ಅಂಬೇಡ್ಕರ್ ಸೋಲಿಸಿದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ
ಮಹಾರಾಷ್ಟ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷವನ್ನು ಈಗ ದಲಿತರು ತ್ಯಜಿಸಬೇಕು ಎಂದು ಬಿಜೆಪಿ ಮುಖಂಡ ಎಸ್. ಮಹದೇವಯ್ಯ ಕರೆ ನೀಡಿದರು.
ಮೈಸೂರು : ಮಹಾರಾಷ್ಟ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷವನ್ನು ಈಗ ದಲಿತರು ತ್ಯಜಿಸಬೇಕು ಎಂದು ಬಿಜೆಪಿ ಮುಖಂಡ ಎಸ್. ಮಹದೇವಯ್ಯ ಕರೆ ನೀಡಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಅಬೇಡ್ಕರ್ ಅವರನ್ನು ಹೇಗೆ ನಡೆಸಿಕೊಂಡರು ಎಂಬುದು ಗೊತ್ತಿದೆ. ಅವರು ಎಷ್ಟುಕಷ್ಟಪಟ್ಟರು ಎಂಬುದುರ ಅರಿವಿದೆ. ಅವರ ಬದುಕಿದ್ದಾಗ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಈಗ ಆ ಮಹಾನಾಯಕನೇ ನಮ್ಮವರು ಎಂದು ಹೆಸರನ್ನು ಬಳಸಿಕೊಂಡು, ಮತಬ್ಯಾಂಕ್ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಈಗ ಕಾಂಗ್ರೆಸ್ ಮುಖಂಡರು ಸುಳ್ಳ ಹೇಳಿಕೊಂಡು ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಸಮುದಾಯ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ನೀಡಬಾರದರು. ಮೀಸಲಾತಿ ಹೆಚ್ಚಿಸುವುದಾಗಿ ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದರು. ಆದರೆ, ಅದನ್ನು ಕಾರ್ಯ ರೂಪಕ್ಕೆ ತಂದು ಮೀಸಲಾತಿ ಹೆಚ್ಚಿಸಿದು ಬಿಜೆಪಿ ಸರ್ಕಾರ. ಕಾಂಗ್ರೆಸ್‌ನಿಂದ ದಲಿತ ಸಮುದಾಯದ ಉದ್ಧಾರ ಆಗುವುದಿಲ್ಲ. 75 ಯೂನಿಯನ್ ವಿದ್ಯುತ್ ಅನ್ನು ದಲಿತ ಸಮುದಾಯಕ್ಕೆ ಉಚಿತವಾಗಿ ನೀಡುತ್ತಿರುವುದು ಬಿಜೆಪಿ. ನಮ್ಮ ಸರ್ಕಾರದ ಸಾಧನೆ ಯೋಜನೆ ಮತ್ತು ನಾಯಕತ್ವನ್ನು ಒಪ್ಪಿ ಕಾಂಗ್ರೆಸ್‌ಗೆ ಬುದ್ದಿ ಕಲಿಸಬೇಕು. ಅಂಬೇಡ್ಕರ್ ಅವರನ್ನು ಕೆಟ್ಟಾದಾಗಿ ನೋಡಿಕೊಂಡಿರುವ ಪಕ್ಷಕ್ಕೆ ಬುದ್ದಿ ಕಲಿಸಲೇಬೇಕು ಎಂದು ಅವರು ಆಗ್ರಹಿಸಿದರು.
ಇಂದಿಗೂ ಎಲ್ಲಾ ಸಮುದಾಯವನ್ನು ಸಮಾನವಾಗಿ ನೋಡಿಕೊಳ್ಳುತ್ತಿರುವ ಪಕ್ಷ ಎಂದರೆ ಬಿಜೆಪಿ ಮಾತ್ರ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಮೇಯರ್ ಶಿವಕುಮಾರ್, ಬಿಜೆಪಿ ನಗರ ಕಾರ್ಯದರ್ಶಿ ಸೋಮಸುಂದರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ನಾಗೇಶ್, ವಸಂತ್‌ಕುಮಾರ್ ಇದ್ದರು.
ಸಮಸ್ಯೆ ನಿವಾರಣೆಗೆ ಕಾಂಗ್ರೆಸ್ ಬದ್ಧ
ಪಾವಗಡ : ಪಾವಗಡದ ವಿವಿಧ ವಲಯಗಳ ಕಾರ್ಮಿಕರ ಸಮಸ್ಯೆ ನಿವಾರಣೆಗೆ ಬದ್ಧರಾಗಿದ್ದು, ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಇಲ್ಲಿನ ವಿಧಾನ ಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್ ಮನವಿ ಮಾಡಿದರು.
