ರೈಲ್ವೆ ಆಸ್ತಿ ಖಾಸಗೀಕರಣ ಕೈಬಿಡಿ; AIRF ಪ್ರಧಾನ ಕಾರ್ಯದರ್ಶಿ ಮಿಶ್ರಾ ಒತ್ತಾಯ

  • ರೈಲ್ವೆ ಆಸ್ತಿ ಖಾಸಗೀಕರಣ ಕೈಬಿಡಿ
  • ಎಐಆರ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ ಮಿಶ್ರಾ ಒತ್ತಾಯ
Abandon privatization of railway assets AIRF shivagopala mishra

ಹುಬ್ಬಳ್ಳಿ (ಅ.11) : ರೈಲ್ವೆ ನೌಕರರಿಗೆ ಹೊಸ ಪಿಂಚಣಿ ಯೋಜನೆ ಮುಂದುವರಿಸಬೇಕು. ನೌಕರರ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಕೂಡಲೇ ರೈಲ್ವೆ ಆಸ್ತಿಗಳ ಖಾಸಗೀಕರಣ ಕೈಬಿಡಬೇಕು ಎಂದು ಅಖಿಲ ಭಾರತೀಯ ರೈಲ್ವೆಮೆನ್ಸ್‌ ಫೆಡರೇಷನ್‌(ಎಐಆರ್‌ಎಫ್‌)ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ ಮಿಶ್ರಾ ಒತ್ತಾಯಿಸಿದರು.

Chikkamagaluru: ವಿದ್ಯುತ್‌ ಖಾಸಗೀಕರಣ ಕೈಬಿಡಲು ಆಗ್ರಹ

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಣಕಾಸು ಸಚಿವರು ಶೇ. 26 ರಷ್ಟುರೈಲ್ವೆ ಆಸ್ತಿಯನ್ನು ಖಾಸಗೀಕರಣ ಮಾಡಲಾಗುವುದು ಎಂದು ಕಳೆದ ಬಜೆಟ್‌ ಮಂಡನೆ ವೇಳೆ ತಿಳಿಸಿದ್ದರು. ಸರ್ಕಾರ ಹಂತ-ಹಂತವಾಗಿ ಖಾಸಗೀಕರಣ ಮಾಡಲು ಹುನ್ನಾರ ನಡೆಸುತ್ತಿದೆ. ಆದರೆ, ವಿರೋಧದಿಂದ ಅದು ಸಾಧ್ಯವಾಗಿಲ್ಲ. ಈ ನಿರ್ಧಾರವನ್ನು ಕೂಡಲೇ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಕೋವಿಡ್‌ ಲಾಕ್‌ಡೌನ್‌ ವೇಳೆ ರೈಲ್ವೆ ಒಂದೇ ಸಾರಿಗೆ ಇತ್ತು. ಆತಂಕದಲ್ಲಿಯೇ ರೈಲ್ವೆ ನೌಕರರು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಔಷಧ, ಆಹಾರ, ವೈದ್ಯಕೀಯ ಆಮ್ಲಜನಕ ಸೇರಿ ಅಗತ್ಯ ವಸ್ತು ಸಾಗಣೆ ಮಾಡಲಾಯಿತು. ಪ್ರತಿ ದಿನ 11,500ಕ್ಕೂ ಹೆಚ್ಚು ಗೂಡ್‌್ಸ ರೈಲುಗಳು ಸಂಚರಿಸಿವೆ. ಕೋವಿಡ್‌ನಿಂದ 3 ಸಾವಿರಕ್ಕೂ ಹೆಚ್ಚು ನೌಕರರು ಮೃತರಾಗಿದ್ದಾರೆ. ಪ್ರತಿ ವರ್ಷ 400ಕ್ಕೂ ಹೆಚ್ಚು ರೈಲ್ವೆ ನೌಕರರು ಕೆಲಸದಲ್ಲಿಯೇ ಮೃತರಾಗುತ್ತಿದ್ದು, ರೈಲ್ವೆ ನೌಕರರಿಗೆ ಸಾಮಾಜಿಕ ಭದ್ರತೆ ಇಲ್ಲವಾಗಿದೆ ಎಂದು ಆರೋಪಿಸಿದರು.

ರೈಲ್ವೆ ಇಲಾಖೆಯಲ್ಲಿರುವ ಡಿ ಹಾಗೂ ಸಿ ಗ್ರೂಪ್‌ ಹುದ್ದೆ ಹೆಚ್ಚಿಸುವಂತೆ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇರುವ ನೌಕರರಿಗೆ ಕೆಲಸದ ಹೊರೆ ಹೆಚ್ಚಾಗಿದೆ. ನೌಕರರಿಗೆ ತುಟ್ಟಿಭತ್ಯೆಯನ್ನೂ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಏಜೆನ್ಸಿಗಳ ಮೂಲಕ ರೈಲ್ವೆ ನೌಕರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅವರಿಗೆ ಖಾಯಂ ನೌಕರರಿಗಿಂತ ಶೇ. 50ರಷ್ಟುಕಡಿಮೆ ವೇತನ ನೀಡಲಾಗುತ್ತಿದೆ. ಇದು ಸುಪ್ರೀಂಕೋರ್ಚ್‌ ತೀರ್ಪಿನ ಉಲ್ಲಂಘನೆಯಾಗಿದೆ. ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ವೇತನ ಕಲ್ಪಿಸಬೇಕು. ರೈಲ್ವೆ ನೌಕರರಿಗೆ ಸುಸಜ್ಜಿತ ವಸತಿ ಸಮುಚ್ಚಯ ನಿರ್ಮಿಸಬೇಕು. ಸಂಘದ ಬೇಡಿಕೆ ಈಡೇರಿಸದಿದ್ದರೆ ದೇಶಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.

ಧಾರವಾಡ: ವರುಣನ ಆರ್ಭಟಕ್ಕೆ ನೀರು ಪಾಲಾದ ಬೆಳೆ: ಕಣ್ಣೀರಿಟ್ಟ ಅನ್ನದಾತ..!...

ನೈಋುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಡಾ. ಎ.ಎಂ. ಡಿಕ್ರೂಜ್‌ ಮಾತನಾಡಿ, ನೈಋುತ್ಯ ರೈಲ್ವೆಯಲ್ಲಿ ಖಾಲಿ ಇರುವ 7 ಸಾವಿರ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 3.50 ಲಕ್ಷ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು. ರೈಲ್ವೆ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಚಿಕಿತ್ಸೆ, ಔಷಧ ಸಿಗುತ್ತಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳು ಗಮನಹರಿಸಿ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

Latest Videos
Follow Us:
Download App:
  • android
  • ios