟನ ಜೊತೆ ಸಂಬಂಧ ಹೊಂದಿ ಮದುವೆಗೂ ಮುನ್ನ ತಾಯಿಯಾದ್ರು!
ಮತ್ತಾವರಕ್ಕೆ ಬಂದಿಳಿದ ಸಾಕಾನೆಗಳು :
ಈ ನಡುವೆ ನಾಗರಹೊಳೆ ಮತ್ತು ದುಬಾರೆ ಆನೆ ಶಿಬಿರಗಳಿಂದ ಕುಮ್ಕಿ ಆನೆಗಳಾದ ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಧನಂಜಯ, ಅಶ್ವತ್ಥಾಮ, ಸುಗ್ರೀವ ಸೇರಿ ೮ ಆನೆಗಳು ರಾತ್ರಿಯಿಡೀ ಪ್ರಯಾಣ ಮಾಡಿ ಮಂಗಳವಾರ ಬೆಳಗಿನ ಜಾವ ನಗರ ಹೊರವಲಯದ ಮತ್ತಾವರ ಅರಣ್ಯ ಅತಿಥಿ ಗೃಹದ ಆವರಣಕ್ಕೆ ಬಂದಿಳಿದಿವೆ.ಸಂಜೆ ವರೆಗೆ ಅಲ್ಲಿಯೇ ವಿಶ್ರಾಂತಿ ಪಡೆದ ಸಾಕಾನೆಗಳನ್ನು ಸಂಜೆ ವೇಳೆಗೆ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚಣೆಗೆ ಬಳಸಿಕೊಳ್ಳಲು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ನಿರ್ಧರಿಸಿವೆ.ಕಾಲರ್ ಧರಿಸಿರುವ ಬೀಟಮ್ಮ ಮತ್ತು ಭೀಮ ಆನೆಗಳ ಜೊತೆ 30 ಆನೆಗಳು ಈಗ ಕೆ.ಆರ್.ಪೇಟೆಯ ನೀಲಗಿರಿ ಪ್ಲಾಂಟೇಷನ್ನಲ್ಲಿ ತಂಗಿದ್ದು, ಹಿಮ್ಮೆಟ್ಟಿಸುವ ಕಾರ್ಯಾಚರಣೆಗೆ ಸಾಕಾನೆಗಳ ಜೊತೆಗೆ 100 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸಜ್ಜಾಗಿದ್ದಾರೆ.
ಸೂಪರ್ ಸ್ಟಾರ್ ಜತೆ ಡೇಟಿಂಗ್‌ನಲ್ಲಿದ್ದು ಬ್ರೇಕಪ್ ಬಳಿಕ ಅದೇ ನಟನ ಕುಟುಂಬ ವೈದ್ಯನನ್ನು ಮದುವೆಯಾದ ಸ್ಟಾರ್ ನಟಿ
ಬೆಳೆ ನಾಶ, ಜೀವ ಭಯದಲ್ಲಿ ಗ್ರಾಮಸ್ಥರು
ಇತ್ತ ಕಾಡಾನೆಗಳ ಹಿಂಡು ಮತ್ತೆ ಕೆ.ಆರ್.ಪೇಟೆ ಸಮೀಪ ಬಂದಿರುವುದರಿಂದ ಸುತ್ತ ಮುತ್ತಲಿನ ಎಂಟತ್ತು ಗ್ರಾಮದ ಜನರು ಮತ್ತೆ ಭೀತಿಗೆ ಒಳಗಾಗಿದ್ದಾರೆ. ಎರಡು ದಿನಗಳ ಕಾಲ ಅಲ್ಲೇ ಬೀಡುಬಿಟ್ಟು ಸಾಕಷ್ಟು ಬೆಳೆ ನಾಶಪಡಿಸಿ, ಜೀವ ಭಯ ಉಂಟು ಮಾಡಿದ್ದ ಆನೆಗಳು ಮರಳಿ ಬಂದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕೂಡಲೇ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.ನಾಲ್ಕು ದಿನಗಳ ಕಾಲ ಆನೆಗಳು ಇಲ್ಲೇ ಅಡ್ಡಾಡಿಕೊಂಡಿರುವುದರಿಂದ ಅವರಕ್ಕೆ ಮೇವಿನ ಕೊರತೆ ಕಾಡಬಹುದು. ಇದರಿಂದ ಇನ್ನಷ್ಟು ಅನಾಹುತಗಳಿಗೆ ಕಾರಣವಾಗ ಬಹುದು. ಅದಕ್ಕೆ ಅವಕಾಶ ಕೊಡದೆ ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.