ಬುಧವಾರ ತಂದೆ ಶಾಸಕ ವೆಂಕಟರಮಣಪ್ಪ ಹಾಗೂ ತಾಲೂಕು ಕೈಪಡೆ ಅಧ್ಯಕ್ಷ ಸುದೇಶ್‌ಬಾಬು ಅವರ ಸಮ್ಮುಖದಲ್ಲಿ ನಗರದ ಆಟೋಚಾಲಕರು, ಬಸ್ಟ್ಯಾಂಡ್ ಹಮಾಲಿ ಕಾರ್ಪೆಂಟರ್ಸ್ ಹಾಗೂ ಇತರೆ ಬಡವಾಣೆಗಳ ಸಾವಿರಾರು ಮಂದಿ ಕಾರ್ಮಿಕರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ಬಳಿಕ ಅವರು ಮಾತನಾಡಿದರು. ಆಟೋ ಕಾರ್ಪೆಂಟರ್ ಹಮಾಲಿ ಇತರೆ ವಲಯಗಳ ಕಾರ್ಮಿಕರು ತಮ್ಮ ಸಮಸ್ಯೆ ತಿಳಿಸಿದ್ದು, ನಿಮ್ಮ ಸಮಸ್ಯೆ ನಿವಾರಣೆಗೆ ಬದ್ದನಾಗಿದ್ದೇನೆ. ಕಾರ್ಮಿಕರ ಸಹಕಾರಕ್ಕೆ ಋುಣಿಯಾಗಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಪರಿಪ್ರಮಾಣದಕ್ಕೆ ಕಾಂಗ್ರೆಸ್ ಸೇರ್ಪಡೆ ಸಂತಸ ತಂದಿದೆ. ನಮ್ಮ ತಂದೆ ಶಾಸಕ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವೆ. ಮೇ 10ರ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಕಾಂಗ್ರೆಸ್ ಗೆಲುವಿಗೆ ಸಹಕರಿವಂತೆ ಕೈಜೋಡಿಸಿ ಕಾರ್ಮಿಕರಲ್ಲಿ ವಿನಂತಿಸಿಕೊಂಡರು.
ಇದೇ ವೇಳೆ ತಾಲೂಕಿನ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರು ಮೆಕ್ಯಾನಿಕ್ ಆಯೋಸಿಯೇಷನ್ ಕೂರಚ ಇತರೆ ಸಮುದಾಯದ ಮುಖಂಡರು ಚುನಾವಣಾ ಪೂರ್ವ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್ ಅವರಿಗೆ ಬೆಂಬಲ ಘೋಷಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸುವುದಾಗಿ ಹೇಳಿದರು.
ಇದೇ ವೇಳೆ ಮುಖಂಡರಾದ ತಾಲೂಕಿನ ಅಚ್ಚಮ್ಮನಹಳ್ಳಿ ಗ್ರಾಮದ ಮಂಜುನಾಥ್, ದವಡಬೆಟ್ಟಮಾರಪ್ಪ, ಮದ್ದೇಟಪ್ಪ, ಆರ್.ಹೊಸಕೋಟೆ ಅಂಜಿ, ಮೇಗಲಪಾಳ್ಯ ಹಾಗೂ ಬೂದಿಬೆಟ್ಟಗ್ರಾಮದ ನೂರಾರು ಮಂದಿ ಕಾರ್ಯಕರ್ತರು ಸೇರಿ ನಗರದ ಕೊರಚ ಸಮುದಾಯದ 40ಕ್ಕಿಂತ ಹೆಚ್ಚು ಮಂದಿ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಈ ವೇಳೆ ತಾಲೂಕು ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಾಂಜಿನಪ್ಪ, ಪುರಸಭೆ ಸದಸ್ಯರಾದ ಪಿ.ಎಚ್.ರಾಜೇಶ್, ಮಹಮ್ಮದ್ ಇಮ್ರಾನ್, ತೆಂಗಿನಕಾಯಿ ರವಿ, ತಾಪಂ ಉಪಾಧ್ಯಕ್ಷ ಐ.ಜಿ.ನಾಗರಾಜ್, ಮುಖಂಡ ಆರ್.ಎ.ಹನುಮಂತರಾಯಪ್ಪ, ಎನ್.ಹೊಸಹಳ್ಳಿ ಮಂಜುನಾಥ್, ಸೇರಿದಂತೆ ನಗರದ ಆಟೋ ಚಾಲಕರ ಸಂಘದ ಬೇಕರಿ ನಾಗರಾಜ್, ಆಟೋ ಚಾಲಕರ ಸಂಘದ ಉಪಾಧ್ಯಕ್ಷ, ಸದಸ್ಯರು ಸೇರಿ ತಾಲೂಕು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿದ್ದರು.