ಬೆಂಗಳೂರು (ಸೆ.18): ಬೆಂಗಳೂರಿನಲ್ಲಿ ಇನ್ಮುಂದೆ ಆಧಾರ್ ನೋಂದಣಿ ಮಾಡುವುದು ಅತ್ಯಂತ ಸುಲಭ. ಇನ್ಮುಂದೆ ಈ ಬಗ್ಗೆ ಹೆಚ್ಚು ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ. 

UIDAI ನ ಆಧಾರ್ ಸೇವಾ ಕೇಂದ್ರ ಗಾಂಧಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಆಧಾರ್ ನೋಂದಣಿ, ವಿಳಾಸ ಅಪ್ಡೇಟ್, ಭಾವಚಿತ್ರ, ಬಯೋಮೆಟ್ರಿಕ್ ಅಪ್ಡೇಟ್, ಮೊಬೈಲ್, ಇ ಮೇಲೆ ಅಪ್ಡೇಟ್, ಹೆಸರು, ಲಿಂಗ, ಜನ್ಮ ದಿನಾಂಕ ಅಪ್ಡೇಟ್ ಮಾಡಲಾಗುತ್ತದೆ. 

ಗ್ರ್ಯಾಂಡ್ ಮೆಜೆಸ್ಟಿಕ್ ಮಾಲ್, ಕೆಳ ಮಹಡಿ. 2ನೇ ಅಡ್ಡರಸ್ತೆ, ಎಸ್‌ ಸಿ ರಸ್ತೆ, ಗಾಂಧಿ ನಗರ, ಬೆಂಗಳೂರು, ಕರ್ನಾಟಕ - 560009 ಈ ವಿಳಾಸದಲ್ಲಿ ಆಧಾರ್ ನೋಂದಣಿ ಮಾಡಲಾಗುತ್ತದೆ. 

*ಆಧಾರ್ ನೋಂದಣಿ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ ಉಚಿತವಾಗಿ ಮಾಡಲಾಗುತ್ತದೆ.
*ಇತರ ಬಯೋಮೆಟ್ರಿಕ್ ಅಪ್ಡೇಟ್  100 ರು.
*ಡೆಮೋಗ್ರಾಫಿಕ್ ಅಪ್ಡೇಟ್ 50 ರು.
*5 ಮತ್ತು 15 ವಯಸ್ಸಿನ  ನಂತರ ನಿಮ್ಮ ಮಗುವಿನ ಬಯೋಮೆಟ್ರಿಕ್ಸ್ ಅಪ್ಡೇಟ್ ಮಾಡಸಬಹುದು.
*ಆಧಾರ್‌ನಲ್ಲಿ ಮೊಬೈಲ್ ನಂಬರ್ ಸೇರಿಸಲು ಮರೆಯದಿರಿ.

ಆಧಾರ್‌ ಸಂಖ್ಯೆ ನೀಡಿದ 10 ನಿಮಿಷದಲ್ಲಿ ಪಾನ್‌ ಕಾರ್ಡ್ .

ಆಧಾರ್ ವ್ಯವಸ್ಥೆಗೆ ಶ್ಲಾಘನೆ 

ಈ ಹಿಂದೆ ಬಿಲ್ ಆಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್‌ನ ಸಂಸ್ಥಾಪಕ ಬಿಲ್‌ ಗೇಟ್ಸ್‌ ಮತ್ತೊಮ್ಮೆ ಭಾರತದ 'ಆಧಾರ್' ಸಿಸ್ಟಮ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು ಆಧಾರ್ ಹಾಗೂ NPCI ಡಿಜಿಟಲ್ ಆರ್ಥಿಕ ಪ್ರಣಾಳಿಕೆ ಮತ್ತೊಮ್ಮೆ ಲಾಭದಾಯಕ ಎಂದು ಸಾಬೀತಾಗಿದೆ ಎಂದಿದ್ದರು. 

1 ಲಕ್ಷ ಭಾರತೀಯರ ಆಧಾರ್‌, ಪಾನ್‌ ದಾಖಲೆ ಸೇಲ್‌ಗಿಟ್ಟ ನಟ! ...

 ಈ ಹಿಂದೆಯೂ ಒಂದು ಬಾರಿ ಅವರು ಆಧಾರ್ ತಂತ್ರಜ್ಞಾನ ಕುರಿತು ಮಚ್ಚುಗೆ ವ್ಯಕ್ತಪಡಿಸುತ್ತಾ ಇದರಿಂದ ಗೌಪ್ಯತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು.

ಡಿಜಿಟಲ್ ಮಾಧ್ಯಮದ ಮೂಲಕ ವ್ಯವಹಾರ ನಡೆಸುವುದೇ ಒಂದು ಅದ್ಭುತ. ಭಾರತ ಯಾವ ಮಟ್ಟದಿಂದ ಅಳವಡಿಸಿಕೊಂಡಿದೆಯೋ ಅದು ಇನ್ಯಾವ ರಾಷ್ಟ್ರದಲ್ಲೂ ನೋಡಲು ಸಿಗುವುದಿಲ್ಲ. ಭಾರತ ತನ್ನ ಡಿಜಿಟಲ್ ವ್ಯವಹಾರ ಕ್ಷಮತೆಗಳ ಬಳಸಿಕೊಳ್ಳಲು ಸಶಕ್ತವಾಗಿತ್ತು. ಅಲ್ಲಿ ಆಧಾರ್ ಹಾಗೂ  NPCI ಪಾವತಿ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎದು ಅವರು ತಿಳಿಸಿದ್ದಾರೆ.

 ಈ ಸ್ಕೀಂ ಇತರ ದೇಶಗಳೂ ಅಳವಡಿಸಿಕೊಳ್ಳಬೇಕು

 ಈ ಹಿಂದೆ 2018 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲೂ ಮಾತನಾಡಿದ್ದ ಬಿಲ್ ಗೇಟ್ಸ್ ಆಧಾರ್ ವ್ಯವಸ್ಥೆ ಕುರಿತು ಶ್ಲಾಘಿಸಿದ್ದರು. ಈ ಆಧಾರ್ ತಂತ್ರಜ್ಞಾನದಲ್ಲಿ ಗೌಪ್ಯತೆ ಇದೆ. ಹೀಗಾಗಿ ಡೇಟಾ ಲೀಕ್ ಆಗುತ್ತದೆ ಎಂಬ ಭಯವಿಲ್ಲ ಎಂದಿದ್ದರು. ಅಲ್ಲದೇ ಈ ಸೌಲಭ್ಯ ಅಳವಡಿಸಿಕೊಳ್ಳಲು ಯೋಗ್ಯವಾದದ್ದು ಹೀಗಾಗಿ ಬಿಲ್ ಆಂಡ್ ಮಿಲಿಂಡಾ ಫೌಂಡೇಷನ್ ಇತರ ದೇಶಗಳಿಗೂ ಈ ಸೌಲಭ್ಯ ಕಲ್ಪಿಸಲು ದೇಣಿಗೆ ನೀಡಿತ್ತು ಎಂದಿದ್ದರು.